ಕಾರವಾರ(Karwar) : ಇ ಸಮಾಚಾರದಲ್ಲಿ ಸುದ್ದಿ ಪ್ರಕಟವಾದ ತಕ್ಷಣ ನಗರಸಭೆ ಏಚ್ಚೆತ್ತುಕೊಂಡಿದೆ. ನಗರದ ಬೈತಕೋಲ್ ನಲ್ಲಿ ರಾಶಿರಾಶಿ ಬಿದ್ದ ಕಸವನ್ನ ನಗರಸಭೆ ಸಿಬ್ಬಂದಿಗಳು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ.
ಇಂದಿನಿಂದ ಎರಡು ದಿನಗಳು ಶ್ರೀ ಭೂದೇವಿ ಜಾತ್ರೆ ಇದೆ. ಹೀಗಾಗಿ ವಾರ್ಡ್ ನಲ್ಲಿ ಬಿದ್ದಿರುವ ಕಸ ಸ್ವಚ್ಛಗೊಳಿಸುವಂತೆ ಕಾರವಾರ ನಗರಸಭೆಗೆ ಸದಸ್ಯರು ಮನವಿ ಮಾಡಿದ್ದರು. ಆದರೂ ಸಂಬಂಧಪಟ್ಟವರು ನಿರ್ಲಕ್ಷ್ಯ ಮಾಡಿದ್ದರಿಂದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಇ ಸಮಾಚಾರದಲ್ಲಿ ಸ್ಥಳೀಯ ನಿವಾಸಿಗಳ ಅಸಮಾಧಾನ ಬಗ್ಗೆ ವರದಿಯಾಗಿತ್ತು.
ಸುದ್ದಿ ಪ್ರಕಟವಾದ ತಕ್ಷಣ ಕ್ಷೀಪ್ರವಾಗಿ ಸ್ಪಂದಿಸಿರುವ ನಗರಸಭೆ ಸಿಬ್ಬಂದಿಗಳು ಧಾವಿಸಿದ್ದಾರೆ. ಅಲ್ಲದೇ ಈ ಭಾಗದ ಜನರ ವಿಶ್ವಾಸ ಗಳಿಸಿಕೊಂಡಂತಾಗಿದೆ. ಜಾತ್ರೆಗೆ ಬರುವ ಭಕ್ತರು, ನಾಗರಿಕರು ಬೈತಕೋಲ್ ಜಾತ್ರೆಯ ಸಂಭ್ರಮ ಅನುಭವಿಸುವಂತಾಗಿದೆ. ಇನ್ನೂ ಮುಂದಾದರೂ ನಗರಸಭೆ ಅಧಿಕಾರಿಗಳು ಸಾರ್ವಜನಿಕರ ಮನವಿಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡಬೇಕಾಗಿದೆ.
ಇದನ್ನು ಓದಿ : ಕಾರವಾರ ನಗರಸಭೆ ನಿರ್ಲಕ್ಷ್ಯ. ಜಾತ್ರೆ ಇದ್ದರೂ ವಾರ್ಡ್ ಕ್ಲೀನ್ ಮಾಡದೇ ನಿರ್ಲಿಪ್ತ.
ಭಟ್ಕಳದಲ್ಲಿ ಹಿಂದೂಗಳ ವಿರಾಟ್ ದರ್ಶನ.