ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಮೊನ್ನೆಮೊನ್ನೆಯಷ್ಟೆ ಅಂಕೋಲಾದ ಹಾರವಾಡದಲ್ಲಿ(Ankola Harwad) ರಾಶಿ ರಾಶಿಯಾಗಿ ಮೀನುಗಳು(Full Fishes) ಕಡಲತೀರಕ್ಕೆ ಬಂದಿರುವ ಬೆನ್ನಲ್ಲೆ ಕಾರವಾರ ತಾಲೂಕಿನ ದೇವಬಾಗ ಸಮುದ್ರ ತೀರದಲ್ಲಿ(Devabhag Beach) ಮಂಗಳವಾರ ಬಾರೀ ಪ್ರಮಾಣದ ಮೀನುಗಳು ಬಂದಿವೆ. ಮೀನುಗಳನ್ನ ನೋಡಿ ಸ್ಥಳೀಯರು ಖುಷಿಪಟ್ಟರು.
ಸಮುದ್ರದ ವಾತಾವರಣದಲ್ಲಿ ವ್ಯತ್ಯಾಸ ಆಗಿದ್ದರಿಂದ ತಾರ್ಲೆ(ತೋರಿ, ಭೂತಾಯಿ, ಬಾಯ್ಗೆ) ಮೀನುಗಳು ದಡದತ್ತ ಬಂದಿವೆ. ಮೀನು ಬಂದಿರುವ ದೃಶ್ಯವನ್ನು ಗಮನಿಸಿದ ಗ್ರಾಮಸ್ಥರು ತಕ್ಷಣವೇ ಬಲೆ, ಬುಟ್ಟಿ, ಬಟ್ಟೆ ಸೇರಿದಂತೆ ಕೈಯಲ್ಲಿ ಸಿಕ್ಕಿದ್ದನೆಲ್ಲ ತೆಗೆದುಕೊಂಡು ಓಡಿದ್ದಾರೆ. ಸಿಕ್ಕಷ್ಟು ಮೀನುಗಳನ್ನು ಬಾಚಿ ಸಂಗ್ರಹಿಸಲು ಮುಂದಾದರು. ಕೆಲವರು ನೇರವಾಗಿ ಕೈಯಿಂದಲೇ ಮೀನು ಹಿಡಿದು ಖುಷಿಯಿಂದ ಮನೆ ಕಡೆ ಮರಳಿದರು.
ಇಂದು ಬೆಳಿಗ್ಗೆ ದೇವಭಾಗ ಸಮುದ್ರ ತೀರದಲ್ಲಿ(Devabhag beach) ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕೆಲವೇ ಗಂಟೆಗಳಲ್ಲಿ ಬಂದವರೆಲ್ಲ ಮೀನುಗಳನ್ನು(Fishes) ಬಾಚಿಕೊಂಡರು. ಮನೆ ಬಳಕೆಗೆ ಮಾರಾಟಕ್ಕೂ ತೆಗೆದುಕೊಂಡು ಹೋದರು.
ಕಳೆದ ಕೆಲವು ದಿನಗಳ ಹಿಂದೆ ಅಂಕೋಲಾ ತಾಲೂಕಿನ ಹಾರವಾಡ ಗಾಬೀತವಾಡ(Harwad Gabitwad) ಪ್ರದೇಶದಲ್ಲಿಯೂ ಕೂಡ ಇದೇ ರೀತಿಯ ಮೀನುಗಳು ಬಂದಿದ್ದವು. ಮೀನುಗಳನ್ನು ಸಂಗ್ರಹಿಸಲು ಗ್ರಾಮಸ್ಥರು ಮುಗಿ ಬಿದ್ದಿದ್ದರು.
ಇದನ್ನು ಓದಿ : ದಸರಾ ರಜೆ ಅಕ್ಟೋಬರ್ 18 ರವರೆಗೆ ವಿಸ್ತರಣೆ. ಸಿಎಂ ಮಾಹಿತಿ
ಕುವೈತ್ ದೇಶದಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ ವಂಚಿಸಿದ ಹೊನ್ನಾವರ ಮೂಲದ ಆಸಾಮಿಗಳು.