ದಾಂಡೇಲಿ(DANDELI) : ನಗರದ ಕುಳಗಿ ರಸ್ತೆಯ ಸೇತುವೆಯಿಂದ ಕಾಳಿ ನದಿಗೆ(KALI RIVER) ಜಿಗಿದಿದ್ದ ಮಹಿಳೆಯೋರ್ವಳು ಶವವಾಗಿ ಪತ್ತೆಯಾಗಿದ್ದಾಳೆ.

ದಾಂಡೇಲಿ ತಾಲೂಕಿನ ಕರಿಯಂಪಾಲಿ ಗ್ರಾಮದ ಹತ್ತಿರ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಗಣೇಶನಗರದ ನಿವಾಸಿ   ರೇಖಾ ಶಿವಾನಂದ ಕಂಬಾರಗಣವಿ (41)ಮೃತ ಮಹಿಳೆ. ಬುಧವಾರ ಮಧ್ಯಾಹ್ನ ರೇಖಾ ಮನೆಯಿಂದ ನಾಪತ್ತೆಯಾಗಿದ್ದಳು.  ದಾಂಡೇಲಿ ನಗರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು.

ಕುಳಗಿ ರಸ್ತೆಯ ಸೇತುವೆಯಿಂದ ಜಿಗಿದ ಮಹಿಳೆಯ ಶೋಧ ಕಾರ್ಯ  ನಡೆಸಲಾಗಿತ್ತು. ಇಂದು ಬೆಳಿಗ್ಗೆ ಕರಿಯಂಪಾಲಿ ಗ್ರಾಮದ ಹತ್ತಿರ ನದಿಯಲ್ಲಿ ಮೃತದೇಹ ಇರುವುದನ್ನ  ಸ್ಥಳೀಯರು ನೋಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಕೂಡಲೆ ಸ್ಥಳಕ್ಕೆ ದೌಡಾಯಿಸಿ ಮೃತದೇಹವನ್ನು ಪತ್ತೆ ಹಚ್ಚಿ ನದಿಯಿಂದ ಮೇಲಕ್ಕೆ ತರಲಾಯಿತು.

ವೈಲ್ಡರ್ ನೆಸ್ಟ್,  ಪ್ಲೈ ಕ್ಯಾಚರ್ ಮತ್ತು ಕಾಳಿ ಅಡ್ವೆಂಚರ್ ನವರ ರಾಪ್ಟ್ ಮತ್ತು ನುರಿತ ಸಿಬ್ಬಂದಿಗಳ ತಂಡದ ಜೊತೆಗೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಹಳಿಯಾಳದ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಸ್ಥಳೀಯ ಮುಳುಗು ತಜ್ಞರು ಮಹಿಳೆಯ ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡು ಅಂತಿಮವಾಗಿ ಮಹಿಳೆಯ ಮೃತ ದೇಹವನ್ನು ಪತ್ತೆ ಹಚ್ಚಿ ನದಿಯಿಂದ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ತಹಶೀಲ್ದಾರ್ ಶೈಲೇಶ ಪರಮಾನಂದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳದಲ್ಲಿದ್ದು, ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಇನ್ನೂ ಸ್ಥಳೀಯರು ಕೂಡ ತೆಪ್ಪದ ಮೂಲಕ ಶೋಧ ಕಾರ್ಯದಲ್ಲಿ  ತೊಡಗಿದ್ದರು.