ಭಟ್ಕಳ : ಆಳ ಸಮುದ್ರದಲ್ಲಿ ಬೋಟಿನ ಸ್ಟೇರಿಂಗ್(BOAT STEARING) ಹಿಡಿಯುವ ಕೈಯಲ್ಲಿ ಕಾವ್ಯ ಅರಳಿದೆ. ಸಾಂಸ್ಕೃತಿಕ ನಗರದಲ್ಲಿ ಬಿಡುಗಡೆಯಾಯಿತು ಕಡಲ ಕವಿಯ ಚೊಚ್ಚಲ ಕವನ ಸಂಕಲನ. ಭಟ್ಕಳ ತಾಲೂಕಿನ ಕರಿಕಲ್ ಗ್ರಾಮದ (KARIKAL VILLAGE) ಯುವ ಕವಿ ಶಿವಾನಂದ ಮೊಗೇರ ಅವರ ‘ಕಡಲಾಳದ ಕಾವ್ಯ’ (KADALALADA KAVYA)ಮೈಸೂರಿನಲ್ಲಿ ಲೋಕಾರ್ಪಣೆಗೊಂಡಿತು.
ಮೈಸೂರು(MYSORE) ಕನ್ನಡ ಭವನದಲ್ಲಿ ಅಕ್ಷರನಾದ ಪಬ್ಲಿಕೇಶನ್ಸ್(AKSHARANADA PUBLICATION) ಎ,ಎಸ್, ಟಿ ಆರ್ ಬೆಂಗಳೂರು(BANGLORE), ಅಕ್ಷರನಾದ ಕಲೆ, ಸಾಹಿತ್ಯ, ಸಾಂಸ್ಕೃತಿಕ ವೇದಿಕೆ ಬೆಂಗಳೂರು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಸಾರಥ್ಯದಲ್ಲಿ ‘ಕವಿ ಕಾವ್ಯ ಕಥಾ ಸಂಗಮ’ ಮೊದಲ ಆವೃತಿ-2024ರಲ್ಲಿ 38 ಕೃತಿಗಳ ಲೋಕಾರ್ಪಣೆಯ ಹೃದಯಸ್ಪರ್ಶಿ ಸಮಾರಂಭ ನಡೆಯಿತು.
ಖ್ಯಾತ ಕವಿ, ಸಾಹಿತಿಗಳು, ವಿಮರ್ಶಕರಾದ ಡಾ. ಅರವಿಂದ ಮಾಲಗತ್ತಿ(DR ARAVINDA MALAGATTI) ಮತ್ತು ಮೈಸೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು, ಹಿರಿಯ ಸಾಹಿತಿ ಡಾ. ಶ್ರುತಿ ಮಧುಸೂಧನ್(DR SHRUTI MADUSOODAN) ಅವರ ಸಮ್ಮುಖದಲ್ಲಿ ಭಟ್ಕಳದ ಶಿವಾನಂದ ಮೊಗೇರ(SHIVANAND MOGER) ಅವರ ಮೊದಲ ಕೃತಿ “ಕಡಲಾಳದ ಕಾವ್ಯ”(KADALALADA KAVYA) ಲೋಕಾರ್ಪಣೆಗೊಂಡಿತು
.
ಇದೆ ವೇಳೆ ‘ಅಕ್ಷರನಾದ ಹೆಮ್ಮೆಯ ಕನ್ನಡಿಗ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. “ಕಡಲಾಳದ ಕಾವ್ಯ” ಪುಸ್ತಕಕ್ಕೆ ಮುನ್ನುಡಿಯನ್ನ ಡಾ. ಅನ್ನಪೂರ್ಣ ಹಿರೇಮಠ(DR ANNPOORNA HIREMATH) ಬೆಳಗಾವಿ ಹಾಗೂ ಬೆನ್ನುಡಿಯನ್ನ ಶಿಕ್ಷಕ, ಸಾಹಿತಿ ಲೀಲಾಧರ್ ಎನ್, ಮೊಗೇರ(LEELADHARA MOGER) ಬೆಳ್ಕೆ ಬರೆದಿದ್ದರು. ಅಕ್ಷರನಾದ ಪಬ್ಲಿಕೇಶನ್ಸ್ ಎ, ಎಸ್, ಟಿ,ಆರ್ ಬೆಂಗಳೂರು ಅವರು ಕಡಲಾಳದ ಕಾವ್ಯ ಕೃತಿಯನ್ನು ಸುಂದರವಾಗಿ ಮುದ್ರಿಸಿದ್ದಾರೆ.
ಬಡತನ ನಡುವೆ ಏಳನೇ ತರಗತಿವರೆಗೆ ಮಾತ್ರ ಓದಿದ ಶಿವಾನಂದ ಬಿ ಮೊಗೇರ ಅವರಿಗೆ ಓದುವ ಹುಚ್ಚು. ಓದುತ್ತಾ ಓದುತ್ತಾ ಬರವಣಿಗೆ ರೂಢಿಸಿಕೊಂಡರು. ಕಳೆದ ಐದು ವರ್ಷಗಳಿಂದ ತಮಗಿಷ್ಟ ಬಂದಿದ್ದೆಲ್ಲವನ್ನು ಗೀಚುತ್ತಾ ಸಾಗಿದರು.
ಆಳ ಸಮುದ್ರ ಮೀನುಗಾರಿಕೆ (SEA FISHING) ಅಂದ್ರೆ ಹತ್ತು ಹನ್ನೆರಡು ದಿನಗಳ ಕಾಲ ನೀರಿನಲ್ಲೇ ಇರಬೇಕು. ಆದರೂ ಸಂಸಾರದ ಬಂಡಿಗೋಸ್ಕರ ಬದುಕು ಸವೆಸುತ್ತಾ ಇನ್ನೊಂದೆಡೆ ಬದುಕು ಬವಣೆಗಳ ಬಗ್ಗೆ ಬರೆಯುತ್ತಾ ಸಾಗಿದವರು ಶಿವಾನಂದ. ತಾವೂ ಬರೆದ ಕವನಗಳನ್ನ ನಾಡಿನ ವಿವಿಧ ವೇದಿಕೆಗಳಿಗೆ, ಸಂಘದ ಸಂಸ್ಥೆ ಗಳು ಆಯೋಜಿಸುವ ಸ್ಪರ್ಧೆಗೆ ಕಳಿಸುತ್ತಿದ್ದರು. ಹೀಗಾಗಿ ಅವರಿಗೆ ಬಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ.
ಈ ಯುವ ಕವಿಯ ಚೊಚ್ಚಲ ಕವನ ಸಂಕಲನ ಪರಿಚಯಿಸುವ ಕೃತಿಯ ಮುನ್ನುಡಿಯೇ ಸೂಕ್ತವೆಂದು ಕೃತಿಯಲ್ಲಿರುವ ಕವನಗಳ ಬಗ್ಗೆ ಸಾಹಿತಿ, ಶಿಕ್ಷಕಿ ಬೆಳಗಾವಿಯ ಡಾ. ಅನ್ನಪೂರ್ಣ ಹಿರೇಮಠ ಬರೆಯುತ್ತಾರೆ.
ಮನುಷ್ಯ ಭಾವಜೀವಿ. ಭಾವನೆಗಳಿಲ್ಲದೆ ಜೀವವಿರಲಾರದು ಜಗದಲಿ. ಹಾಗೆ ಅರಳುವ ತುಳುಕುವ ಭಾವನೆಗಳನ್ನು ಇತರರ ಮುಂದೆ ವ್ಯಕ್ತಪಡಿಸುವುದು ಸುಲಭವಲ್ಲ, ಹಾಗೆಯೇ ಅಬ್ಬರಿಸುವ ಭಾವಗಳನ್ನು ತಡೆಯುವುದು ಸುಲಭವಲ್ಲ, ಕೆಲವರು ಮಾತಾಡಿ ಮನ ಹಗುರು ಮಾಡಿಕೊಳ್ಳಬಹುದು. ಅದನ್ನೇ ಹೊರಹಾಕುವ ಜಾಣ್ಮೆ ಉಳ್ಳವರು ಅಕ್ಷರ ರೂಪದಲ್ಲಿ ಚಿತ್ರಿಸಿ ಇಡಬಹುದು. ಹಾಗೆ ಈ ಸೃಷ್ಟಿಯ ಚೆಲುವಿನೊಂದಿಗೆ ತನಗೆ ಮೆಚ್ಚುಗೆಯಾದವರ ಬಗ್ಗೆ ಸುಂದರವಾದ ಪದ ಬಳಕೆಯಿಂದ ಪ್ರಾಸದೊಂದಿಗೆ ಅರ್ಥ ಬರುವಂತೆ, ಮನಸೆಳೆಯುವಂತೆ, ಮನಕ್ಕೆ ಮುದ ನೀಡುವಂತೆ, ಓದುಗರ ಮನ ತಟ್ಟುವಂತೆ ಬರೆಯುವವನೇ ಕವಿ ಆಗಬಲ್ಲ ಎಂದಿದ್ದಾರೆ.
ಹಡಗು(ಬೋಟ್)(BOAT) ನಡೆಸುವ ಮೀನುಗಾರ(FISHERMEN) ಕಡಲ ಕವಿಯಾಗಿ ಸೃಷ್ಟಿ ಸಿರಿಯ ಅನನ್ಯ ತಾಣದ ಒಡನಾಟದೊಂದಿಗೆ ಕವನಗಳ ಬರೆಯುವ ಗೀಳು ಹಚ್ಚಿಕೊಂಡಂತ ಭಟ್ಕಳದ ಕರಿಕಲ್(BHATKAL KARIKAL) ಊರಿನವರಾದ ಶಿವಾನಂದ ಮೊಗೇರ ಒಬ್ಬ ಉತ್ತಮ ಕವಿ ಆಗುವ ನಿಟ್ಟಿನಲ್ಲಿ ಹೆಜ್ಜೆಗಳನ್ನು ಇಡುತ್ತಿರುವುದು ಶ್ಲಾಘನೀಯ. ಪ್ರಕೃತಿಯ ಮಡಿಲೇ ಬದುಕಿನ ತಾಣ. ಅನೇಕ ವಿಸ್ಮಯಗಳ ನೋಡುತ್ತಲೇ ಜೀವನದ ಕಷ್ಟ- ಸಂಕಷ್ಟ, ನಷ್ಟಗಳ ಉನ್ನತ ಬೆಳೆದಿರುವ ಶಿವಾನಂದ ಇವರು ಕವನಗಳ ಬರೆಯುತ್ತಿರುವುದು ಸಂತಸದ ವಿಷಯ. ಇವರ ಈ ಚೊಚ್ಚಲ “ಕಡಲಾಳದ ಕಾವ್ಯ“ ಎಂಬ ಸುಂದರ ನಾಮಧೇಯ ಹೊತ್ತು ಹೊರಬರುವುದು ಕೆಲಸ ಸಣ್ಣದೇನಲ್ಲ ಎಂದು ಅವರು ಹೇಳಿದ್ದಾರೆ. ಬಿಸಿಲು(SUNLIGHT), ಮಳೆ(RAIN), ಚಳಿ(WINTER), ಬಿರುಗಾಳಿ ಎಲ್ಲವನ್ನೂ ಸಹಿಸಿ ಸಮೀಕರಿಸಿ ನಿತ್ಯ ಕಾಯಕದ ಮಧ್ಯದಲ್ಲಿ ಸೊಗಸಾದ ಗೀತೆಗಳ ರೂಪದಲ್ಲಿ ಕವನ ಚಿತ್ರಿಸಿಟ್ಟಿದ್ದಾರೆ. ಬದುಕಿನ ಪುಟದಲ್ಲಿ ಬಂದು ಹೋಗುವ ಸಂಬಂಧಗಳ, ಅವು ನೀಡಿ ಹೋಗುವ ನೋವು ನಲಿವುಗಳ ಪಟ್ಟಿ ಮಾಡಿದ್ದಾರೆ.
ಅವರ ಕವನಗಳಲ್ಲಿ ಹೆಣ್ಣಿನ ಕುರಿತು ಬರೆದದ್ದನ್ನು ಓದಿದಾಗ ಹೆಣ್ಣಿನ ಬಗೆಗೆ ಇವರಿಗಿರುವ ಗೌರವ, ಪ್ರೀತಿ, ಅಭಿಮಾನ ಎಷ್ಟು ಎಂದು ನಮಗೆ ಅರ್ಥವಾಗುತ್ತದೆ.
ಕನಸನ್ನು ತ್ಯಾಗ ಮಾಡಿ ಮನಸ್ಸು ಕೊಡುವಳು ಮನಸ್ಸನ್ನು ತ್ಯಾಗ ಮಾಡಿ ಪ್ರೀತಿ ಕೊಡುವಳು ದೇಹವನ್ನು ತ್ಯಾಗ ಮಾಡಿ ಜೀವ ಕೊಡುವಳು ಕುಟುಂಬಕ್ಕಾಗಿ ತನ್ನ ಜೀವ ಸವೆಸುವಳು
ಎಂಬ ಈ ಕವನದ ಸಾಲುಗಳನ್ನು ನೋಡಿದಾಗ ಹೆಣ್ಣಿನ ತ್ಯಾಗ(SACRIFICE) , ಬಲಿದಾನ, ಅವಳ ನಿಸ್ವಾರ್ಥ ಸೇವೆ, ಒಳ್ಳೆಯ ಗುಣಗಳನ್ನು ಹೇಳುತ್ತಾ ತನ್ನ ಹೆಂಡತಿಗೆ ಕೃತಜ್ಞತೆ ಸಲ್ಲಿಸುವ ರೂಪದಲ್ಲಿ ಈ ಕವನ ಮೂಡಿ ಬಂದಿದೆ.
ಹಲವು ಕವನಗಳಲ್ಲಿ ನಾಡ ಕಂಡ ಧೀಮಂತ ವ್ಯಕ್ತಿಗಳ ಬಗ್ಗೆ, ಹೋರಾಟಗಾರರ ಬಗ್ಗೆ, ತಮ್ಮ ಕಾಯಕದ ಕುರಿತು, ತಾವು ಇರುವ ಪ್ರಕೃತಿಯ ಮಡಿಲಿನ ಸುಂದರ ಸಮುದ್ರವನ್ನು ಕುರಿತು ಸುಂದರವಾದ ಹಲವು ಕವನಗಳನ್ನು ಬರೆದಿದ್ದಾರೆ. ಸರಳ ಎನಿಸಿದರೂ ಎಲ್ಲ ಕವನಗಳು ಅರ್ಥಗರ್ಭಿತವಾಗಿವೆ. ತಮ್ಮ ಕೆಲಸದ ಪರಿ, ಬರುವಂತಹ ತೊಡಕುಗಳು, ಒಳಿತು ಕೆಡಕುಗಳ ಬಗ್ಗೆ, ಜಲಚರ(AQUATIC ANIMALS), ಪ್ರಾಣಿ(ANIMALS), ಪಕ್ಷಿಗಳ(BIRDS) ಬಗ್ಗೆ ಕೃಷ್ಣ ರಾಮರ ಬಗ್ಗೆ ಭಕ್ತಿ ಬಿಂಬಿಸುವ ಕವನಗಳು… ಹೀಗೆ ಎಲ್ಲಾ ರೀತಿಯ ಕವನಗಳನ್ನು ತಮ್ಮ ಲೇಖನಿಯಿಂದ ಹೊರಹೊಮ್ಮಿಸಿದ್ದಾರೆ.
ನಾನೊಬ್ಬ ದೋಣಿಯ ನಾವಿಕ ಬಿಸಿಲಲ್ಲಿ ದುಡಿಯುವ ಕಾರ್ಮಿಕ ಸಾಗುವ ದೋಣಿಯ ನಡೆಸುತ ಸಾಗರದಿ ಮೀನುಗಳ ಹಿಡಿಯುತ
ಎಂದು ಸರಳ ಸುಲಲಿತ ಭಾಷೆಯಲ್ಲಿ ತನ್ನ ವೃತ್ತಿಯ ಬಗ್ಗೆ ಹೇಳುತ್ತಾ ಪ್ರವೃತ್ತಿಯಲ್ಲಿ ಉಳಿಸಿ ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ. ಇವನೊಬ್ಬ ಮೀನುಗಾರ ನಾವಿಕ (FISHERMEN SAILOR) ಎನ್ನುವುದಕ್ಕೆ ಕವನದ ಸಾಲು ಸಾಕ್ಷಿಕರಿಸುತ್ತದೆ ಎಂದಿದ್ದಾರೆ.
ದೇಶದ ಬಗ್ಗೆ ಗೌರವ ಹೆಮ್ಮೆ ತುಂಬಿದ ಕವನಗಳು ಕೂಡ ಈ ಸಂಕಲನದಲ್ಲಿ ಕಾಣುತ್ತೇವೆ. ನಾಡು ನುಡಿಯ ಭಕ್ತಿ, ಪ್ರೀತಿ, ಅಭಿಮಾನ ಬಿಂಬಿಸುವ ಕವನಗಳೂ ಇವೆ. ಸೃಷ್ಟಿಸಿರಿ, ಸೊಬಗು ಹಾಡಿಹೊಗಳುವ ಕವನಗಳು ಹಾಸು ಹೊಕ್ಕಾಗಿವೆ. ಇವರಿಗೆ ನಾಡು ನುಡಿ ದೇಶದ ಬಗ್ಗೆ ಗೌರವ ಇದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಮಗುವಿನ ಬಗ್ಗೆ ಬರೆದ ಕವನ ಪುಟ್ಟ ಮಗುವನ್ನು ನೆನಪಿಸಿ ಮನ ಕಲಕುತ್ತದೆ. ಹೆಣ್ಣಿನ ಚೆಲುವು ಅವಳ ವೈಯ್ಯಾರ, ಒಲವು, ಅವಳ ದೇಹ ಸಂಪತ್ತು, ನಗೆಯ ಗುಣಗಾನ ಮಾಡುತ್ತಾ ಹಲವು ಕವನ ಮೂಡಿಬಂದಿವೆ. ಪ್ರೀತಿ, ಒಲವು, ಗೆಲುವು ಪ್ರೇಮದ ಆಳವನ್ನು ಕೆದಕಿದ್ದಾರೆ. ಮನದ ತುಡಿತ ಮಿಡಿತ ಹಿಡಿದಿಡಲಾರದ ಬಯಕೆಗಳ ಬುತ್ತಿ ಬಿಚ್ಚಿಟ್ಟಿದ್ದಾರೆ.
ಇನ್ನೊಂದು ಕವನದಲ್ಲಿ ಮೀನುಗಾರನನ್ನು ಬಿಂಬಿಸುತ್ತ
ಸಮುದ್ರದ ಮೇಲೆ ಬೋಟುಬೋಟಿನ ಮೇಲೆ ಬಲೆ ಯಂತ್ರಗಳು ಮೀನುಗಾರರು
ಎನ್ನುತ್ತಾ ಮೀನುಗಾರನೊಬ್ಬ ಹೇಗಿರುತ್ತಾನೆ, ಆ ಮೀನು ಹಿಡಿಯುವ ಕಾಯಕದ ಪರಿ ತಿಳಿಸುತ್ತಾರೆ ಈ ಕವನದಲ್ಲಿ.
ಶಿವಾನಂದ ಮೊಗೇರ ಅವರು ಎಲ್ಲಾ ಪ್ರಕಾರದ ಕವನಗಳನ್ನು ಬರೆಯುವ ಪ್ರಯತ್ನ ಮಾಡಿದ್ದಾರೆ. ಉತ್ತಮ ಕವನಗಳು ಮೂಡಿಬಂದಿವೆ. ಓದುಗರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ಕವನಗಳು ಕೂಡ ಈ ಕವನ ಸಂಕಲನದಲ್ಲಿ ಮೂಡಿಬಂದಿವೆ.
ಶಿವಾನಂದ ಮೊಗೇರರವರು ನಿರಂತರ ಮೀನು ಹಿಡಿಯುವ (FISH CATCHING), ದೋಣಿ ನಡೆಸುವ ಕಾಯಕದಲ್ಲಿ ನಿರತರಾದವರು. ಸಾಹಿತ್ಯ ವಲಯದಲ್ಲಿ ಸಾಕಷ್ಟು ಜನ ಸಾಹಿತಿ ಸ್ನೇಹಿತರನ್ನು ಹೊಂದಿದ ಇವರು ಸಾಹಿತ್ಯ ಆರಾಧನೆಯನ್ನು ಮಾಡುವ ತವಕದಲ್ಲಿ ಈ ಕವನ ಸಂಕಲನ ಮೂಡಿ ಬರುತ್ತಿದೆ.
ಇನ್ನೂ ಇವರ ಲೇಖನಿಯಿಂದ ಒಳ್ಳೆಯ ಒಳ್ಳೆಯ ಕವನಗಳು ಮೂಡಿ ಬರುವಂತಾಗಲಿ, ಕನ್ನಡ ತಾಯಿಯ ಕೃಪೆ ಇವರ ಮೇಲಿರಲಿ, ಇವರ ಕವನಗಳನ್ನು ಓದಿ ಹಾರೈಸಿರಿ ಇನ್ನೂ ಸುಂದರ ಕವನಗಳೊಂದಿಗೆ ಉತ್ತಮ ಕವನ (POEM) ಸಂಕಲನಗಳು ಸಿದ್ಧವಾಗಲಿ. ಒಳ್ಳೆಯ ಸಾಹಿತಿಯಾಗಿ ಬೆಳೆಯಲಿ ಎಂದು ಡಾ ಅನ್ನಪೂರ್ಣ ಹಿರೇಮಠ ಹಾರೈಸಿದ್ದಾರೆ.