ಕಾರವಾರ : ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಿರೀಕ್ಷಿತ ವೋಟ್ ಗಳಿಸಿದೆಯಾದರೂ ಬೇರೆ ಯಾವ ಅಭ್ಯರ್ಥಿ ಗರಿಷ್ಟ ಮತ ಪಡೆಯಲು ಸಫಲವಾಗಿಲ್ಲ.
ಇಲ್ಲಿ ನೋಟಾ ಮತ ಮೂರನೇ ಸ್ಥಾನದಲ್ಲಿದೆ. ಕ್ಷೇತ್ರದಲ್ಲಿ ಒಟ್ಟು 10176 ಮತದಾರರು ತಮಗೆ ಯಾವ ಪಕ್ಷ, ಅಭ್ಯರ್ಥಿ ಇಷ್ಟವಿಲ್ಲ ಎಂದು ನೋಟಾಗೆ ಮತ ನೀಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಒಟ್ಟು 445067 ಮತ ಪಡೆದರೆ, ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ 782495 ಮತ ಪಡೆದಿದ್ದಾರೆ.
ಸೋಶಿಯಲ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್ ) ಪಕ್ಷದ ಗಣಪತಿ ಹೆಗಡೆ 4472 ಮತ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಸ್ಪರ್ಧೆಸಿದ ವಿನಾಯಕ ನಾಯ್ಕ 1263 ಮತಗಳು. ಉತ್ತಮ ಪ್ರಜಾಕೀಯ ಪಕ್ಷದ ಪ್ರಜಾಕೀಯ ಸುನಿಲ್ 1566 ಮತ ಪಡೆದಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾದ ಅರವಿಂದ ಗೌಡ 904, ಅವಿನಾಶ್ ನಾರಾಯಣ ಪಾಟೀಲ್ 773, ಕೃಷ್ಣಾ ಬಳೇಗಾರ 920, ಕೆ ಪಿ ಪಾಟೀಲ್ 956, ಚಿದಾನಂದ ಹನುಮಂತಪ್ಪ ಹರಿಜನ್ 1721, ನಾಗರಾಜ್ ಅನಂತ ಶಿರಾಲಿ 2882, ನಿರಂಜನ್ ಸರ್ದೇಸಾಯಿ 4169, ರಾಜಶೇಖರ್ ಶಂಕರ್ ಹಿಂಡಲಗಿ 5397 ಮತಗಳನ್ನ ಪಡೆದಿದ್ದಾರೆ.
ದೇಶದಲ್ಲೂ ಕೂಡ ನೋಟಾಗೆ ಮತ ನೀಡಿದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.