ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news)  ಕಾರವಾರ(Karwar) : ಅಂಕೋಲಾದಲ್ಲಿ ಕೆಪಿಸಿಸಿ(KPCC) ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ(Gopalkrishna Nayak) ಅವರ  ಮೇಲೆ ನಡೆದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದಲ್ಲಿ(Congress Party) ಗೊಂದಲ ಉಂಟಾಗಿದೆ.

ತಮ್ಮ ಪ್ರಕರಣದಲ್ಲಿ ಸುಪಾರಿ ನೀಡಿದವರ ಜೊತೆ  ಶಾಸಕ ಸತೀಶ ಸೈಲ್(MLA Satish Sail) ಸಂಪರ್ಕ ಇದೆ ಎಂದು ಸ್ವತಃ ಗೋಪಾಲಕೃಷ್ಣ ಅವರ ಹೇಳಿಕೆ ಕಾಂಗ್ರೆಸ್ ಕಾರ್ಯಕರ್ತರ ಮತ್ತು ಮುಖಂಡರ ಅಸಮಧಾನಕ್ಕೆ ಕಾರಣವಾಗಿದೆ. ಇಂದು ಕಾರವಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು ಹತ್ಯೆ ಯತ್ನ ಘಟನೆಯನ್ನು ಖಂಡಿಸಿದ್ದಾರೆ. ಅಲ್ಲದೇ ತಮ್ಮ ನಾಯಕ ಸತೀಶ ಸೈಲ್ ಅವರ ಮೇಲೆ ವಿನಾ ಕಾರಣ ಆರೋಪ ಮಾಡಿದ ಗೋಪಾಲಕೃಷ್ಣ(Gopalkrishna) ಅವರ  ಮೇಲೆ ಪೋಲಿಸರು ಸ್ವಯಂ ಪ್ರೇರಿತ ದೂರು(Somoto Case) ದಾಖಲಿಸಿ    ನಿರ್ದ್ಯಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು  ಕಾಂಗ್ರೆಸ್ ಜಿಲ್ಲಾ ವಕ್ತಾರ ಶಂಭು ಶೆಟ್ಟಿ ಹೇಳಿದ್ದಾರೆ.

ತನ್ನ ಹತ್ಯೆ ಯತ್ನದ ಹಿಂದಿರುವವರೊಂದಿಗೆ ಶಾಸಕ ಸೈಲ್ ಸಂಪರ್ಕ ಹೊಂದಿದ್ದಾರೆ ಎಂಬ ಹೇಳಿಕೆಯನ್ನು ಖಂಡಿಸುವುದಾಗಿ ತಿಳಿಸಿದ ಅವರು, ಗೋಪಾಲಕೃಷ್ಣ ನಾಯಕ ಮೇಲೆ ನಡೆದ ಕೊಲೆ ಯತ್ನದಲ್ಲಿ ಶಾಸಕ ಸತೀಶ ಸೈಲ್ ಅವರ ಯಾವುದೇ ಪಾತ್ರ ಇಲ್ಲ. ಒಂದೊಮ್ಮೆ ಈ ಪ್ರಯತ್ನದ ಹಿಂದೆ ಅವರ ಕೈವಾಡ ಇದ್ದರೆ ಅವರ ಮೇಲೆ ಮುಲಾಜಿಲ್ಲದೇ ಪೋಲಿಸರು ಪ್ರಕರಣ ದಾಖಲಿಸಲಿ. ಉಪ್ಪು ತಿಂದವ ನೀರು ಕುಡಿಯಲೆಬೇಕು  ಎಂದು ಶಂಭು ಶೆಟ್ಟಿ ಹೇಳಿದರು.

ಗೋಪಾಲಕೃಷ್ಣನಾಯಕ ಅವರು ಆಧಾರ ರಹಿತ ಆರೋಪ ಮಾಡುವುದನ್ನು ಬಿಟ್ಟು, ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ, ತನ್ನ ಕೊಲೆಗೆ ಸುಪಾರಿ ನೀಡಿದವರಿಗೆ ಶಾಸಕ ಸತೀಶ ಸೈಲ್(Satish Sail) ಬೆಂಬಲ ನೀಡಿದ್ದಾರೆ ಎಂದು ಕೆಪಿಸಿಸಿಗೆ ದೂರು ನೀಡಬಹುದಿತ್ತು.  ಅವರ ಹೇಳಿಕೆ  ಕೇವಲ ಶಾಸಕ ಸತೀಶ ಸೈಲ್ ಅವರ ಹೆಸರು ಹಾಳಾಗುತ್ತಿಲ್ಲ. ಬದಲಿಗೆ ಇಡೀ ಕಾಂಗ್ರೆಸ್‌ ಕಾರ್ಯಕರ್ತರು(Congress Workers), ಮುಖಂಡರಲ್ಲಿ(Leaders) ಗೊಂದಲ ಉಂಟಾಗಿದೆ. ಪಕ್ಷದ ವರ್ಚಸ್ಸಿಗೆ  ಧಕ್ಕೆ ಬರುತ್ತಿದೆ.

ಒಂದೊಮ್ಮೆ ಗೋಪಾಲಕೃಷ್ಣ ನಾಯಕ(Gopalkrishna Nayak) ಸುಳ್ಳು ಆರೋಪ ಮಾಡಿದ್ದರೆ ಒಬ್ಬ ಹಾಲಿ ಶಾಸಕರ ತೇಜೋವಧೆ ಹಾಗೂ ಸುಳ್ಳು ಆರೋಪ ಮಾಡಿದ ಕಾರಣ ಅವರ ಮೇಲೆ ಪೋಲಿಸರು ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ‌ ಗಾಂವಕರ ಪ್ರಕರಣ ಉಲ್ಲೇಖಿಸಿ. ಇದು ಪಕ್ಷಕ್ಕೆ ಸಂದಿಗ್ದ ಪರಿಸ್ಥಿತಿಯಾಗಿದೆ. ಕೊಲ್ಲುವವನೊಬ್ಬ ಕಾಯುವವನೊಬ್ಬ ಎಂಬಂತೆ  ಗೋಪಾಲಕೃಷ್ಣ ಬಚಾವಾಗಿದ್ದಾರೆ. ಘಟನೆಯ ಬಗ್ಗೆ ಶಾಸಕ ಸತೀಶ್ ಸೈಲ್ ಆರಂಭದಲ್ಲಿ‌ ಖಂಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಶಿರಸಿ ಶಾಸಕ ಭೀಮಣ್ಣ ಅವರು ಕಾರ್ಯಕರ್ತರು ಖಂಡಿಸಿದ್ದಾರೆ. ಗೃಹ ಸಚಿವರು ಖಂಡಿಸಿ ತನಿಖೆಗೆ ಒತ್ತಾಯಿಸಿದ್ದಾರೆ.

ನಾನು ದ್ವೇಷದ ರಾಜಕಾರಣದಲ್ಲಿ ನಂಬಿಕೆ ಇಟ್ಟುಕೊಂಡವನಲ್ಲ. ಪ್ರೀತಿಯ ರಾಜಕಾರಣದಲ್ಲಿ ನಂಬಿಕೆ ಇಟ್ಟವನು. ಸತೀಶ್ ಸೈಲ್ ನೀಚ ಕೆಲಸ ಮಾಡುವವರಲ್ಲ. ಈಗಾಗಲೇ  ಪ್ರಕರಣದಲ್ಲಿ ಒಂಬತ್ತು ಜನರ  ಬಂಧನವಾಗಿದೆ. ಇನ್ನೂ ಕೆಲ ದಿನಗಳಲ್ಲಿ ‌ಆರೋಪಿಗಳಾರು ಎಂಬುದು ತಿಳಿಯಲಿದೆ ಎಂದು ಹೇಳಿದ ಸಾಯಿ ಗಾಂವಕರ, ಅಹಿತಕರ ಘಟನೆಯನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ ಎಂದು ಹೇಳಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಕಾರವಾರ ಬ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಕಲ್ಗುಟ್ಕರ್, ಸಮೀರ್ ನಾಯಕ ಮಾತನಾಡಿದರು.

ಇದನ್ನು ಓದಿ : ಭಟ್ಕಳ ಮತ್ತು ಶಿರಸಿಯಲ್ಲಿ ಬಂಗಾರದ ಅಧಿಕಾರಿಗಳು.

ಸಹಕಾರಿ ಸಂಸ್ಥೆ ಚುನಾವಣೆ ಮತ್ತು ಸಿಎಂ ಮನೆಗೆ ಬಂದ ಉರಿಯಿಂದ ಹತ್ಯೆಗೆ ಯತ್ನ : ಗೋಪಾಲಕೃಷ್ಣ ಸಂಶಯ.

ನಿಂತಿದ್ದ ಕಂಟೈನರ್‌ಗೆ ಎರ್ಟಿಗಾ ಕಾರು ಡಿಕ್ಕಿ.  ತಾಯಿ-ಮಗಳು ದುರ್ಮರಣ