ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕಾರವಾರ(Karwar) : ಅಂಕೋಲಾ ಪಟ್ಟಣದಲ್ಲಿ(Ankola Town) ನಡೆದ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ(Gopalkrishna Nayak) ಮೇಲಿನ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ  ಗೋಪಾಲಕೃಷ್ಣ ನಾಯಕ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನನ್ನ ಮೇಲಿನ ಕೊಲೆ ಯತ್ನ(Murder Attempt) ರಾಜಕೀಯ ದ್ವೇಷದ ಹಿನ್ನಲೆಯಲ್ಲಿ ನಡೆದಿದೆ” ಎಂದು ಆರೋಪಿಸಿದರು. ಸಾಮಾನ್ಯವಾಗಿ ಕೊಲೆಗಳು ಹೆಣ್ಣು, ಹೊನ್ನು ಮತ್ತು ಮಣ್ಣಿಗಾಗಿ ನಡೆಯುತ್ತವೆ. ಆದರೆ ಈ ವಿಚಾರದಲ್ಲಿ ಯಾರೊಂದಿಗೂ ವೈಯಕ್ತಿಕ ದ್ವೇಷ ಇಲ್ಲವೆಂದ ಅವರು, “ನಾನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ(Assembly Election) ಸ್ಪರ್ಧಿಸಲು ಮುಂದಾಗಿದ್ದರಿಂದಲೇ ಈ ಕೃತ್ಯ ನಡೆದಿರಬಹುದು” ಎಂದು ಅನುಮಾನ ವ್ಯಕ್ತಪಡಿಸಿದರು.

ಕಾರವಾರ ಶಾಸಕ ಸತೀಶ್ ಸೈಲ್(Karwar MLA Satish Sail) ಅವರೊಂದಿಗೆ ಭಿನ್ನಾಭಿಪ್ರಾಯವಿರುವುದನ್ನು ಒಪ್ಪಿಕೊಂಡ ಗೋಪಾಲಕೃಷ್ಣ ನಾಯಕ, “ಈ ಪ್ರಕರಣದಲ್ಲಿ ಶಾಸಕರ ಕೈವಾಡ ಇದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಅದರ ಬಗ್ಗೆ ಖಚಿತ ಮಾಹಿತಿ ನನ್ನ ಬಳಿ ಇಲ್ಲ. ಆದರೂ ನನ್ನ ಮೇಲಿನ ದಾಳಿ ಹಿಂದೆ ಇರುವ ವ್ಯಕ್ತಿಗಳೊಂದಿಗೆ ಶಾಸಕರ ಸಂಪರ್ಕ ಇದೆ ಎಂಬುದು ತಿಳಿದಿದೆ” ಎಂದು ಹೇಳಿದರು.

ಇದೇ ವೇಳೆ, “ಈವರೆಗೆ ಶಾಸಕ ಸತೀಶ್ ಸೈಲ್(MLA Satish Sail) ಅವರು ನನ್ನನ್ನು ಸಂಪರ್ಕಿಸಿದ ಮಾಹಿತಿ ಇಲ್ಲ”. ಮಾಜಿ ಸಚಿವ ಆನಂದ ಅಸ್ನೋಟಿಕರ್(Anand  Asnotikar) ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ(Roopali Naik) ಅವರು ಕರೆ ಮಾಡಿ ಆರೋಗ್ಯ ವಿಚಾರಿಸಿರುವುದಾಗಿ ತಿಳಿಸಿದರು.

ಅಂಕೋಲಾ ಟಿ.ಎಂ.ಎಸ್ ಸಹಕಾರಿ ಸಂಸ್ಥೆಯ ಚುನಾವಣೆಯಲ್ಲಿ(Ankola TMS Cooperative Election) ಜಯ ಸಾಧಿಸಿದ್ದ ವಿಚಾರವನ್ನೂ ಉಲ್ಲೇಖಿಸಿದ ಅವರು, ಆ ಸಂದರ್ಭದಲ್ಲಿ ಆರ್.ಎನ್ ನಾಯಕ(R N Nayak) ಅವರ ಪುತ್ರ ಉದ್ಯಮಿ ಮಯೂರ್ ನಾಯಕ(Mayur Nayak) ಬಲ ಪ್ರದರ್ಶನಕ್ಕೆ ಮುಂದಾಗಿದ್ದರು. ಆದರೆ ಅದಕ್ಕೆ ಅವಕಾಶ ನೀಡಲಿಲ್ಲ. ಈ ಸಂದರ್ಭದಲ್ಲಿ ಶಾಸಕ ಸತೀಶ್ ಸೈಲ್(MLA Satish Sail) ಅವರು ಬಿಜೆಪಿಯ ಮಯೂರ್ ನಾಯಕ್ ಅವರಿಗೆ ಬೆಂಬಲ ನೀಡಿದ್ದರು ಎಂದು ಆರೋಪಿಸಿದರು.

ಇದಲ್ಲದೆ, ಶಿರೂರು ಗುಡ್ಡ ಕುಸಿತದ(Shiruru Landslide) ಸಂದರ್ಭ ಮುಖ್ಯಮಂತ್ರಿ(Chief Minister) ತಮ್ಮ ಮನೆಗೆ ಭೇಟಿ ನೀಡಿದ್ದ ವೇಳೆ ಸಹ ಶಾಸಕ ಸತೀಶ್ ಸೈಲ್ ವಿರೋಧ ವ್ಯಕ್ತಪಡಿಸಿದ್ದರು. “ಶಾಸಕರಿಗೆ ರಾಜಕೀಯವಾಗಿ ನನ್ನ ಮೇಲೆ ದ್ವೇಷ ಇದ್ದಿರಬಹುದು. ಆದರೆ ಕೊಲೆ ಮಾಡಿಸುವ ಮಟ್ಟಕ್ಕೆ ಇಳಿಯುವ ವ್ಯಕ್ತಿತ್ವ ಅವರದ್ದಲ್ಲ” ಎಂದು ಗೋಪಾಲಕೃಷ್ಣ ನಾಯಕ ಸ್ಪಷ್ಟಪಡಿಸಿದರು.

ಮಾ.25 ರಂದು ಅಂಕೋಲಾದಲ್ಲಿ ಗೋಪಾಲಕೃಷ್ಣ ನಾಯಕ(Gopalkrishna Nayak) ಮೇಲೆ ಹತ್ಯೆ ಯತ್ನ ನಡೆದಿತ್ತು. ಪ್ರಕರಣದ ತನಿಖೆ ನಡೆಯುತ್ತಿದ್ದು, ಪೊಲೀಸರ ತನಿಖೆಯ(Police Investigation) ಮೇಲೆ ನಂಬಿಕೆ ಇದೆ. ತನಿಖೆಯಲ್ಲಿ ಸತ್ಯ ಹೊರಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನು ಓದಿ : ಭಟ್ಕಳದಲ್ಲಿ ಬಾವುಟ ತೆರವುಗೊಳಿಸಿದ ನಗರಸಭೆ. ಕೆಲಕಾಲ ಉದ್ವೀಘ್ನ ವಾತಾವರಣ. ಪರಿಸ್ಥಿತಿ ನಿಯಂತ್ರಿಸಿದ ಪೊಲೀಸರು.

ದೇಶದ್ರೋಹಿ ದಾವುದ್ ಹೆಸರಿನ ಬಸ್. ತಡೆದು ಪೊಲೀಸರಿಗೆ ಒಪ್ಪಿಸಿದ ಹಿಂದೂ ಕಾರ್ಯಕರ್ತರು.