ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar) : ಸರ್ಕಾರಿ ಕೆಲಸವೆಂದರೆ ದೇವರ ಕೆಲಸ ಅಂತಾರೆ. ಆದರೆ ತಾಲೂಕಿನ ಕಿನ್ನರ ಗ್ರಾಮದಲ್ಲಿ (Kinner Village) ಮಾಡಿದ ಜೆಜೆಎಂ ಕಾಮಗಾರಿಯಿಂದ(JJM Work) ಸರ್ಕಾರಿ ಬಸ್ ಸಿಲುಕಿದ ಘಟನೆ ನಡೆದಿದೆ.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದಾದರೂ ಯೋಜನಾ  ಕಾಮಗಾರಿ ನಡೆಯುತ್ತಿದ್ದಾಗ ನೋಡಬೇಕೆನ್ನುವ   ಕನಿಷ್ಠ ಪ್ರಜ್ಞೆಯು ಅಧಿಕಾರಿಗಳಿಗೆ ಇದ್ದಂತಿಲ್ಲ. ಇಲ್ಲಿ ಜೆಜೆಎಂ(JJM) ಕುಡಿಯುವ ನೀರಿನ ಪೈಪ್ ಅಳವಡಿಸಲು  ಹೊಂಡಗಳನ್ನು ತೆಗೆದು ಬಳಿಕ  ಸರಿಯಾಗಿ ಮುಚ್ಚದ ಕಾರಣ ಈ ರೀತಿಯಾಗಿ  ಬಸ್ಸುಗಳು  ವಾಹನಗಳು ಸಿಲುಕಿಕೊಳ್ಳುತ್ತಿದೆ.

ಈ ಹಿಂದೆ ಕಿನ್ನರ  ಗ್ರಾಮ ಪಂಚಾಯತಗೆ(Kinner  grama Panchayat) ಸ್ಥಳೀಯರು  ಹೊಂಡವನ್ನು ಸರಿಯಾಗಿ ಮುಚ್ಚುವಂತೆ ತಿಳಿಸಿದ್ದರು. ಆದರೆ ಕೆಲಸ ತಮಗೆ ಸಂಬಂಧಿಸದಲ್ಲ ಎಂದು ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಹೀಗಾಗಿ ಈ ರೀತಿ ಆವಾಂತರಗಳಾಗುತ್ತಿವೆ ಎಂದು  ಸ್ಥಳೀಯ ನಾಗರಿಕರು  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : ದೇವಿಮನೆ ಘಟ್ಟದಲ್ಲಿ ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ವಾಹನಗಳ ಸಂಚಾರ ನಿರ್ಬಂಧ.

ಬೈಕ್ ಗಳ‌ ನಡುವೆ ಮುಖಾಮುಖಿ ಡಿಕ್ಕಿ: ಓರ್ವ ಸಾವು

ಭಟ್ಕಳದಲ್ಲಿ ಅಧಿಕಾರಿಗಳನ್ನ ಬೇಸ್ತು ಬೀಳಿಸಿದ ಹುಸಿ ಕರೆ.

ಮನೆ ಸಮೀಪದ ಕಾಲುವೆಗೆ ಬಿದ್ದು ಮಗು ದುರ್ಮರಣ.