ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಹದಗೆಟ್ಟಿರುವ ನಗರದ ಹಬ್ಬುವಾಡ ರಸ್ತೆ(Habbuwada Road) ಅವ್ಯವಸ್ಥೆ ಮತ್ತು ಸುಳ್ಳು ಭರವಸೆ ನೀಡಿದ ಅಧಿಕಾರಿಗಳ ನಡೆ ಖಂಡಿಸಿ ಭಿಕ್ಷೆ(Begging) ಬೇಡಿ ಸಂಬಂಧಪಟ್ಟ ಇಲಾಖೆಗೆ ಕಳಿಸುವ ವಿನೂತನ ಪ್ರತಿಭಟನೆ(Different Protest) ನಡೆಸಲು ನಿರ್ಧರಿಸಲಾಗಿದೆ.

ಡಿಸೆಂಬರ್ 16 ರಂದು  ಆಟೋ ಚಾಲಕರು(Auto Drivers) ಹಾಗು ವಿದ್ಯಾರ್ಥಿ ಒಕ್ಕೂಟದಿಂದ(Students Organization) ಈ ವಿನೂತನ ರೀತಿಯ ಪ್ರತಿಭಟನೆ ನಡೆಯಲಿದೆ  ಎಂದು ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ರಾಘು ನಾಯ್ಕ ಹೇಳಿದ್ದಾರೆ. ಕಾರವಾರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ವಿಷಯ ತಿಳಿಸಿದ್ದಾರೆ.

ಪ್ರತಿಭಟನೆ ಸಂದರ್ಭದಲ್ಲಿ  ಎರಡು ಕುಡಿಕೆಗಳನ್ನ ಹಿಡಿದು ಸಾರ್ವಜನಿಕರಿಂದ ಭಿಕ್ಷೆ(Begging) ರೂಪದಲ್ಲಿ ಹಣ ಸಂಗ್ರಹಿಸಲಾಗುತ್ತದೆ. ಬಳಿಕ ಒಂದು ಕುಡಿಕೆಯನ್ನ  ಲೋಕೋಪಯೋಗಿ ಇಲಾಖೆ(PWD) ಹಾಗೂ ಮತ್ತೊಂದು ಕುಡಿಕೆಯನ್ನ ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ(NPCIL) ಕಳಿಸುವುದಾಗಿ ಅವರು ತಿಳಿಸಿದ್ದಾರೆ.

ಹಬ್ಬುವಾಡ ರಸ್ತೆ ಕಾಮಗಾರಿಗೆ(Habbuwad Road) ಸರಕಾರದಿಂದ 20 ಕೋಟಿ ರೂ. ಮಂಜೂರಾಗಿದೆ. ಡಿಸೆಂಬರ್ 10 ರಂದೇ ಕಾಮಗಾರಿ ಆರಂಭಿಸುವುದಾಗಿ ಪಿಡಬ್ಲ್ಯೂಡಿ ಅಧಿಕಾರಿಗಳು ಹೇಳಿದ್ದರು. ಆದರೆ ಈವರೆಗೆ ಕಾಮಗಾರಿ ಆರಂಭವಾಗಿಲ್ಲ. ಇಲ್ಲಿನ ಕೈಗಾ ಯೋಜನೆಯ(Kaiga Project) 5 ಮತ್ತು 6ನೇ ಘಟಕಗಳ ಕಾಮಗಾರಿಗೂ ಈ ರಸ್ತೆ ಅಡ್ಡಿಯಾಗಿದೆ. ಸುಮಾರು 13 ಸಾವಿರ ಕೋಟಿ ರೂ. ವೆಚ್ಚದ ಈ ಯೋಜನೆಗೆ ಸಾಮಗ್ರಿಗಳನ್ನು ತರುವ ಲಾರಿಗಳು ರಸ್ತೆ ಹದಗೆಟ್ಟಿರುವ(Pothole Ramanagar d) ಕಾರಣ ಬರಲು ಸಾಧ್ಯವಾಗುತ್ತಿಲ್ಲ. ಭಾರಿ ವಾಹನಗಳ(Heavy Vehicle) ಓಡಾಟದಿಂದಲೇ ರಸ್ತೆ ಹಾಳಾಗಿದ್ದರೂ, ಕೈಗಾ ಅಧಿಕಾರಿಗಳು(Kaiga Officers) ರಸ್ತೆ ದುರಸ್ತಿಗೆ ಮುಂದಾಗದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಜನರ ಜೀವ ತೆಗೆಯುವ  ಹಬ್ಬುವಾಡ ರಸ್ತೆಯನ್ನು ಸರಿಪಡಿಸಲು ಹಣವಿಲ್ಲದ ಜಿಲ್ಲಾಡಳಿತ, ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ‘ಕರಾವಳಿ ಉತ್ಸವ'(Karavali Utsav) ನಡೆಸಲು ಮುಂದಾಗಿದೆ. ಯಾವ ಪುರುಷಾರ್ಥಕ್ಕಾಗಿ ಕರಾವಳಿ ಉತ್ಸವ ಎಂದು ಪತ್ರಿಕಾಗೋಷ್ಠಿಯಲ್ಲಿ ಕಿಡಿ ಕಾರಿದ್ದಾರೆ.

ಈ ಸಂದರ್ಭದಲ್ಲಿ ರಮಾಕಾಂತ ಗುನಗಿ, ರೂಪೇಶ ಗುನಗಿ, ಚಂದ್ರಕಾಂತ ನಾಯ್ಕ, ಕಾಶಿನಾಥ ಬಂಟ್, ಅಶೋಕ ಮಾಂಜ್ರೇಕರ, ಲಾರೆನ್ಸ್, ಮಾರುತಿ, ಗುರು ನಾಯ್ಕ, ದೇವೇಂದ್ರ ಗುನಗಿ, ಶ್ರೀಪಾದ ನಾಯ್ಕ ಹಾಜರಿದ್ದರು.

ಇದನ್ನು ಓದಿ : ಗೋವಾ ದುರಂತ.‌ ನೈಟ್ ಕ್ಲಬ್ ಮಾಲೀಕರು ಥೈಲ್ಯಾಂಡ್ ನಲ್ಲಿ ಬಂಧನ.

ಬೆಂಕಿ, ಸಿಲಿಂಡರ್ ಸ್ಪೋಟ, ಮನೆ ದ್ವಂಸ. ಆತಂಕ.

ಜಗಲ್‌ಬೆಟ್‌ನಲ್ಲಿ ಮಹಿಳೆಯ ಅಕಾಲಿಕ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ.