ಅಂಕೋಲಾ(Ankola) : ಜಿಲ್ಲೆಯ ಜನ ಮನ್ನಣೆಯ , ದಣಿವರಿಯದ ಶಿಕ್ಷಕ ಪ್ರಕಾಶ ಕುಂಜಿ(Prakash Kunji) ಇಂದು ಹೃದಯಾಘಾತದಿಂದ  ನಿಧನರಾಗಿದ್ದಾರೆ

ಅವರಿಗೆ 70 ವರ್ಷ ವಯಸ್ಸಾಗಿತ್ತು. ಈ ಹಿಂದೆಯೇ ಪತ್ನಿಯನ್ನು ಅಗಲಿದ್ದ ಪ್ರಕಾಶ ಕುಂಜಿ ಅವರು ಮನೆಯಲ್ಲಿಯೇ ಗುರುವಾರ ಮದ್ಯಾಹ್ನ ಹೃದಯಾಘಾತಕ್ಕೊಳಗಾಗಿದ್ದರು  ಎಂದು ತಿಳಿದುಬಂದಿದೆ.

ರಾಜ್ಯ ಮತ್ತು ರಾಷ್ಟ್ರಮಟ್ಟದ ಕಬಡ್ಡಿ ನಿರ್ಣಾಯಕರು  ನಿವೃತ್ತ ಪ್ರೌಢಶಾಲಾ ದೈಹಿಕ ಶಿಕ್ಷಕರಾಗಿದ್ದ ಅವರು ನೂರಾರು ದೈಹಿಕ ಶಿಕ್ಷಕರಿಗೆ ಮಾರ್ಗದರ್ಶಕರಾಗಿದ್ದರು.

ಹಿಂದೆ ಅಂಕೋಲಾ ತಾಲೂಕಿನ ಬಾಳೆಗುಳಿಯಲ್ಲಿ ಸಿಪಿಎಡ್ ಕಾಲೇಜು ತೆರೆದು ನೂರಾರು ಶಿಕ್ಷಕರಿಗೆ ತರಬೇತಿ ನೀಡಿದ್ದರು. ಅಲ್ಲದೇ ಕಠಿಣವಾದ ಅಭ್ಯಾಸಗಳನ್ನ ನೀಡಿ ಅವರು ಮಾದರಿ ಶಿಕ್ಷಕರಾಗುವಂತೆ ತಯಾರು ಮಾಡಿದ ಕೀರ್ತಿ ಅವರಿಗಿತ್ತು.

ಶೈಕ್ಷಣಿಕ ಕ್ಷೇತ್ರದಲ್ಲಿ ಮಾದರಿಯಾಗಿದ್ದ ಪ್ರಕಾಶ ಕುಂಜಿ, ನಿವೃತ್ತಿಯ ನಂತರವೂ ಸಮಾಜಮುಖಿ ಚಟುವಟಿಕೆಗಳಲ್ಲಿ ಶ್ರಮಿಸಿದರು. ಹಲವು ಸಂಘಟನೆಗಳಲ್ಲಿ ಪ್ರಮುಖ ಪಾತ್ರವಹಿಸಿ, ಕೋಮು ಸೌಹಾರ್ದತೆಯನ್ನು ಸಾರುವ ಮೂಲಕ ಎಲ್ಲ ಧರ್ಮ, ವರ್ಗದವರ  ಪ್ರೀತಿ ಮತ್ತು ವಿಶ್ವಾಸಕ್ಕೆ  ಪಾತ್ರರಾಗಿದ್ದರು. ಅವರ ಆದರ್ಶ ನಿಲುವುಗಳು ಮತ್ತು ಸಹೃದಯತನವು ಜನರಲ್ಲಿ ಅಪಾರ ಪ್ರಭಾವ ಬೀರಿದ್ದವು. ನಿವೃತ್ತರಾದರೂ ಕೂಡ ಅವರು ತಮ್ಮ ಸೇವೆಯನ್ನ ದೈಹಿಕ ಶಿಕ್ಷಣಕ್ಕಾಗಿ ಮೀಸಲಿಟ್ಟಿದ್ದರು.

ಮೃತರು ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಅವರ ಅಗಲಿಕೆ ಸಾಂಸ್ಕೃತಿಕ, ಶೈಕ್ಷಣಿಕ, ಮತ್ತು ಸಾಮಾಜಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಜಿಲ್ಲೆಯ ಶಿಕ್ಷಕ ವರ್ಗ ಸಂತಾಪ ಸೂಚಿಸಿದೆ.

ಇದನ್ನು ಓದಿ : ಮನೆಯಂಗಳದಲ್ಲಿ ಚಿರತೆ. ಆತಂಕಗೊಂಡಿರುವ ಜನತೆ.

ಪ್ರವಾಸಕ್ಕೆ ಬಂದಿದ್ದ ಬಾಲಕ ತೆರೆದ ಬಾವಿಯಲ್ಲಿ ಬಿದ್ದು ಸಾವು.

ಸೂರ್ಯಸ್ತದ ನಂತರ ವಿದೇಶಿಗನ ಮಸ್ತಿ.   ರಕ್ಷಣೆಗಾಗಿ  ಲೈಫ್ ಗಾರ್ಡ್ಸ್ ಸುಸ್ತು.