ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಳಗಾವಿ(Belagavi) : ಅಂಗನವಾಡಿ ಶಿಕ್ಷಕಿಯೋರ್ವಳಿಂದ(Anganawadi Teacher) ಸಾಲ ಪಡೆದಿದ್ದ ವ್ಯಕ್ತಿಯೋರ್ವ ಆಕೆ ಹಣ ವಾಪಾಸ್ ಕೇಳಿದಾಗ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಬೆಳಗಾವಿಯ(Belagavi) ನಂದಗಡ ಗ್ರಾಮದಲ್ಲಿ ಅಂಗನವಾಡಿ(Anganawadi Teacher) ಶಿಕ್ಷಕಿಯಾಗಿದ್ದ ಅಶ್ವಿನಿ ಪಾಟೀಲ್(50) ಕೊಲೆಯಾದ ದುರ್ದೈವಿ. ಶಂಕರ್ ಪಾಟೀಲ್ ಕೊಲೆ ಆರೋಪಿ. ಅಕ್ಟೋಬರ್ 2ರಂದು ನಂದಗಡದ ಅಶ್ವಿನಿ ಪಾಟೀಲ್ ಕಕ್ಕೇರಿ ಬಿಷ್ಟಾದೇವಿ ಜಾತ್ರೆಗೆಂದು ಮನೆಯಿಂದ ಹೊರಟಿದ್ದರಾದರೂ, ಬಳಿಕ ಅವರು ವಾಪಾಸು ಮನೆಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬದವರು ನಂದಗಡ ಪೊಲೀಸ್ ಠಾಣೆಗೆ(Nandagada Police Station) ಮಿಸ್ಸಿಂಗ್ ದೂರು ಸಲ್ಲಿಸಿದ್ದರು.
ಪೊಲೀಸರು ತನಿಖೆ ಆರಂಭಿಸಿದ ಬೆನ್ನಲ್ಲೇ ಅ.6ರಂದು ಕಾರವಾರ ಜಿಲ್ಲೆಯ(Karwar District) ರಾಮನಗರದ ಅರಣ್ಯ(Ramanagara Forest) ಪ್ರದೇಶದಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಜತೆಗಿನ ದಾಖಲೆಗಳ ಆಧಾರದ ಮೇಲೆ ಶವವನ್ನು ನಂದಗಡದ ಅಶ್ವಿನಿಯದ್ದೆಂದು ಗುರುತಿಸಲಾಯಿತು.
ಮೃತ ಅಶ್ವೀನಿಯ ಪತಿ ಕಳೆದ ಹಲವು ವರ್ಷಗಳಿಂದ ಗೋವಾದಲ್ಲಿ ಕೆಲಸ ಮಾಡುತ್ತಿದ್ದು, ಮಗ ಬೇರೆ ಕಡೆ ಇದ್ದಾನೆನ್ನಲಾಗಿದೆ. ಅನುಮಾನಿತ ವ್ಯಕ್ತಿಯಾಗಿದ್ದ ಶಂಕರ್ ಪಾಟೀಲ್ ಎಂಬಾತನು ಅಶ್ವಿನಿಯೊಂದಿಗೆ ಜಾತ್ರೆಗೆ ತೆರಳಿದ್ದ. ಚಾಲಕನಾಗಿದ್ದ ಶಂಕರ್, ಅಶ್ವಿನಿ ಮನೆ ನಿರ್ಮಿಸುವ ಸಂದರ್ಭದಲ್ಲಿ ಪರಿಚಿತನಾಗಿದ್ದ. ಕಾಲಕ್ರಮೇಣ ಸ್ನೇಹ ಗಾಢವಾಗಿ, ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ.
ಶಂಕರ್ ಪಾಟೀಲ್, ಅಶ್ವಿನಿಯಿಂದ ಸುಮಾರು ಐದು ಲಕ್ಷ ರೂ. ಸಾಲ ಪಡೆದುಕೊಂಡಿದ್ದು, ಅದನ್ನು ಹಿಂದಿರುಗಿಸುವಂತೆ ಅಶ್ವಿನಿ ಕೇಳಿದ್ದಳು. ಹಣ ವಾಪಸ್ ಕೇಳಿದ ಅಶ್ವಿನಿಯನ್ನು ಜಾತ್ರೆಯ ನೆಪದಲ್ಲಿ ಕರೆದುಕೊಂಡು ಹೋಗಿ, ಅರಣ್ಯ ಪ್ರದೇಶದಲ್ಲಿ ತಲೆಗೆ ರಾಡ್ ಹೊಡೆದು ಬರ್ಬರವಾಗಿ ಕೊಲೆ ಮಾಡಿ, ಶವ ಎಸೆದಿದ್ದಾನೆ. ಈ ಬಗ್ಗೆ ಆರೋಪಿ ಸ್ವತಃ ಪೊಲೀಸ್ ವಿಚಾರಣೆ ವೇಳೆ ತಪ್ಪೊಪ್ಪಿಗೆ ನೀಡಿದ್ದಾನೆ.
ನಂದಗಡ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಕಾರವಾರದ ರಾಮನಗರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ಆರಂಭಿಸಲಾಗಿದೆ. ಆರೋಪಿತನಿಂದ ಪೂರ್ಣ ಪ್ರಮಾಣದಲ್ಲಿ ಮಾಹಿತಿ ಸಂಗ್ರಹಿಸಿ, ನಿಖರ ಸತ್ಯವನ್ನು ಬಹಿರಂಗಪಡಿಸಲು ಹೆಚ್ಚಿನ ತನಿಖೆ ಕೈಗೊಳ್ಳಲಾಗುತ್ತದೆ ಎಂದು ಬೆಳಗಾವಿ ಎಸ್ಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
ಇದನ್ನು ಓದಿ : ಅಕ್ಟೋಬರ್ 13 ರಂದು ಮುರ್ಡೇಶ್ವರದಲ್ಲಿ ಸಮುದ್ರ ಆರತಿ ಕಾರ್ಯಕ್ರಮ.
ಅಕ್ಕಿ ಜೊತೆ ದಿನಸಿ ವಸ್ತುಗಳ ಇಂದಿರಾ ಆಹಾರ ಕಿಟ್ ನೀಡಲು ಸರ್ಕಾರದ ತೀರ್ಮಾನ.
ಅಲೆಗಳ ಅಬ್ಬರಕ್ಕೆ ಮುಳುಗಿದ ಬೋಟ್. ಬಂದರು ಸಮೀಪವೇ ಘಟನೆ.
ಭಟ್ಕಳ ಮೂಲದ ಕುಮಟಾ ಪುರಸಭೆ ಕಂದಾಯ ನಿರೀಕ್ಷಕ ಬೆಳಗಾವಿಯಲ್ಲಿ ಪತ್ತೆ. ದೌಡಾಯಿಸಿದ ಪೊಲೀಸರು.