ಹುಬ್ಬಳ್ಳಿ (HUBBALLI): ಹಳೆಯ ದ್ವೇಷಕ್ಕೆ ಯುವಕನೋರ್ವನನ್ನ ಬರ್ಬರವಾಗಿ ಹತ್ಯೆಗೈದ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಗೋಪನಕೊಪ್ಪದ ಸಂತೋಷನಗರದ ಬಳಿ ಈ ಕೊಲೆ ನಡೆದಿದ್ದು ಶಿವು ಚಂದ್ರಶೇಖರ್ ಕಮ್ಮಾರ (23) ಕೊಲೆಯಾದ ಯುವಕ. ಚಾಕುವಿನಿಂದ ಇರಿದು ದುಷ್ಕರ್ಮಿ ಕೊಲೆಗೈದಿದ್ದಾನೆ. ಸುದೀಪ್ ರಾಯಾಪುರ ಎಂಬಾತಾನೆ ಕೊಲೆ ಮಾಡಿದ ಆರೋಪಿ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಸ್ಥಳಕ್ಕೆ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ(N SHASHIKUMAR) ಹಾಗೂ ಡಿಸಿಪಿ (DCP) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಬ್ಬಳ್ಳಿಯ ಅಶೋಕ್ ನಗರ ಪೋಲಿಸ್ ಠಾಣೆಯಲ್ಲಿ(ASHOKNAGAR POLICE STATION) ಪ್ರಕರಣ ದಾಖಲಾಗಿದೆ.
ಪರಾರಿಯಾದ ಆರೋಪಿಗಳ ಪತ್ತೆಗೆ ಬಲೆ ಬೀಸಿದ ಹು-ಧಾ ಪೊಲೀಸರು ಕೊಲೆ ಆರೋಪಿಗಳಿಗಾಗಿ ತಲಾಶ್ ನಡೆಸಿದ್ದರು. ಹಳೆ ಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ತಪ್ಪಿಸಿಕೊಳ್ಳಲೆತ್ನಿಸಿದ ಆರೋಪಿಗಳಾದ ಸುದೀಪ್, ಕಿರಣ್ ಮೇಲೆ ಪೊಲೀಸರು ಫೈರಿಂಗ್ (FIRING) ನಡೆಸಿ ಬಂಧಿಸಿದ್ದಾರೆ. ಹಂತಕರಿಬ್ಬರಿಗೆ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನು ಓದಿ : ಬೆಣಂದೂರು ಅರಣ್ಯದಲ್ಲಿ ಹಂತಕರು
ಭೀಕರ ರೈಲು ಅಪಘಾತ. ಬೋಗಿಗಳಿಗೆ ಬೆಂಕಿ
ವಿಚಾರಣಧೀನ ಖೈದಿ ಆತ್ಮಹತ್ಯೆಗೆ ಯತ್ನ
ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಆಯುಧ ಪೂಜೆ ಸಂಭ್ರಮ