ಜೊಯಿಡಾ(Joida) : ಅಕ್ರಮವಾಗಿ ವನ್ಯಪ್ರಾಣಿಯ(Wild Animal) ಮಾಂಸವನ್ನು ಸಂಬಂಧಿಗಳಿಗೆ ಹಂಚಲು ಸಾಗಿಸುತ್ತಿದ್ದ ಇಬ್ಬರನ್ನ ಬಂಧಿಸಿದ ಘಟನೆ ಕಾಳಿ ಹುಲಿ ಸಂರಕ್ಷಿತ ಪ್ರದೇಶದ (Kali Tiger Reserve Forest) ಗುಂದ ವನ್ಯಜೀವಿ(Gunda Wildlife) ವಲಯದ ಉಳವಿ(Ulavi) ವ್ಯಾಪ್ತಿಯಲ್ಲಿ ನಡೆದಿದೆ.
ಉಳವಿಯ ಗೋಪಾಲ ತಾಂಬಡೋ ವೇಳಿಪ (50), ಶಾಲಿನಿ ಗೋಪಾಲ ವೇಳಿಪ (50) ಬಂಧಿತರು. ಬಂಧಿತರಿಂದ ಕತ್ತಿ, ಕಾಡು ಕುರಿಯ ಮಾಂಸವನ್ನ ವಶಪಡಿಸಿಕೊಂಡು ತನಿಖೆ ನಡೆಸಲಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ(Dfo) ನಿಲೇಶ ಸಿಂಧೆ ದೋವೋಬಾ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (Acf) ಎಮ್ ಎಸ್ ಕಳ್ಳಿಮಠ ನೇತೃತ್ವದಲ್ಲಿ ವಲಯ ಅರಣ್ಯಾಧಿಕಾರಿ ನೀಲಕಂಠ ಎಲ್ ದೇಸಾಯಿ, ಉಪ ವಲಯ ಅರಣ್ಯಾಧಿಕಾರಿ ವಿನೋದ ಪತ್ತಾರ, ದಯಾನಂದ ಮುಗಳಿ, ಮುತ್ತಪ್ಪ ಹುಲಕೋಟಿ, ಸಂತೋಷ ಪೂಜಾರಿ ಹಾಗೂ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನು ಓದಿ : ಭಟ್ಕಳದ ಈರಯ್ಯ ಬೇಡುಮನೆಗೆ ಜಾನಪದ ಪ್ರಶಸ್ತಿಯ ಗರಿ
ಮನೆಯ ಮುಂದಿನ ಕಾಡಿನಲ್ಲಿ ಮಹಿಳೆ ಅಸ್ಥಿಪಂಜರ ಪತ್ತೆ
ದಾಂಡೇಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಹೃದಯಘಾತ
ಮಾನವೀಯ ಗುಣ ಬಿಟ್ಟು ಹೋದ ಚಿತ್ರ ನಿರ್ದೇಶಕ ಗುರುಪ್ರಸಾದ್
👍