ಕಾರವಾರ : ರಾಜ್ಯದಲ್ಲಿ ಮುಂಗಾರು ಮಳೆ ಸಖತ್ ಎಂಟ್ರಿ ಕೊಟ್ಟಿದೆ. ಉತ್ತರಕನ್ನಡ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಬಾರೀ ವರ್ಷಧಾರೆಯಾಗಿದೆ.

ಅಂಕೋಲಾ ತಾಲೂಕಿನಲ್ಲೆಡೆ ಸುರಿದ ಬಾರೀ ಮಳೆಯಿಂದಾಗಿ ತಗ್ಗು ಪ್ರದೇಶ ಜಲಾವೃತವಾಗಿದೆ. ಬೊಳೆಯ ನಾಡವರ ಕೇರಿಗೆ  ನೀರು ನುಗ್ಗಿದೆ. ಅಲ್ಲದೆ ಅಂಗನವಾಡಿ ಕೇಂದ್ರಕ್ಕೆ ಮಳೆ ನೀರು ನುಗ್ಗಿ  ಆವಾಂತರ ಸೃಷ್ಟಿಯಾಗಿದೆ. ಪಟ್ಟಣದ ರಸ್ತೆಗಳೆಲ್ಲ ನೀರು ತುಂಬಿದ್ದರಿಂದ ವಾಹನ ಸವಾರರು, ನಾಗರಿಕರು ತೊಂದರೆ ಅನುಭವಿಸಿದರು.

ಕುಮಟಾ ಮತ್ತು ಹೊನ್ನಾವರದಲ್ಲಿ ಮಧ್ಯಾಹ್ನದ ಸಮಯದಲ್ಲಿ ಬಾರೀ ಮಳೆ ತೊಂದರೆ ಉಂಟುಮಾಡಿತ್ತು. ಇನ್ನೂ ಭಟ್ಕಳದಲ್ಲೂ ಕೂಡ ನಿರಂತರವಾಗಿ ಮಳೆ ಬಿದ್ದಿದರಿಂದ ವಾಹನ ಸವಾರರು, ಪೇಟೆಗೆ ಬಂದವರು ತೊಂದರೆ ಅನುಭವಿಸಿದರು.

ಕಾರವಾರದಲ್ಲಿ ಸಂಜೆ 5ಗಂಟೆ ಬಳಿಕ ಬಾರೀ ವರ್ಷಧಾರೆಯಾಗಿದೆ. ಜಡಿಮಳೆಯಿಂದ ಜನಜೀವನ ಅಸ್ತವ್ಯಸ್ತ ವಾಗಿದೆ.