ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕುಮಟಾ(Kumta): ಹೆಸ್ಕಾಂಕುಮಟಾ ಉಪವಿಭಾಗದ 110ಕೆ.ವಿ ಕುಮಟಾ ಉಪಕೇಂದ್ರದಲ್ಲಿ ತುರ್ತುನಿರ್ವಹಣಾ ಕಾಮಗಾರಿ ಇರುವುದರಿಂದ 33ಕೆ.ವಿ ಗೋಕರ್ಣ(Gokarn) ಉಪಕೇಂದ್ರದ ವ್ಯಾಪ್ತಿಯ ಹಲವು ಭಾಗಗಳಲ್ಲಿ ಡಿಸೆಂಬರ್ 31ರಂದು ವಿದ್ಯುತ್ ವ್ಯತ್ಯಯವಾಗಲಿದೆ.

ಮಾದನಗೇರಿ, ಗೋಕರ್ಣ, ತದಡಿ, ಬಂಕಿಕೊಡ್ಲ, ಬಿಜ್ಜೂರು, ಗಂಗಾವಳಿ, ಓಂ ಬೀಚ್ ಮಾರ್ಗದಲ್ಲಿ ಹಾಗೂ 33 ಕೆ.ವಿ ಮರಾಕಲ್ ಮಾರ್ಗದ ಸಂತೆಗುಳಿ, ಕಲ್ಲಬ್ಬೆ, ಹೊದ್ಕೆ-ಶಿರೂರು, ಚಂದಾವರ ಹಾಗೂ ಮೂರುರು ಫೀಡರಿನ ಎಲ್ಲಾ ಭಾಗದಲ್ಲಿ ಡಿ.31 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ .

ಹಾಗೂ ಕುಮಟಾ ಉಪವಿಭಾಗದ(Kumta Subdivision) ಮಿರ್ಜಾನ ಭಾಗದಲ್ಲಿ ಹೊಸ 11ಕೆ.ವಿ ಮಾರ್ಗದ ರಚನೆ ಕಾಮಗಾರಿ ಇರುವುದರಿಂದ ಮಿರ್ಜಾನ 11ಕೆ.ವಿ(Mirjan 11kv) ಮಾರ್ಗದ ವ್ಯಾಪ್ತಿಯ ದುಂಡಕುಳಿ, ಯಲವಳ್ಳಿ, ಖೈರೆ, ಮಿರ್ಜಾನ್, ಕೋಡ್ಕಣಿ, ಖಂಡಗಾರ, ನಾಗೂರು ಭಾಗಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.  ಗ್ರಾಹಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು(ವಿ) ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ : ಜಾತ್ರೆಗೆ ಬರಬೇಕಾದ ಹಣ ಮಂಗ ಮಾಯಾ. ಅನಂತಮೂರ್ತಿ ಹೆಗಡೆ ಗಂಭೀರ ಆರೋಪ.

ಕಾಲೇಜು ವಿದ್ಯಾರ್ಥಿಗಳ ಪ್ರವಾಸದ ಬಸ್ ಪಲ್ಟಿ – 12 ಮಂದಿಗೆ ಗಂಭೀರ ಗಾಯ

ಆಟೋದಲ್ಲಿನ ಸಿಲಿಂಡರ್ ಸ್ಪೋಟ. ಬಾರೀ ಬೆಂಕಿ. ವ್ಯಾಪಕ ಹಾನಿ.