ಯಲ್ಲಾಪುರ : ಉತ್ತರಕನ್ನಡ (UTTARKANNADA) ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿದ್ದರಿಂದ ನದಿಗಳು ಉಕ್ಕಿ ಹರಿಯುತ್ತಿವೆ. ಅಬ್ಬರದ ಮಳೆಯಿಂದಾಗಿ ಅರಣ್ಯ ಇಲಾಖೆ (FOREST DEPARTMENT) ಪ್ರವಾಸಿಗರಿಗೆ ನಿರ್ಬಂಧ ಹೇರಿದೆ.
ಗಂಗಾವಳಿ ನದಿ ನೀರಿನ ಪ್ರಮಾಣ ಹೆಚ್ಚಳವಾಗಿದ್ದರಿಂದ ಯಲ್ಲಾಪುರ ತಾಲೂಕಿನ ಪಾಲ್ಸ್ ಗಳಿಗೆ ಪ್ರವಾಸಿಗರಿಗೆ ನಿಷೇಧಿಸಲಾಗಿದೆ. ಅರಣ್ಯ ಇಲಾಖೆಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಯಲ್ಲಾಪುರದ ಶಿರಲೆ ಪಾಲ್ಸ್ ,(FALLS) ಕಾನೂರು ಪಾಲ್ಸ್ , ಕುಳಿ ಮಾಗೋಡು(MAGODU) ಪಾಲ್ಸ್ ಗಳಿಗೆ ನಿರ್ಬಂಧಿಸಿ ಅರಣ್ಯ ಇಲಾಖೆ ಅಲ್ಲಲ್ಲಿ ಸೂಚನ ಫಲಕ ಅಳವಡಿಸಿದೆ.