ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೊನ್ನಾವರ(Honnavar): ಮಂಕಿ ಪೊಲೀಸ್(Manki Police) ಠಾಣಾ ವ್ಯಾಪ್ತಿಯ ದೊಡ್ಡಗುಂಡಾ ಗ್ರಾಮದಲ್ಲಿ ಪತ್ನಿಯನ್ನು ಕುಡಿದ ಮತ್ತಿನಲ್ಲಿ ಪತಿ ಕತ್ತು ಹಿಚುಕಿ ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಮಂಗಲಾ ಗಣಪತಿ ನಾಯ್ಕ (27) ಎಂಬವರೇ, ಪತಿ ಗಣಪತಿ ಮಂಜುನಾಥ ನಾಯ್ಕ ಅವರಿಂದ ಕೊಲೆಯಾದ ದುರ್ಧೈವಿ. ಮೃತಳ ಸಹೋದರಿ ನೀಡಿದ ದೂರಿನಲ್ಲಿ ಸಂಶಯ ಇರುವುದಾಗಿ ತಿಳಿಸಿದ್ದರು. ಮಂಗಲಾ ಅವರು ಜೋಯಿಡಾ(Joida) ತಾಲೂಕಿನ ನಂದಿಗದ್ದೆಯ(Nandigadde) ನಿವಾಸಿ ಹರಿಶ್ಚಂದ್ರ ದೇಸಾಯಿ ದೇಶಭಂಡಾರಿ ಅವರ ಮಗಳು.
ಆಗಸ್ಟ್ 25 ರಂದು ಬೆಳಿಗ್ಗೆ ಮನೆಯಲ್ಲಿ ಕುಡಿದ ಮತ್ತಿನಲ್ಲಿದ್ದ ಗಣಪತಿ ಮಂಜುನಾಥ ನಾಯ್ಕ ಮಲಗಿದ್ದ ಪತ್ನಿಯ ಬಾಯಿ-ಮೂಗು ಒತ್ತಿ, ಕುತ್ತಿಗೆ ಹಿಚುಕಿ ಕೊಲೆ ಮಾಡಿದ್ದಾನೆ. ಪತ್ನಿಗೆ ಹೃದಯಘಾತ ಆಗಿದೆ ಎಂದು ತವರು ಮನೆಯವರಿಗೆ ಕಾಲ್ಎಂ ಮಾಡಿ ತಿಳಿಸಿದ್ದಾನೆ.
ಹೀಗಾಗಿ ಸಂಶಯಗೊಂಡ ಮೃತಳ ಸಹೋದರಿ ಲಲಿತಾ ಸಚಿನ್ ಗುಂಜಿಕರ್ ಅವರು ಮಂಕಿ ಪೊಲೀಸ್ ಠಾಣೆಯಲ್ಲಿ(Manki Police Station) ದೂರು ನೀಡಿದ್ದರು
ಈ ಕುರಿತು ಮಂಕಿ ಠಾಣೆಯಲ್ಲಿ Crime No. 57/2026, BNS 103(1) ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮಾಹಿತಿಯ ಪ್ರಕಾರ ಕೊಲೆ ಆರೋಪಿ ಗಣಪತಿ ಮಂಜುನಾಥ ನಾಯ್ಕನನ್ನು ಬಂಧಿಸಿದ್ದಾರೆ.
ಡಿವೈಎಸ್ಪಿ ಗಿರೀಶ ಮತ್ತು ಸಿಪಿಐ ಜಗದೀಶ ಅವರ ಸಮರ್ಥ ಮಾರ್ಗದರ್ಶನದಲ್ಲಿ ಪಿಎಸ್ಐ ಕುಮಾರ್ ಕಾಂಬಳೆ ಅವರ ನೇತೃತ್ವದ ಪೊಲೀಸರ ತಂಡ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಪರಿಣಾಮವಾಗಿ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ. ತ್ವರಿತವಾಗಿ ಈ ಪ್ರಕರಣವನ್ನು ಭೇದಿಸಿದ ಪೊಲೀಸ್ ಅಧಿಕಾರಿಗಳ ಮತ್ತು ಪೊಲೀಸರ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಮಗಳ ಕೊಲೆಯಿಂದಾಗಿ ತೀವ್ರ ನೊಂದುಕೊಂಡಿರುವ ಮೃತರ ತಂದೆ ಹರಿಶ್ಚಂದ್ರ ದೇಸಾಯಿ ಮತ್ತು ಲಕ್ಷ್ಮೀ ಅವರು ಕೊಲೆಗಾರನಿಗೆ ಸೂಕ್ತ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. ನಮ್ಮ ಮಗಳ ಸಾವಿಗೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ವಿಶೇಷ ಕಾಳಜಿಯಿಂದ ಹಾಗೂ ಬದ್ಧತೆಯಿಂದ ಕಾರ್ಯನಿರ್ವಹಿಸಿರುವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
