ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ಹೊನ್ನಾವರ(Honnavar) : ತಾಲೂಕಿನ ದೊಡ್ಡಗುಂಡದಲ್ಲಿ ವಿವಾಹಿತೆ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ(Suspect Death).

ಮಂಗಳಾ ಗಣಪತಿ ನಾಯ್ಕ (27) ಮೃತ ಮಹಿಳೆಯಾಗಿದ್ದಾಳೆ. ಈಕೆಯ ಸಾವಿನ ಬಗ್ಗೆ ಸಹೋದರಿ ದಾಂಡೇಲಿಯ(Dandeli) ಲಲಿತಾ ಸಚಿನ್ ಗುಂಜಿಕರ್ ಎಂಬುವವರು ಮಂಕಿ ಪೊಲೀಸ್ ಠಾಣೆಯಲ್ಲಿ(Manki Police Station) ದೂರು ನೀಡಿದ್ದಾರೆ. ತನ್ನ ತಂಗಿಗೆ ಮದುವೆಯಾಗಿ 5 ವರ್ಷವಾಗಿದ್ದು, ತಂಗಿಯ ಸಾವಿನಲ್ಲಿ ತಮಗೆ ಸಂಶಯವಿದೆ. ಹೀಗಾಗಿ ತನಿಖೆ ನಡೆಸಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.

ಕಾರವಾರ ಜಿಲ್ಲಾಸ್ಪತ್ರೆಯಲ್ಲಿ(Karwar District Hospital) ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಸಂಬಂಧ ಮಂಕಿ ಪೊಲೀಸರು ತನಿಖೆ(Manki Police Investigation) ಕೈಗೊಂಡಿದ್ದಾರೆ.