KARWAR.ಕಾರವಾರ : ಸರ್ಕಾರದಿಂದ ತಾಲೂಕಿನ ಜಾಂಬಾ ಗ್ರಾಮದ ಬಳಿ ಲೋಕೋಪಯೋಗಿ ಇಲಾಖೆ ನಿರ್ಮಿಸಿದ ಸೇತುವೆಗಳು ಉದ್ಘಾಟನೆಗೂ ಮುನ್ನವೇ ಕುಸಿದು ಹಾನಿಯಾಗಿವೆ.

ಕಡವಾಡ(KADWAD) ಗ್ರಾಮ ಪಂಚಾಯತ್ ವ್ಯಾಪ್ತಿಯ ಜಾಂಬಾ ಗ್ರಾಮದಿಂದ ಬೇಳೂರು(BELOORU) ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಗುಡ್ಡದ ನೀರು ಹರಿದುಹೋಗಳು ಐದು ಸೇತುವೆ ಗಳನ್ನು ನಿರ್ಮಿಸಲಾಗಿತ್ತು. ಇದರಲ್ಲಿ ಎರಡು ಸೇತುವೆಗಳು ಉದ್ಘಾಟನೆಗೂ ಮುನ್ನವೇ ಕುಸಿದಿವೆ.

ಶಿರವಾಡದ ಜಮಬಾದಿಂದ (JAMBA To BELUR)ಬೇಳೂರು ಸಂಪರ್ಕಿಸುವ ರಸ್ತೆಯಾಗಿದ್ದು ಜನ ಸಂಚಾರಕ್ಕೆ ಅನಾನುಕೂಲ ಉಂಟಾಗಿದೆ.

ಸೇತುವೆಯ ಎರಡೂ ತುದಿಗಳಲ್ಲಿ ಸರಿಯಾಗಿ ಕಲ್ಲು ಮಣ್ಣುಗಳನ್ನ ಹಾಕಿಲ್ಲ ಎಂಬ ಆರೋಪ ಕೇಳಿಬಂದಿದೆ. ಕಳೆದ ಮೂರಾಲ್ಕು ದಿನ ಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಮಣ್ಣು ಕೊಚ್ಚಿಹೋಗಿದ್ದು ಕಾಂಕ್ರೀಟ್ (CONCRETE) ಕುಸಿದಿದೆ. ಯಾವುದೇ ವಾಹನಗಳು ಸೇತುವೆ ದಾಟದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸುಮಾರು ಎರಡೂವರೆ ಕೋಟಿ ರೂ ಅನುದಾನದಲ್ಲಿ ಗುಡ್ಡದ ಡಾಂಬರ್ ರಸ್ತೆ (DAMBER ROAD) ಹಾಗೂ  ಸೇತುವೆಗಳನ್ನು   ನಿರ್ಮಿಸಲಾಗಿತ್ತು. ಇದರಲ್ಲಿ ಎರಡು ಕಡೆ ಸೇತುವೆ ಕುಸಿತವಾಗಿದೆ. ಕಳಪೆ ಕಾಮಗಾರಿ ಮಾಡಿದ್ದರಿಂದ ಹಾನಿಗೊಳಗಾಗಿವೆ.