ಭಟ್ಕಳ(BHATKAL) : ಸಮಾಜದಲ್ಲಿ ಧನಿಕರು, ಸ್ಥಿತಿವಂತರು ಇನ್ನೊಬ್ಬರಿಗೆ ಸಹಾಯ ಮಾಡುವುದು ಬಹಳ ಅಪರೂಪ. ಕೆಲವರು ತಾವೂ ದುಡಿದ ಹಣವನ್ನು ಕಿಂಚಿತ್ತಾದರೂ ದಾನ ಮಾಡುತ್ತಾ ಸಮಾಜದ ಹಿತವನ್ನು ಬಯಸುತ್ತಾರೆ. ಭಟ್ಕಳ ತಾಲೂಕಿನ  ಬಲ್ಸೇಯ ವ್ಯಕ್ತಿಯೋರ್ವರು ತೆರೆಮರೆಯಲ್ಲಿ ಸಹಾಯ ಮಾಡುತ್ತಿದ್ದಾರೆ.

ಅವರೇ ಯಂಗ್ ಒನ್ ಇಂಡಿಯಾ (YOUNG ONE INDIA) ಸಂಸ್ಥಾಪಕರಾದ (FOUNDER) ಮಾಸ್ತಪ್ಪ ನಾಯ್ಕ. ಕಳೆದ ಹಲವು ವರ್ಷಗಳಿಂದ ಮಾಸ್ತಪ್ಪ ನಾಯ್ಕ ಅನಾರೋಗ್ಯಕ್ಕೆ ಒಳಗಾದವರಿಗೆ ಸಹಾಯ ಹಸ್ತ ಚಾಚುವುದು. ಅಸಹಾಯಕರಿಗೆ ನೆರವಾಗುತ್ತಿದ್ದಾರೆ.

ಭಟ್ಕಳ ತಾಲೂಕಿನ ತೆಂಗಿನಗುಂಡಿಯಲ್ಲಿ ಶಿಥಿಲಾವಸ್ಥೆಗೆ ತಲುಪಿದ ಅಂಗನವಾಡಿಯ ನವೀಕರಣಕ್ಕಾಗಿ ಇವರು ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಅಂಗನವಾಡಿ ಕಟ್ಟಡವು 1998 ನಿರ್ಮಾಣಗೊಂಡಿದ್ದು ಅಲ್ಲಿಂದ ಇಲ್ಲಿಯವರೆಗೆ ಯಾವುದೇ ರೀತಿಯ ಪೇಂಟಿಂಗ್ ಮತ್ತು ಯಾವುದೇ ರೀತಿಯ ಕೆಲಸ ಕಾರ್ಯಗಳು ನಡೆದಿರಲಿಲ್ಲ. ಇದನ್ನು ಗಮನಿಸಿದ ತೆಂಗಿನಗುಂಡಿಯ ಯುವ ನಾಯಕ ವಿಶ್ವ ನಾಯ್ಕ ತನ್ನ ಗೆಳೆಯರೊಂದಿಗೆ ಚರ್ಚಿಸಿ ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿಯನ್ನು ಪುನರ್ ನಿರ್ಮಾಣ ಮಾಡಬೇಕೆಂದು ಪಣತೊಟ್ಟರು. ಆಗ ತನ್ನ ಗೆಳೆಯರೊಂದಿಗೆ ಚರ್ಚಿಸಿ, ಸಮಾಜ ಸೇವಕರಾದ ಮಾಸ್ತಪ್ಪ ನಾಯ್ಕ ಅವರ ಬಳಿ  ವಿಚಾರ ತಿಳಿಸಿದರು. ತಕ್ಷಣ  ಸಕಾರಾತ್ಮಕವಾಗಿ ಸ್ಪಂದಿಸಿದ ಮಾಸ್ತಪ್ಪ ನಾಯ್ಕ ಅವರು ಅಂಗನವಾಡಿಯನ್ನು ನವೀಕರಣಗೊಳಿಸಿ ಕೊಡುವುದಾಗಿ ವಾಗ್ದಾನ ಮಾಡಿದರು.

ಹಳೆಯ ಅಂಗನವಾಡಿ ಕಟ್ಟಡಕ್ಕೆ ಕಲರ್ ಪುಲ್ ಪೇಂಟಿಂಗ್ ಮಾಡಿಸಿ ಸಖತ್ ಆಗಿ ಡಿಸೈನ್ ಮಾಡಿಸಿದ್ದಾರೆ. ಅಂಗನವಾಡಿ ಮಕ್ಕಳು ಖುಷಿ ಖುಷಿಯಾಗಿರುವ ಹಾಗೆ ಕಾರ್ಟೂನ್ ಗಳನ್ನ ಮಕ್ಕಳಿಗೆ ಅರಿವಾಗುವಂತಹ ಚಿತ್ರಗಳನ್ನ ಬಿಡಿಸಿಕೊಟ್ಟಿದ್ದಾರೆ. ಈ ಕಾರ್ಯಕ್ಕೆ  ಊರಿನ ಯುವಕರಾದ ರಾಘವೇಂದ್ರ ನಾಯ್ಕ,  ನಾರಾಯಣ ನಾಯ್ಕ,  ಧನರಾಜ್ ನಾಯ್ಕ,  ಹರೀಶ್ ನಾಯ್ಕ,  ಅಭಿಷೇಕ್ ನಾಯ್ಕ,  ಅನಿಲ್ ನಾಯ್ಕ, ನಿತಿನ್ ನಾಯ್ಕ ಎಲ್ಲರೂ ಸೇರಿ ಶ್ರಮದಾನ ಮಾಡುವ ಮುಖಾಂತರ ಮಾದರಿ ಕಾರ್ಯಕ್ಕೆ ಸಾಥ್ ನೀಡಿದ್ದಾರೆ.

ಸಂಪೂರ್ಣ ಅಂಗನವಾಡಿಯನ್ನು ನವೀಕರಣ  ಮಾಡಿಸಿಕೊಟ್ಟ ಯಂಗ್ ಒನ್ ಇಂಡಿಯಾ ಸಂಸ್ಥಾಪಕರಾದ ಮಾಸ್ತಪ್ಪ ನಾಯ್ಕ ಅವರಿಗೆ ಊರವರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನ ಸಲ್ಲಿಸಿದ್ದಾರೆ. ಮಾಸ್ತಪ್ಪ ಅವರ ಈ ಕಾರ್ಯ ಉಳ್ಳವರಿಗೆ ಮಾದರಿಯಾಗಬೇಕಾಗಿದೆ.