ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕಾರವಾರ(Karwar) : ತಮ್ಮ ಕ್ಷೇತ್ರದ ನಾಗರಿಕರ ಪ್ರಮುಖ ಬೇಡಿಕೆಯೊಂದನ್ನ ಈಡೇರಿಸಿಕೊಳ್ಳುವ ಮೂಲಕ ಕಾರವಾರ ಶಾಸಕ ಸತೀಶ ಸೈಲ್(Karwar MLA Satish Sail) ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ.

ಕೆಲ ತಿಂಗಳ ಹಿಂದೆ ಇಲ್ಲಿನ ಜನರ ಆರೋಗ್ಯ ವ್ಯವಸ್ಥೆ(Health System) ಸರಿಯಾಗದಿರುವುದಕ್ಕೆ ಅಸಮಧಾನಗೊಂಡಿದ್ದ ಶಾಸಕ ಸತೀಶ್ ‌ಸೈಲ್(MLA Satish Sail) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಎಚ್ಚರಿಕೆಯನ್ನು ನೀಡಿದ್ದರು. ತಮ್ಮ ಗಡುವನ್ನು ಲಘುವಾಗಿ ಪರಿಗಣಿಸದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiha) ಅವರಿಗೆ ತಿಳಿಸಿದ್ದರು. ಕ್ಷೇತ್ರದಲ್ಲಿ ಬಡ ನಾಗರಿಕರಿಗೆ ಆರೋಗ್ಯ ತೊಂದರೆ ಸಾಕಷ್ಟಿದ್ದು ದೂರದ ಹುಬ್ಬಳ್ಳಿ(Hubli), ಬೆಳಗಾವಿ(Belagavi), ಗೋವಾ(Goa), ಮಂಗಳೂರು(Mangalore), ಮಣಿಪಾಲ(Manipal) ಕಡೆ ತೆರಳುತ್ತಿದ್ದಾರೆ. ಹೀಗಾಗಿ ಕಾರವಾರದಲ್ಲಿ ‌ಸೂಪರ್ ಸ್ಪೆಷಲಿಟಿ ಆಸ್ಪತ್ರೆ(Karwar Super Speciality Hospital) ಘೋಷಿಸುವಂತೆ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು.

ಕೆಲ ದಿನಗಳ ಹಿಂದೆ ಆಸ್ಪತ್ರೆ ನೂತನ ಕಟ್ಟಡ ಉದ್ಘಾಟನೆಗೆ ಕಾರವಾರಕ್ಕೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ(CM Siddaramaiha) ಹಾಗೂ‌ ಡಿಸಿಎಂ ಡಿ ಕೆ ಶಿವಕುಮಾರ್(DCM D K Shivakumar) ಮುಂದೆ ಕೈ ಮುಗಿದು ಪ್ರಾರ್ಥಿಸಿದ್ದರು. ವೇದಿಕೆಯಲ್ಲಿ ಸಿಎಂ ಡಿಸಿಎಂ ‌ಅಭಯ ನೀಡಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ನಲ್ಲಿ 100ಕೋಟಿ‌ ರೂ ಸೂಪರ್ ಸ್ಪೆಷಲಿಟಿ ಆಸ್ಪತ್ರೆಯ ಘೋಷಣೆ(Super Speciality Hospital Declared) ಮಾಡಲಾಗಿದೆ. ಹೀಗಾಗಿ ‌ಶಾಸಕ ಸತೀಶ ಸೈಲ್ ರಾಜೀನಾಮೆ(Satish Sail Resign) ನೀಡುವ ಪ್ರಮೇಯ‌ ದೂರ ಉಳಿದಂತಾಗಿದೆ.

ಸೂಪರ್ ಸ್ಪೆಷಲಿಟಿ ಆಸ್ಪತ್ರೆ(Super Specialist Hospital) ಘೋಷಣೆಯಿಂದ ಜಿಲ್ಲೆಯ ನಾಗರಿಕರು ಖುಷಿಯಾಗಿದ್ದಾರೆ. ಆದರೆ ಆಸ್ಪತ್ರೆಗೆ ಬೇಕಾಗುವ ತಜ್ಞ ವೈದ್ಯರು ಎಲ್ಲಿಂದ ಬರ್ತಾರೆ? ಸರ್ಕಾರ ಹೇಗೆ ನಿಯೋಜಿಸುತ್ತೆ ಎಂಬ ಪ್ರಶ್ನೆ ಕಾಡುತ್ತಿದೆ. ಇದೀಗ ಆಗಿರುವ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಯಲ್ಲಿಯೇ ಸೂಕ್ತ ವೈದ್ಯರು‌ ಇಲ್ಲದಿರುವ ಬಗ್ಗೆ ರೋಗಿಗಳ ಗಂಭೀರ ಆರೋಪವಿದೆ. ಹೀಗಾಗಿ ಅಗತ್ಯವಿರುವ ತಜ್ಞ ವೈದ್ಯರನ್ನ ಸರ್ಕಾರ ನೇಮಿಸಿ‌ ಬಡ ಕುಟುಂಬದ ರೋಗಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಬೇಕಾಗಿದೆ. ಮುಂದಿನ ಬಜೆಟ್ ಒಳಗೆ ಸೂಕ್ತ ವೈದ್ಯರನ್ನು ನಿಯೋಜಿಸಿದರೆ ಮಾತ್ರ ಘೋಷಣೆಗೆ ಮಹತ್ವ ಬರಲಿದೆ. ಇಲ್ಲದಿದ್ದಲ್ಲಿ ಪೊಳ್ಳು ಆಶ್ವಾಸನೆ ಆಗಬಹುದೆಂಬುದು‌  ಸರ್ಕಾರಕ್ಕೆ ತಿಳಿದಿರಲಿ.

ಇದನ್ನು ಓದಿ : ಖ್ಯಾತ ಈಜು ಪಟು, ಚಿತ್ರ ಕಲಾವಿದ ಮೋಹನ ತಾಂಡೇಲ ವಿಧಿವಶ.

ಸರ್ಕಾರಿ ಬಸ್ ಮತ್ತು ಕಾರಿನ ನಡುವೆ ಭೀಕರ ಅಪಘಾತ. ಓರ್ವ ಸಾವು