ಬೈಂದೂರು(BYANDURU): ಉಡುಪಿ(UDUPI) ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಕುಂದಾಪುರ(KUNDAPURA) ತಾಲೂಕಿನ ಗುಜ್ಜಾಡಿ ಗ್ರಾಮದ ಬೆಣ್ಗೇರಿ, ಮಡಿ ಮತ್ತು ಲೈಟ್ ಹೌಸ್ ಪರಿಸರಗಳಲ್ಲಿ ಸಮುದ್ರ ತೀರ ಪ್ರಕ್ಷುಬ್ಧಗೊಂಡಿದೆ. ಸಮುದ್ರದಂಚಿನ ನಿವಾಸಿಗಳು ಆತಂಕದಲ್ಲಿ ದಿನ ಕಳೆಯುವ ಪರಿಸ್ಥಿತಿ ಎದುರಾಗಿದೆ.

ಕಳೆದ ಕೆಲ ದಿನದಿಂದ ಕಡಲು ಅಬ್ಬರಿಸುತ್ತಿದೆ. ಹೀಗಾಗಿ ಹಲವು ವರ್ಷಗಳಿಂದ ವಾಸಿಸುತ್ತಿದ್ದ ಕುಟುಂಬಗಳು ಕಂಗಲಾಗಿವೆ. ತಾಲೂಕಿನ ಹಲವು ಕಡೆಗಳಲ್ಲಿ ಸಮುದ್ರ ಅಲೆ ತಡೆಯುವ ನಿಟ್ಟಿನಲ್ಲಿ ತಡೆಗೋಡೆ ನಿರ್ಮಿಸಿದ್ದಾರೆ, ಆದರೆ ಭಾಗಗಳಲ್ಲಿ   ತಡೆಗೋಡೆ ನಿರ್ಮಿಸದೆ ಇರುವುದರಿಂದ  ಕಡಲ ಅಲೆಗಳು ನೇರವಾಗಿ  ನಮ್ಮ ಮನೆಗೆ ಬಂದು ಅಪ್ಪಳಿಸುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಾವು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರು ನಮ್ಮನ್ನು ಯಾರು ಕೇಳುವವರೇ? ಇಲ್ಲವೆಂದು ಸ್ಥಳೀಯರು ನೊಂದು ಮಾತಾಡುತ್ತಿದ್ದಾರೆ.

ಕಡಲು ಪ್ರಕ್ಷುಬ್ಧಗೊಂಡಿದ್ದರಿಂದ ಕಡಲ ಅಲೆಗಳು ಮನೆಗಳ ಹತ್ತಿರ ಬರುತ್ತಿದ್ದು  ಸ್ಥಳೀಯ ನಿವಾಸಿಗಳು ಜೀವಭಯದಲ್ಲಿ ಬದುಕುವಂತಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಸಮುದ್ರದ ಮಟ್ಟ ಏರಿಕೆಗೊಂಡ ಹಿನ್ನಲೆಯಲ್ಲಿ ಅಮಾವಾಸೆ, ಹುಣ್ಣಿಮೆ ಸಮಯದಲ್ಲಿ, ಮಳೆಗಾಲ, ತೂಫಾನ್,  ಚಂಡಮಾರುತ ಸಮಯದಲ್ಲಿ ಸಮುದ್ರದ ನೀರು ಮನೆಯ ಹಿತ್ತಲಿಗೆ ಬಡಿಯುವುದಲ್ಲದೇ ತೆಂಗಿನ ಮರಗಳು ಧರೆಗುರುಳುತ್ತಿವೆ. ಹೀಗಾಗಿ ಶಾಶ್ವತ ತಡೆಗೋಡೆ ಮಾಡಿ ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಭಾಗಗಳ ನಾಗರಿಕರ ಸಮಸ್ಯೆ ಆಲಿಸಿ ಸೂಕ್ತ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕಾಗಿದೆ.

ಇದನ್ನು ಓದಿ : ರಾಜನಂತೆ ನಡೆದ ರಾಜಣ್ಣ

ಹಸಿರು ಪೀಠ ಆದೇಶ