ಕಾರವಾರ (KARWAR):   ಮಣ್ಣಿನ ಗೋಡೆ ಕುಸಿದು ವೃದ್ಧೆಯೋರ್ವಳು ಮೃತಪಟ್ಟ ಘಟನೆ  ಕಾರವಾರ ತಾಲೂಕಿನ  ಅಸನೋಟಿ (Asnoti) ಗ್ರಾಮದಲ್ಲಿ  ನಡೆದಿದೆ.

ರುಕ್ಮಾ ಮಾಂಜರೆಕರ್ (70) ದುರ್ಘಟನೆಯಲ್ಲಿ ಸಾವಿಗೀಡಾದ ಮಹಿಳೆ. ಗಟ್ಟಿಮುಟ್ಟಾಗಿದ್ದ ರುಕ್ಮ ತನ್ನ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದಳು. ಗುರುವಾರ ತಮ್ಮ ಹಳೆಯ ಮನೆ ಸಮೀಪದಿಂದ ನಡೆದು ಹೋಗುತ್ತಿದ್ದಾಗ ಗೋಡೆ ಕುಸಿದು ಬಿದ್ದಿದೆ.

ಮಣ್ಣಿನಡಿ ಬಿದ್ದ ಆಕೆಯನ್ನ ಯಾರು ಗಮನಿಸಿರಲಿಲ್ಲ. ಮಳೆ ಬಂದ ವೇಳೆ ಕುಸಿದ ಮಣ್ಣಿನಲ್ಲಿ ಕಾಲು ಕಂಡಾಗ ಜನರಿಗೆ ಗೊತ್ತಾಗಿದೆ.  ಸ್ಥಳಕ್ಕೆ ಕಾರವಾರ ತಹಶೀಲ್ದಾರ್ ನಿಶ್ಚಲ್ ನರೋನ್ಹಾ ಮತ್ತು ಚಿತ್ತಾಕುಲ ಪೊಲೀಸರು  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.