ಹಾವೇರಿ:  ಬ್ಯಾಡಗಿ ತಾಲೂಕಿನ ಗುಂಡೇನಳ್ಳಿ ಕ್ರಾಸ್ ಬಳಿ ನಡೆದ ಭೀಕರ ಅಪಘಾತದಲ್ಲಿ 13 ಜನ ಸಾವನ್ನಪ್ಪಿದ ಘಟನೆ ನಡೆದಿದೆ.

ಶಿವಮೊಗ್ಗದ ಭದ್ರಾವತಿ ಮೂಲದ 13 ಜನ ಸಾವನ್ನಪ್ಪಿದ ದುರ್ದೈವಿಗಳು. ಅಂಜಲಿ ( 29),  ಆರ್ಯ (5),  ನಂದನ್( 3),  ಚಾಲಕ ಆದರ್ಶ್ ( 23 ), ವಿಶಾಲಾಕ್ಷಿ(49), ನಾಗೇಶ್ ರಾವ್ ( 50), ಸುಭದ್ರಾ ಬಾಯಿ( 60), ಮಾನಸಾ( 20), ರೂಪಾ ಬಾಯಿ( 35),  ಭಾಗ್ಯಬಾಯಿ( 45 ), ಅರುಣ್ ಕುಮಾರ್ ( 32 ), ಮಂಜುಳಾ( 54) ಮಂಜುಳಾ ಬಾಯಿ( 60) ಮೃತರು.

ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿಯಾಗಿದ್ದರಿಂದ ಈ ಅಪಘಾತ ಸಂಭವಿಸಿದೆ. ಮೃತದೇಹಗಳನ್ನ ಹೊರ ತೆಗೆಯಲು  ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದರು. ಕಾರ್ಯಾಚರಣೆ ವೇಳೆ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಕಣ್ಣಿಗೆ ಗಾಯವಾಗಿದೆ

ಅಪಘಾತದಲ್ಲಿ ಟೀಮ್ ಇಂಡಿಯಾದ ಪುಟ್ಬಾಲ್ ಆಟಗಾರ್ತಿ ಮಾನಸ ಸಾವನ್ನಪ್ಪಿದ್ದಾರೆ. ಮಾನಸ ಮುಂದೆ  ಐಎಎಸ್ ಆಗುವ ಕನಸು ಕಂಡು ಅದರ ತಯಾರಿ ನಡೆಸುತ್ತಿದ್ದಳು.
ಘಟನೆಯಲ್ಲಿ ಸಾವನ್ನಪ್ಪಿದ್ದ ಅರುಣ್ ಎಂಬುವವರು ಮದುವೆಯಾಗಿ ಎರಡು ವರ್ಷವಾಗಿದ್ದು  ಮೂರು ತಿಂಗಳ ಮಗುವಿದೆ.

ಘಟನೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಯಿ ಟ್ವಿಟ್ ಮೂಲಕ ಮೃತರ ಸಂಬಂಧಿಕರಿಗೆ ಸಾಂತ್ವನ ತಿಳಿಸಿದ್ದಾರೆ. ಲಾರಿ ಚಾಲಕ ಹಾಗೂ ಕ್ಲೀನರ್ ಬ್ಯಾಡಗಿ ಪೊಲೀಸರ ವಶಕ್ಕೆ ಪಡೆದಿದ್ದಾರೆ.

ನಾಲ್ಕು ಅಂಬುಲೇನ್ಸ್ ಗಳ ಮೂಲಕ ಮೃತದೇಹಗಳನ್ನ ಹುಟ್ಟೂರಿಗೆ ತರಲಾಗಿದ್ದು  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮೃತರ ಅಂತಿಮ‌ ದರ್ಶನ ಪಡೆಯಲು  ಸಾವಿರಾರು ಜನ ಆಗಮಿಸಿದ್ದರು. ಮೃತ ದೇಹಗಳು  ತರುತ್ತಿದ್ದಂತೆ  ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಳೆಯಲ್ಲೇ ನಿಂತು ಮೃತರ ಅಂತಿಮ ದರ್ಶನ ಪಡೆದರು.