ಕಾರವಾರ : ಗಡಿಭಾಗ ಕಾರವಾರದಲ್ಲಿ ವಟಸಾವಿತ್ರಿ ವೃತವನ್ನ ಶ್ರದ್ಧಾ-ಭಕ್ತಿಯಿಂದ ಮಹಿಳೆಯರು ಆಚರಿಸಿದರು.
ಭರತಖಂಡದಲ್ಲಿ ಪ್ರಸಿದ್ಧ ಪತಿವೃತೆಯರಲ್ಲಿ ಸಾವಿತ್ರಿ ಆದರ್ಶಪ್ರಾಯಳು. ಸಾವಿತ್ರಿಯನ್ನ ಸೌಭಾಗ್ಗ್ಯದ ಪ್ರತೀಕವೆಂದೇ ಪರಿಗಣಿಸಲಾಗುತ್ತಿದೆ. ಹೀಗಾಗಿ ಕಾರ ಜೇಷ್ಠ ಹುಣ್ಣಿಮೆಯಂದು ಸ್ತ್ರೀಯರು ಪತಿಯ ಆಯುಷ್ಯ-ಆರೋಗ್ಯ ವೃದ್ದಿಸಲೆಂದು ಪ್ರಾರ್ಥಿಸಿದರು.
ವಿಶೇಷವಾಗಿ ಊರ ಸುತ್ತಮುತ್ತಲಿರುವ ಆಲದ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ತನ್ನ ಗಂಡ, ಮಕ್ಕಳು, ಕುಟುಂಬಗಳಿಗೆ ಆಯುಷ್ಯವೃದ್ದಿಗೊಳಿಸುವಂತೆ ಹಾರೈಸುತ್ತಾರೆ. ಪರಸ್ಪರ ಅರಿಶಿಣ-ಕುಂಕುಮ ಹೂಗಳನ್ನ ವಿನಿಮಯ ಮಾಡಿಕೊಂಡ ಸ್ತ್ರೀಯರು ಸಂತಾನವೃದ್ದಿಗಾಗಿ ಆಶೀರ್ವದಿಸಿಕೊಂಡರು.
ಯಮಧರ್ಮನು ಸತ್ಯವಾನನ ಪ್ರಾಣಹರಣ ಮಾಡಿದ ನಂತರ ಸಾವಿತ್ರಿ ಯಮಧರ್ಮನೊಂದಿಗೆ ಮುರು ದಿನಗಳ ಕಾಲ ವಟವೃಕ್ಷದ ಕೆಳಗೆ ಕುಳಿತು ಶಾಸ್ತ್ರ ಚರ್ಚೆಯನ್ನ ಮಾಡುತ್ತಾಳೆ. ಅದರಿಂದ ಪ್ರಸನ್ನನಾಗಿ ಯಮಧರ್ಮ ಸತ್ಯವಾನನಿಗೆ ಪುನಃ ಜೀವಂತಗೊಳಿಸುತ್ತಾನೆ. ಹೀಗಾಗಿ ವಟವೃಕ್ಷಕ್ಕೆ ಸಾವಿತ್ರಿ ಹೆಸರು ಸೇರಿಕೊಂಡಿತು. ಸಾವಿತ್ರಿಯು ತನ್ನ ಪತಿಯ ಆಯುಷ್ಯ ವೃದ್ದಿಸಬೇಕೆಂದು ಹಾರೈಸಿದ ಹಾಗೆ ಸ್ತ್ರೀಯರು ಈ ದಿನದಂದು ತಮ್ಮ ಪತಿಯ ಆಯುಷ್ಯ ವೃದ್ದಿಯಾಗಲೆಂದು ಹಾರೈಸುತ್ತಾರೆ.
ವಟಸಾವಿತ್ರಿ ಹುಣ್ಣೆಮೆಯಂದು ಸ್ತ್ರೀಯರು ಉಪವಾಸ ವೃತ ಕೈಗೊಳ್ತಾರೆ. ಪೂಜಾ ಕೈಂಕರ್ಯದೊಂದಿಗೆ ಆಲದ ಮರಕ್ಕೆ ಹತ್ತಿ ನೂಲು ಸುತ್ತುತ್ತಾರೆ. ಆಲದ ಮರದಲ್ಲಿ ಶಿವನರೂಪವಿದ್ದು, ವಟವೃಕ್ಷಕ್ಕೆ ದಾರ ಸುತ್ತುವುದರಿಂದ ಜೀವದ ಭಾವಕ್ಕನುಸಾರ ಕಾಂಡದಲ್ಲಿನ ಶಿವತತ್ವಕ್ಕೆ ಸಂಬಂಧಪಟ್ಟ ಲಹರಿಗಳು ಕಾರ್ಯನಿರತವಾಗಿ ಆಕಾರವನ್ನ ಧರಿಸುತ್ತೆ. ಹೀಗಾಗಿ ವೃಕ್ಷಕ್ಕೆ ಆರತಿ ಬೆಳಗುತ್ತಾರೆ. ಪಂಚಫಲಗಳನ್ನ ಇಟ್ಟು ಆರಾಧಿಸ್ತಾರೆ. ತನಗೆ ಹಾಗೂ ತನ್ನ ಪತಿಯ ಆರೋಗ್ಯ, ಸಂಪದ್ಭರಿಸಿಲಿ ಎಂದು ಮಹಿಳೆಯರು ಹಾರೈಸ್ತಾಳೆ. ನೆರೆಯ ಮಹಾರಾಷ್ಟ್ರ ಮತ್ತು ಗುಜರಾತ್ ಭಾಗದಲ್ಲಿ ಹೆಚ್ಚಾಗಿ ಕಂಡು ಬರುವ ಆಚರಣೆ ಉತ್ತರಕನ್ನಡ ಕಾರವಾರ, ಜೋಯಿಡ, ದಾಂಡೇಲಿ, ಗೋಕರ್ಣದಲ್ಲಿ ಮಾಡಲಾಗುತ್ತದೆ.