ತಿರುವನಂತಪುರ(TIRUVANANTAPURA) : ಶಿರೂರಿನಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ (SHIRURU RESCUE OPERATION)ಕರ್ನಾಟಕ ಸರ್ಕಾರ(KARNATAKA GOVERNMENT) ಕೈಗೊಂಡ ಪ್ರಯತ್ನಗಳ ಬಗ್ಗೆ ಕೇರಳ ಸರ್ಕಾರ ಮತ್ತು ಜನತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್(PINARAYI VIJAYAN) ಅವರು ಕರ್ನಾಟಕ ಸಿಎಂ ಸಿದ್ದರಾಮಯ್ಯ(CM SIDDARAMAIHA ) ಮತ್ತು ಕಾರವಾರ ಶಾಸಕ ಸತೀಶ್ ಸೈಲ್(MLA SATISH SAIL) ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಶಿರೂರು ದುರಂತ ನಡೆದ ದಿನದಿಂದ ಕೇರಳ ಸರ್ಕಾರ(KERAL GOVERNMENT) ಮಾಡಿದ  ವಿನಂತಿಗಳಿಗೆ ತಕ್ಷಣವೇ ಪ್ರತಿಕ್ರಿಯಿಸಿ ಸ್ಪಂದಿಸಿರುವುದಕ್ಕಾಗಿ  ಪ್ರಾಮಾಣಿಕವಾಗಿ ಧನ್ಯವಾದ ಸಲ್ಲಿಸುವುದಾಗಿ ಹೇಳಿದ್ದಾರೆ.

ಉತ್ತರಕನ್ನಡ ಜಿಲ್ಲಾಡಳಿತಕ್ಕೂ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದ ಪಿಣರಾಯಿ ವಿಜಯನ್ ಅವರು ಕಾರವಾರ ಕ್ಷೇತ್ರವನ್ನ ಪ್ರತಿನಿಧಿಸುತ್ತಿರುವ ಶಾಸಕ ಸತೀಶ್ ಕೃಷ್ಣ ಸೈಲ್ ಅವರು ಕಠಿಣ ಕಾರ್ಯಾಚರಣೆಯಲ್ಲಿ ತೊಡಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದುರಂತದಲ್ಲಿ ತನ್ನ ಅಮೂಲ್ಯವಾದ ಜೀವನವನ್ನು ಕಳೆದುಕೊಂಡ ಅರ್ಜುನ್(ARJUN) ಅವರ ಮೃತದೇಹವನ್ನು ನಿನ್ನೆ ಗಂಗಾವಳಿ ನದಿಯಲ್ಲಿ ಟ್ರಕ್ ಸಮೇತ ಪತ್ತೆ ಮಾಡಲಾಗಿತ್ತು.

ಇದನ್ನು ಓದಿ : ಕಾರವಾರ ಉದ್ಯಮಿಗಳಿಬ್ಬರ ದುರಂತ ಅಂತ್ಯ

ಶಿರೂರಿನಲ್ಲಿ ನಡೆಯದ ಪವಾಡ. ಬದುಕುಳಿಯಲಿಲ್ಲ ಅರ್ಜುನ್.