ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕೊಲ್ಲೂರು (Kolluru) : ಕೊಲ್ಲೂರು ಶ್ರೀ ಮೂಕಾಂಬಿಕಾ(Kolluru mookambika) ದೇಗುಲದ ಪ್ರಧಾನ ಅರ್ಚಕ ಮಂಜುನಾಥ ಅಡಿಗ ಅವರು ಇಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು.
ಕಳೆದ 18 ವರ್ಷಗಳಿಂದ ಅವರು ಮೂಕಾಂಬಿಕಾ ಸನ್ನಿಧಿಯ ಪ್ರಧಾನ ಅರ್ಚಕ ಹಾಗೂ ಪ್ರಧಾನ ತಂತ್ರಿಯಾಗಿ ಇವರು ಕಾರ್ಯನಿರ್ವಹಿಸುತ್ತಿದ್ದರು. ಇಂದು ಸ್ನಾನಗೃಹದಲ್ಲಿ ಬಿದ್ದು ಅಸ್ವಸ್ಥಗೊಂಡಿದ್ದ ಮಂಜುನಾಥ ಅಡಿಗ, ಹೃದಯಾಘಾತದಿಂದ ನಿಧನರಾದರು.
ಇವರ ಪುತ್ರ ನಿತ್ಯಾನಂದ ಅಡಿಗ ಕಳೆದ 9 ವರ್ಷಗಳಿಂದ ಕೂಡಾ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲ ವರ್ಷಗಳಿಂದ ಮಂಜುನಾಥ ಅಡಿಗ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು.
ಇದನ್ನು ಓದಿ : ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಸಾವು.
ಹೊಸ ವರ್ಷಕ್ಕೆ ಅರ್ಧ ದಿನವೇ ಗುರಿ ದಾಟಿ ಈ ಬಾರೀ 308 ಕೋಟಿ ರೂ. ಮದ್ಯ ಮಾರಾಟ.
