ಬೆಂಗಳೂರು(Bangalore) : ನ್ಯೂ ಇಯರ್ ಸಂಭ್ರಮಾಚರಣೆ(New Year Celebration) ಹಿನ್ನೆಲೆಯಲ್ಲಿ ಡಿಸೆಂಬರ್ 31 ರ ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅರ್ಧ ದಿನದಲ್ಲಿಯೇ ದಾಖಲೆಯ ಮದ್ಯ ಮಾರಾಟವಾಗಿದೆ(Liquor Sale).

ಕೆಎಸ್‌ಬಿಸಿಎಲ್‌ನಿಂದ ಬರೋಬ್ಬರಿ 308 ಕೋಟಿ ರೂಪಾಯಿ ಮದ್ಯ ಮಾರಾಟವಾಗಿದೆ ಎಂದು ತಿಳಿದುಬಂದಿದೆ. ಅಬಕಾರಿ ಇಲಾಖೆ(Exice Department) 250 ಕೋಟಿ ರೂ. ಮೌಲ್ಯದ ಮದ್ಯ ಮಾರಾಟದ ಗುರಿ ಇಟ್ಟುಕೊಂಡಿತ್ತು. ಆದರೆ, ಅದನ್ನೂ ಮೀರಿ ಎಣ್ಣೆ ಮಾರಾಟವಾಗಿದೆ.

ಕಳೆದ ವರ್ಷ 2023 ರ ಡಿಸೆಂಬರ್ 31 ರಂದು 193 ಕೋಟಿ ರುಪಾಯಿ ಮದ್ಯ ಮಾರಾಟ ಆಗಿತ್ತು. ಈ ಬಾರಿ 2024 ಡಿ.31 ರಂದು 7,305 ಮದ್ಯ ಮಾರಾಟಗಾರರು ಕೆಎಸ್‌ಬಿಸಿಎಲ್‌ನಿಂದ ಮದ್ಯ ಖರೀದಿ ಮಾಡಿದ್ದಾರೆ.

ಐಎಂಎಲ್ 4,83,715 ಲಕ್ಷ ಬಾಕ್ಸ್ ಮಾರಾಟದಿಂದ 250.25 ಕೋಟಿ ಆದಾಯ ಸಂಗ್ರಹವಾಗಿದೆ. 2,92,339 ಲಕ್ ಬಿಯರ್ ಬಾಕ್ಸ್ ಮಾರಾಟದಿಂದ 57,75 ಕೋಟಿ ಆದಾಯ ಸಂಗ್ರಹವಾಗಿದೆ. ಒಟ್ಟು 7,76,042 ಲಕ್ಷ ಬಾಕ್ಸ್ ಮದ್ಯ ಮಾರಾಟದಿಂದ ಒಟ್ಟು 308 ಕೋಟಿ ರುಪಾಯಿ ಆದಾಯ ಸಂಗ್ರಹವಾಗಿದೆ ಎಂದು ಇಲಾಖೆ ಲೆಕ್ಕಾಚಾರ ಮಾಡಿದೆ.

ಇದನ್ನು ಓದಿ : ಹೊಸ ವರ್ಷಕ್ಕೆ ದಾಂಡೇಲಿಯಲ್ಲಿ ಪರದಾಡಿದ ಇಟಲಿ ಮೂಲದ ದಂಪತಿಗಳು.

ಕಾರವಾರದಲ್ಲಿ 2025 ಹೊಸ ವರ್ಷ ಬರಮಾಡಿಕೊಂಡ ಜನತೆ.

ಬರೋಬ್ಬರಿ ಮೂರುವರೆ ಲಕ್ಷ ರೂಪಾಯಿಗೆ ಮಾರುತಿ ದೇವರ ಪ್ರಸಾದ ಸ್ವೀಕರಿಸಿದ ಭಕ್ತ.