ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) :ಅಮೆರಿಕದಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ (Hyatric Hero Shivarajakumar) ಈಗ ಪಿಟ್ ಆಗಿದ್ದಾರೆ.
ಶಿವಣ್ಣ ಅವರ ಆರೋಗ್ಯ ಕುರಿತು ಶಿವಣ್ಣ ದಂಪತಿ ಮಾತನಾಡಿದ್ದಾರೆ. ಫೈನಲಿ ಶಿವರಾಜ್ಕುಮಾರ್(Shivarajakumar) ಕ್ಯಾನ್ಸರ್ ಫ್ರೀ(Cancer Free) ಆಗಿದ್ದಾರೆ ಎಂಬುದು ಗೊತ್ತಾಗಿದೆ.ಆಪರೇಷನ್ ಬಗ್ಗೆ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ(Social Media) ಶಿವಣ್ಣ(Shivanna) ದಂಪತಿ ಮಾತನಾಡಿದ್ದಾರೆ. ವಿಡಿಯೋದಲ್ಲಿ ಗೀತಾ ಶಿವರಾಜ್ ಕುಮಾರ್ ಅವರು ಮಾತನಾಡಿ, ಮೊದಲು ಕನ್ನಡಿಗರಿಗೆಲ್ಲ ಹೊಸ ವರ್ಷದ ಹಾರ್ದಿಕ ಶುಭಾಶಯ ತಿಳಿಸಿದ್ದಾರೆ. ನೀವೆಲ್ಲ ಮಾಡಿದ ಆಶೀರ್ವಾದದಿಂದ ಎಲ್ಲ ರಿಪೋರ್ಟ್ಗಳು ನೆಗೆಟಿವ್ ಬಂದಿವೆ. ಕೊನೆಯಲ್ಲಿ ಪೈಥೋಲಾಜಿ ರಿಪೋರ್ಟ್ ಬಗ್ಗೆ ಕಾಯುತ್ತಿದ್ದೆವು. ಅದು ಕೂಡ ನೆಗೆಟಿವ್ ಬಂದಿದ್ದು ಶಿವರಾಜ್ ಕುಮಾರ್ ಅವರು ಕ್ಯಾನ್ಸರ್ ಫ್ರಿ ಆಗಿದ್ದಾರೆ ಎಂದು ತಿಳಿಸಿದ್ದಾರೆ.
ಆಸ್ಪತ್ರೆಯವರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಇದಕ್ಕೆಲ್ಲ ಕಾರಣ ದೊಡ್ಡವರ ಹಾಗೂ ನಿಮ್ಮೆಲ್ಲರ ಆಶೀರ್ವಾದ ಕಾರಣವಾಗಿದೆ. ನಾನು ಇದನ್ನು ನನ್ನ ಜೀವನದಲ್ಲಿ ಯಾವತ್ತೂ ಮರೆಯುವುದಿಲ್ಲ ಅಂತ ಗೀತಾ ಶಿವರಾಜ್ ಕುಮಾರ್ ಅವರು ಹೇಳಿದ್ದಾರೆ.
ಇದನ್ನು ಓದಿ : ಕೊಲ್ಲೂರು ಮೂಕಾಂಬಿಕಾ ದೇವಾಲಯದ ಪ್ರಧಾನ ಅರ್ಚಕ ನಿಧನ.
Jರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಸಾವು.
ಹೊಸ ವರ್ಷಕ್ಕೆ ಅರ್ಧ ದಿನವೇ ಗುರಿ ದಾಟಿ ಈ ಬಾರೀ 308 ಕೋಟಿ ರೂ. ಮದ್ಯ ಮಾರಾಟ.