ದಾಂಡೇಲಿ(Dandeli) :  ಹೊಸ ವರ್ಷದ ಸಂಭ್ರಮಾಚರಣೆಗೆ ಬಂದಿದ್ದ ಇಟಲಿ ಮೂಲದ ಪ್ರವಾಸಿ ದಂಪತಿಗಳು(Tourist Couple) ತಾವೂ ಬುಕ್ ಮಾಡಿದ ರೆಸಾರ್ಟ್ ಪತ್ತೆ ಹಚ್ಚಲು ಪರದಾಡಿದ ಘಟನೆ ನಡೆದಿದೆ.

ದಾಂಡೇಲಿ ನಗರದ  ಪೊಟೋಲಿ(Potoli) ಮಾರ್ಗದಲ್ಲಿರುವ  ಜಂಗಲ್ ನೆಸ್ಟ್(Jungle Nest) ಹೆಸರಿನ ರೆಸಾರ್ಟ್ ನಲ್ಲಿ(Resort) ಬುಕಿಂಗ್ ಮಾಡಿದ್ದರಂತೆ. ಆದರೆ ರೆಸಾರ್ಟ್ ಗೆ ಹೋಗುವ ದಾರಿ ತಿಳಿಯದೆ ಡಿಸೆಂಬರ್ 31ರಂದು ಪರದಾಡಿದ್ದಾರೆ. ಸಂಬಂಧಪಟ್ಟ ರೆಸಾರ್ಟ್ ನವರು ಇವರಿಗೆ ಸರಿಯಾಗಿ ಲೈವ್ ಲೊಕೇಶನ್ ಕಳುಹಿಸಿಲ್ಲ.  ಹೀಗಾಗಿ ರಸ್ತೆಯಲ್ಲಿ ಸಿಕ್ಕ ಸಿಕ್ಕವರಲ್ಲಿ ವಿಚಾರಿಸಿದ್ದಾರೆ. ಆದರೆ ಇಟಲಿ ದಂಪತಿಗಳಿಗೆ (Itali) ಸರಿಯಾಗಿ  ಇಂಗ್ಲೀಷ್ ಬಾರದಿರುವುದರಿಂದ ಸ್ಥಳೀಯ ಜನರ ಮಧ್ಯೆ ಕಮ್ಯುನಿಕೇಷನ್ ಮಾಡಲು ಕಷ್ಟವಾಗಿದೆ.

ದಾಂಡೇಲಿ ಕುಳಗಿ ರಸ್ತೆಯಲ್ಲಿರುವ(Dandeli Kulagi Road) ಕೋಗಿಲಬನ(Kogilabana) ಹತ್ತಿರ  ರೆಸಾರ್ಟ್(Resort) ಬಗ್ಗೆ ವಿಚಾರಿಸಿ ಅದು ಯಾವುದು ಎಂದು ತಿಳಿಯದೇ ಮತ್ತೆ ದಾಂಡೇಲಿ ಕಡೆಗೆ ತೆರಳಿದ್ದಾರೆ. ಜಂಗಲ್ ನೆಸ್ಟ್ ರೆಸಾರ್ಟ್ ಬುಕ್ ಮಾಡಿದ ಸಂಪರ್ಕ ಸಂಖ್ಯೆಯನ್ನು ಸಂಪರ್ಕಿಸಿದರೆ ಯಾವುದೇ ಉತ್ತರವನ್ನು ನೀಡಿಲ್ಲ. ಹಲವು ತಾಸುಗಳ ಕಾಲ ತಮ್ಮ ಮಕ್ಕಳೊಂದಿಗೆ ರಸ್ತೆಯಲ್ಲಿ ಕುಳಿತು ದಂಪತಿಗಳು ಪರದಾಡಿದ್ದಾರೆ.

ಬುಕ್ ಮಾಡಿಕೊಂಡವರು ಪ್ರವಾಸಿಗರಿಗೆ ಅದರಲ್ಲೂ ವಿದೇಶಿ ಪ್ರವಾಸಿಗರಿಗೆ ಈ ರೀತಿ ಸತಾಯಿಸಿರುವುದು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಒಳ್ಳೆಯ ಬೆಳವಣಿಗೆಯಲ್ಲ. ಈ ದಂಪತಿಗಳು ಇಟಲಿ ದೇಶದವರಾಗಿದ್ದು  ಒಂದು ಪುಟ್ಟ ಮಗು ಹೊಂದಿದ್ದು ಸೈಕಲ್ ಮೇಲೆ ದಾಂಡೇಲಿಗೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ  ಪ್ರವಾಸಿಗರಿಗೆ ಸೂಕ್ತ ಮಾರ್ಗದರ್ಶನ ನೀಡಿದರೆ ದಾಂಡೇಲಿಯ ಪ್ರವಾಸೋದ್ಯಮ ವಿಶ್ವಾಸಾರ್ಹತೆ ಗಳಿಸಬಹುದು  ಎಂದು ದಾಂಡೇಲಿಯ ಪ್ರಜ್ಞಾವಂತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : ಕಾರವಾರದಲ್ಲಿ 2025 ಹೊಸ ವರ್ಷ ಬರಮಾಡಿಕೊಂಡ ಜನತೆ

. ಬರೋಬ್ಬರಿ ಮೂರುವರೆ ಲಕ್ಷ ರೂಪಾಯಿಗೆ ಮಾರುತಿ ದೇವರ ಪ್ರಸಾದ ಸ್ವೀಕರಿಸಿದ ಭಕ್ತ.

ಹೊನ್ನಾವರದಲ್ಲಿ ಬೆಳಂಬೆಳಿಗ್ಗೆ ಭೀಕರ ಅಪಘಾತ. ಮೂವರ ದುರ್ಮರಣ.