ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕುಂದಾಪುರ (Kundapur): ಯಜಮಾನನ ಮೇಲಿನ ಅನ್ನದ ಋಣ ಇವತ್ತು ಅದೇಷ್ಟೋ ಜನರಿಗೆ ಇಲ್ಲ. ಇಂದಿನ ಸಮಾಜದಲ್ಲಿ ಉಂಡ ಮನೆಗೆ ಬಗೆಯುವವರೇ ಜಾಸ್ತಿ. ಅಂಥದರಲ್ಲಿ ಮನೆ ಕೆಲಸದಾಕೆ ಮಾಡಿಕೊಂಡ ಪ್ರಾರ್ಥನೆಯೊಂದು ಕೊರಗಜ್ಜನ ಪವಾಡದಿಂದ(Koragajja Miracle) ಫಲಿಸಿದೆ.
ಸಾಸ್ತಾನ(Sastana) ಕೆಳಬೆಟ್ಟು ಮೂಡಹಡುವಿನಲ್ಲಿ ನೆಲೆನಿಂತ ಕಳಿಬೈಲು ಕೊರಗಜ್ಜ ದೇವರು(Koragajja) ಬ್ರಹ್ಮಾವರ(Brahmavar) ತಾಲೂಕಿನ ಸಾಲಿಗ್ರಾಮದ ಕುಟುಂಬವೊಂದಕ್ಕೆ(Saligrama) ತನ್ನ ಕೃಪಾ ಕಟಾಕ್ಷವನ್ನು ಬೀರಿದ್ದಾನೆ. ಸುಮಾರು 15 ವರ್ಷಗಳ ಹಿಂದೆ ಕಳೆದುಕೊಂಡ ಬಂಗಾರದ ಬ್ರೆಸಲೈಟ್ ಸಿಕ್ಕಿದೆ. ಉಡುಪಿ(Udupi) ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಕುಟುಂಬವೊಂದರ ಯಜಮಾನನ ಕೈಯಲ್ಲಿದ್ದ 60 ಗ್ರಾಂ ತೂಕದ ಬಂಗಾರದ ಬ್ರೈಸೆಲೆಟ್ಸ್ ಕಳೆದುಹೋಗಿತ್ತು. ಸುಮಾರು ಆರು ಲಕ್ಷ ರೂ. ಮೌಲ್ಯದ ಬಂಗಾರ ಕಳೆದುಕೊಂಡ ಯಜಮಾನ ಚಿಂತೆಯಲ್ಲಿದ್ದರು. ಎಲ್ಲಿ ಹುಡುಕಿದರೂ ಕಳೆದುಹೋದ ಬಂಗಾರ ಸಿಗದೇ ಇದ್ದಾಗ ಮರೆತು ಬಿಟ್ಟಿದ್ದರು.
ಆ ಮನೆಯ ಕೆಲಸದಾಕೆಗೆ ಕಳೆದ ವರ್ಷ ವಿಷಯ ಗೊತ್ತಾಯಿತು. ಕೊರಗಜ್ಜನ ಪರಮಭಕ್ತೆಯಾಗಿದ್ದ ಆಕೆ ಕೊರಗಜ್ಜನ ಸನ್ನಿದಾನಕ್ಕೆ ಬಂದು ಭಕ್ತಿಯಿಂದ ಕೊರಗಜ್ಜನನ್ನು ನೆನದು ತಾನು ಕೆಲಸ ಮಾಡುವ ಯಜಮಾನನ ಕೈಯಲ್ಲಿದ್ದ ಬಂಗಾರದ ಬ್ರೈಸೆಲೆಟ್ಸ್ ಸುಮಾರು 15 ವರ್ಷದ ಹಿಂದೆ ಕಳೆದು ಹೋಗಿದೆ. ಆ ಬಂಗಾರವನ್ನು ನೀನು ದೊರಕಿಸಿ ಕೊಟ್ಟರೆ ಪೂಜೆ ಕೊಡುತ್ತೇನೆ ಎಂದು ಬೇಡಿಕೊಂಡಿದ್ದಳು. ಭಕ್ತೆಯ ಬೇಡಿಕೆಗೆ ಕೊರಗಜ್ಜ ಒಂದು ವರ್ಷದೊಳಗೆ ಪವಾಡ ಸದೃಶ ರೀತಿಯಲ್ಲಿ ಮನೆಯ ಯಜಮಾನನ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಳೆದುಹೋದ 60 ಗ್ರಾಂ ಚಿನ್ನದ ಬ್ರೈಸಲೆಟ್ಸ್ ಮನೆ ಸಿಕ್ಕಿದೆ.
ಕೊರಗಜ್ಜನ ಮಹಿಮೆಗೆ ಭಾವ ಪರಶವಾದ ಮಹಿಳೆ ಮಣ್ಣಲ್ಲಿ ದೊರೆತ 60 ಗ್ರಾಂ ಬಂಗಾರದ ಬ್ರೈಸೆಲೆಟ್ಸ್ ನ್ನು ಪ್ರಾಮಾಣಿಕವಾಗಿ ಮನೆಯ ಯಜಮಾನಿಗೆ ನೀಡಿದ್ದಾಳೆ. ನಂತರ ಕುಟುಂಬದವರನ್ನು ಕಳಿಬೈಲಿಗೆ ಕರೆತಂದು ಹರಕೆ ತೀರಿಸಿದ್ದಾರೆ. ಮನೆಯ ಯಜಮಾನನ ಮೇಲಿನ ನಿಷ್ಠೆ ಈ ರೀತಿಯೂ ಇರುವುದು ಮಾತ್ರ ಬಹಳ ಅಪರೂಪ ಅಲ್ಲವೇ.
ಇದನ್ನು ಓದಿ : ಕಾರವಾರದ ನಂದನಗದ್ದಾದಲ್ಲಿ ಬಾರೀ ಅಗ್ನಿ ಅನಾಹುತ. ಮನೆ ಸಂಪೂರ್ಣ ಭಸ್ಮ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ.
ಅರಬ್ಬಿ ಸಮುದ್ರದಲ್ಲಿ ಮೀನುಗಾರರಿಗೆ ಮುಂದುವರಿದ ಶೋಧ. ಈಶ್ವರ ಮಲ್ಪೆ ತಂಡದಿಂದ ಹುಡುಕಾಟ.