ಕಾರವಾರ(KARWAR) : ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿರುವ ಮುರ್ಡೇಶ್ವರದಲ್ಲಿ(Murdeshwar) 360 ಕೋಟಿ ರೂ ವೆಚ್ಚದಲ್ಲಿ ಪ್ರವಾಸಿ ಬಂದರು(Tourist Port) ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ(Mankal Vaidya) ಕಾರವಾರದಲ್ಲಿ ಹೇಳಿದ್ದಾರೆ.
ವಿಶ್ವದ ಪ್ರವಾಸಿಗರನ್ನು(World Tourist) ಸೆಳೆಯುವ ಉದ್ದೇಶದಿಂದ ಹೌಸ್ ಬೋರ್ಟ್ ಟೂರಿಸಂ(House Boat Tourism) ಜೊತೆಗೆ ಮೀನುಗಾರಿಕೆಗೆ ಸೌಲಭ್ಯ ಕಲ್ಪಿಸಲಾಗುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶ ನಮ್ಮ ಜಿಲ್ಲೆಯಲ್ಲಿದೆ. ಮುರ್ಡೇಶ್ವರದಲ್ಲಿ ಇನ್ನಷ್ಟು ಪ್ರವಾಸೋದ್ಯಮಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಬಂದರು ನಿರ್ಮಾಣವಾಗಲಿದೆ. ಹೊರ ರಾಜ್ಯ, ವಿದೇಶಗಳಲ್ಲಿ ಇರುವಂತಹ ಕ್ರೂಸ್ ಬೋಟ್(Cruise Boat) ಸೌಲಭ್ಯ ಇರಲಿದೆ. ಪ್ರವಾಸಿಗರು ಕುಟುಂಬ ಸಮೇತ ಸಮುದ್ರದಲ್ಲಿ ಕಾಲ ಕಳೆಯಲು ಪ್ರವಾಸಿ ಬೋಟ್ ಗಳ ವ್ಯವಸ್ಥೆ ಆಗಲಿದೆ. ಒಮ್ಮೆಲೇ ನೂರಾರು ಬೋಟ್ಗಳು ನಿಲ್ಲುವಂತೆ ಬಂದರು ನಿರ್ಮಾಣ ಆಗಲಿದೆ ಎಂದು ಅವರು ವಿವರಿಸಿದರು.
ರಾಜ್ಯದ 320 ಕಿಮೀ ಕರಾವಳಿಯಲ್ಲಿ ಒಟ್ಟು 13 ಬಂದರುಗಳಿವೆ. ಆದರೆ ಇಂತಹ ವ್ಯವಸ್ಥೆ ಹೊಂದಿಲ್ಲ. ಮುರ್ಡೇಶ್ವರದಿಂದ ನೇತ್ರಾಣಿ ದ್ವೀಪದಲ್ಲಿ(NETRANI Isaland) ಕೂಡ ಇಂತಹ ಸೌಲಭ್ಯ ಕಲ್ಪಿಸಲಾಗುವುದು. ಮುಂಬೈ(Mumbai), ಗೋವಾ(Goa), ಚೆನ್ನೈ(Chennai), ಲಕ್ಷದ್ವೀಪದ(Lakshadweep) ಮಾದರಿಯಲ್ಲಿ ರಾಜ್ಯದಲ್ಲಿ ಪ್ರಥಮವಾಗಿ ಮಂಗಳೂರಿನಲ್ಲಿ(Manglore) 1500 ಕೋಟಿ ವೆಚ್ಚದಲ್ಲಿ ಕ್ರೂಸ್ ಬೋಟ್ ಪ್ರವಾಸೋದ್ಯಮ ನಿರ್ಮಾಣವಾಗುತ್ತಿದೆ. ಸಾವಿರಕ್ಕೂ ಹೆಚ್ಚು ಜನ ಸಂತಸದಿಂದ ತಿಂಗಳು ಗಟ್ಟಲೇ ಕ್ರೂಸ್ ನಲ್ಲಿಯೇ ಕಾಲ ಕಳೆಯಬಹುದು. ನಮ್ಮ ಸರಕಾರ ಪ್ರವಾಸೋದ್ಯಮ ಪರವಾಗಿಯೇ ಇದೆ. ಪ್ರವಾಸೋದ್ಯಮ ಉಳಿವಿಗೆ, ಬೆಳವಣಿಗೆಗೆ ಪ್ರಯತ್ನ ಮೀರಿ ಶ್ರಮಿಸುತ್ತೇವೆ. ವೈಯಕ್ತಿತ ಹಿತಾಸಕ್ತಿಯಿಂದ ಅಡ್ಡಿಪಡಿಸುವರ ಸುದ್ದಿಗೆ ಕಿವಿಗೊಡಬಾರದು ಎಂದು ಜಿಲ್ಲೆಯ ಜನತೆಯಲ್ಲಿ ಕೋರುತ್ತೇನೆಂದರು.
ಸಿಆರ್ ಜೆಡ್ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಅಡ್ಡಿಯಾಗಿತ್ತು. ಆದರೆ ಸಮಸ್ಯೆ ಬಗೆಹರಿಸಲಾಗಿದೆ ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಸತೀಶ್ ಸೈಲ್ ಜೊತೆಗಿದ್ದರು.
ಇದನ್ನು ಓದಿ : ಬೆಂಗಳೂರಿನಿಂದ ಕಾರವಾರಕ್ಕೆ ದೀಪಾವಳಿ ವಿಶೇಷ ರೈಲು