ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಭಟ್ಕಳ(Bhatkal) : ಕೂಲಿ ಕಾರ್ಮಿಕನೋರ್ವ(Labour) ಸಂಶಯಾಸ್ಪದವಾಗಿ ಸಾವನ್ನಪ್ಪಿದ ಘಟನೆ  ನಗರದ ಭಾರತ ಪೆಟ್ರೋಲ್ ಬಂಕ್(Bharat Petrol Bunk) ಸಮೀಪ  ನಡೆದಿದೆ.

ಮಂಜುನಾಥ ಜಟ್ಟ ನಾಯ್ಕ(55) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.  ಕುಕನೂರು ನಿವಾಸಿ ಎಂದು ಹೇಳಲಾಗಿದೆ. ಮಂಜುನಾಥ  ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಎಂದಿನಂತೆ ಮನೆಯಿಂದ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೊರಟಿದ್ದರು. ಆದರೆ, ಭಟ್ಕಳ(Bhatkal) ನಗರದ ಭಾರತ ಪೆಟ್ರೋಲ್ ಬಂಕ್ ಪಕ್ಕದ ದಿಲ್ಮನ್ ಮನೆ ಸಮೀಪದ ಖಾಲಿ ಜಾಗದಲ್ಲಿ ಅವರು ಮೃತ ದೇಹ  ಪತ್ತೆಯಾಗಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಮಂಜುನಾಥ ನಾಯ್ಕ ಅವರು ಹೃದಯಾಘಾತ ಅಥವಾ ಇನ್ನಾವುದೋ ಅಸ್ವಸ್ಥತೆಯಿಂದ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಕುರಿತು ಮೃತರ ಸಂಬಂಧಿ ಕೃಷ್ಣ ಸೋಮಯ್ಯ ನಾಯ್ಕ ಭಟ್ಕಳ ನಗರ ಪೊಲೀಸ್‌ ಠಾಣೆಯಲ್ಲಿ(Bhatkal Town Police Station ) ದೂರು ನೀಡಿದ್ದು, ಪೊಲೀಸರು  ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಇದನ್ನು ಓದಿ : ಭಟ್ಕಳದಲ್ಲಿ ಕದ್ದು ಮುಚ್ಚಿ ಜಾನುವಾರು ಸಾಗಾಟ. ಇಬ್ಬರಿಗೆ ಹೆಡೆಮುರಿ ಕಟ್ಟಿದ ಪೊಲೀಸರು.

ಕೆಎಸ್‌ಆರ್‌ಟಿಸಿ ಬಸ್–ಓಮ್ನಿ ನಡುವೆ ಭೀಕರ ಅಪಘಾತ ಡಿಕ್ಕಿ. ಚಾಲಕ ಸ್ಥಳದಲ್ಲೇ ಸಾವು.