ಭಟ್ಕಳ (Bhatkal): ನಗರದ ಅಂಜುಮನ್ ಇಂಜಿನಿಯರ್ ಕಾಲೇಜು (Anjuman Engineer College) ಸಮೀಪ ಇರುವ ಪುರಸಭೆ ವಾಟರ್ ಪಿಲ್ಟರ ಟ್ಯಾಂಕ ಬಳಿ ಅಕ್ರಮವಾಗಿ ಗಾಂಜಾ ಮಾರಾಟ(Gaanja) ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ.

ಮಗ್ಗುಂ ಕಾಲೋನಿ ನಿವಾಸಿ ಮೊಹಮ್ಮದ ಜೀಯಾಮ್ ಸಿರಾಜುಲ್ ಹಸನ್ ಹಿಲಾಲ್ ಸ್ಟ್ರೀಟ್,  ಬೇಳ್ನಿ ಬಂದರ ನಿವಾಸಿ ನಸರುದ್ದೀನ ಶೇಖ  ಗುಲಾಮ್ ಮೈಹಿದ್ದೀನ್, ಆಜಾದ ನಗರ ಮುಗ್ಧಂ ಕಾಲೋನಿ ನಿವಾಸಿ ನೌಮಾನ  ಮೌಲಾ ಶೇಖ,  ಮಗ್ಗುಂ ಕಾಲೋನಿ, ನ್ಯಾಶನಲ್ ರೋಡ್ ನಿವಾಸಿ ಮೊಹಮ್ಮದ ಫಾನ ಮೊಹಮ್ಮದ ಇರ್ಷಾದ  ಬಂಧಿತರೆಂದು  ತಿಳಿದು ಬಂದಿದೆ.

ನಾಲ್ವರು ಭಟ್ಕಳದ ಅಂಜುಮನ್ ಇಂಜಿನಿಯರ್ ಕಾಲೇಜಿನ ಸಮೀಪ ಇರುವ ಪುರಸಭೆ ವಾಟರ ಪಿಲ್ಟರ ಟ್ಯಾಂಕ ಸಮೀಪ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಭಟ್ಕಳ ನಗರ ಠಾಣೆಯ ಪೊಲೀಸರು(Bhatkal Town Police)  ದಾಳಿ ಮಾಡಿದ್ದರು.

ದಾಳಿ ಸಂದರ್ಭದಲ್ಲಿ ಒಟ್ಟು 15 ಸಾವಿರ  ಮೌಲ್ಯದ 370 ಗ್ರಾಂ ಗಾಂಜಾ ಹಾಗೂ 3 ಸಾವಿರ  ಮೌಲ್ಯದ 1.8 ಗ್ರಾಂ MDMA(Methaphetamine) ನಿಷೇಧಿತ ಮಾದಕ ಪದಾರ್ಥವನ್ನು ಯಾವುದೇ ಪರವಾನಿಗೆ ಇಲ್ಲದೇ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಹುಂಡೈ ಕಂಪನಿಯ(Hundai) ಕಾರಿನಲ್ಲಿ ಸಂಗ್ರಹಿಸಿಟ್ಟುಕೊಂಡಾಗ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ

ಈ ಕಾರ್ಯಾಚರಣೆಯಲ್ಲಿ ಡಿ.ವೈಎಸ್ಪಿ ಮಹೇಶ ಎಂ.ಕೆ ರವರ ಮಾರ್ಗದರ್ಶನದಲ್ಲಿ ಮತ್ತು ಗೋಪಿಕೃಷ್ಣ. ಕೆ.ಆರ್ ಪೋಲೀಸ ನಿರೀಕ್ಷಕರು ಭಟ್ಕಳ ಶಹರ ಠಾಣೆ ರವರ ನೇತ್ರತ್ವದಲ್ಲಿ ಭಟ್ಕಳ ಶಹರ ಪೊಲೀಸ ಠಾಣೆಯ ಪಿ.ಎಸ್.ಐ  ನವೀನ ಎಸ್ ನಾಯ್ಕ ಹಾಗೂ ಸಿಬ್ಬಂದಿಯವರಾದ ಅರುಣ ಪಿಂಟೋ, ದೀಪಕ ಎಸ್ ನಾಯ್ಕ, ಮದಾರಸಾಬ ಚಿಕ್ಕೇರಿ, ದೇವು ರಾಮಾ ನಾಯ್ಕ, ಕಿರಣಕುಮಾರ ನಾಯ್ಕ, ಕೃಷ್ಣಾ ಎನ್.ಜಿ, ಅನೀಲ ರಾಠೋಡ, ಕಾಶಿನಾಥ ಗೊಟಗುಣಸಿ, ಮಹಾಂತೇಶ ಹಿರೇಮಠ, ಕಿರಣ ಪಾಟೀಲ್ ರವರು ದಾಳಿಯನ್ನು ಕೈಗೊಂಡು ಆರೋಪಿತರನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇದನ್ನು ಓದಿ : ರತನ್ ಟಾಟಾ ಮುದ್ದಿನ ಶ್ವಾನಕ್ಕೂ ಆದಾಯದ ಪಾಲು

ರಾಜ್ಯಪಾಲ ಥಾವರ್ ಚಂದ್ ಗೆಲೊಟ್ ಅರೋಗ್ಯದಲ್ಲಿ ಏರುಪೇರು

ಶಿರಸಿಯಲ್ಲಿ ಮನೆ ದರೋಡೆ ಮಾಡಿದ ಆರೋಪಿಗಳಿಗೆ ಶಿಕ್ಷೆ

ಬೆಲೆಕೇರಿ ಅದಿರು ಪ್ರಕರಣ. ಕಣ್ಣೀರು ಸುರಿಸಿದ ಶಾಸಕ ಸತೀಶ್ ಸೈಲ್