ಕಾರವಾರ (KARWAR): ಕಳೆದ ಕೆಲ ದಿನಗಳಿಂದ ರಾಜಧಾನಿಯಿಂದ ಕರಾವಳಿ (RAJADHANI- KARAVALI)ಗೆ ರೈಲಿನಲ್ಲಿ ಸಂಚರಿಸಬೇಕಾದ ಪ್ರಯಾಣಿಕರ ತೊಂದರೆ ಮುಂದುವರಿದಿದೆ.
ತಮ್ಮ ತಮ್ಮ ಊರುಗಳಿಂದ ಬೆಂಗಳೂರಿಗೆ ತೆರಳಲು ರೈಲ್ವೆ ಮುಂಗಡ ಟಿಕೆಟ್ ಪಡೆದವರು ಸಂಕಷ್ಟ ಎದುರಿಸುವಂತಾಗಿದೆ. ಕಾರವಾರ – ಮಂಗಳೂರು – ಬೆಂಗಳೂರು (KARWAR -MANGLORE -BANGLORE)ಮಾರ್ಗದಲ್ಲಿ ಮತ್ತೆ ಮತ್ತೆ ಗುಡ್ಡ ಕುಸಿತವಾಗುತ್ತಿದೆ. ಕಳೆದೊಂದು ವಾರದಿಂದ ರೈಲು ಸಂಚಾರ ಸ್ಥಗಿತಗೊಂಡಿದ್ದವು. ಇದೀಗ ಮತ್ತೆ ಸಕಲೇಶಪುರದ ಬಾಳ್ಳುಪೇಟೆ(SAKALESHAPURA BALLUPETE) ಬಳಿ ಗುಡ್ಡಕುಸಿತವಾಗಿದೆ. ಹೀಗಾಗಿ ಯಶವಂತಪುರದಿಂದ ಕಾರವಾರಕ್ಕೆ (YASHWANTAPURA – KARWAR) ಹೊರಟಿದ್ದ ರೈಲು ಅರ್ಧದಲ್ಲೇ ನಿಲ್ಲುವಂತಾಗಿದೆ. ಈ ಮಾರ್ಗದಿಂದ ಸಂಚರಿಸುವ ಎಲ್ಲ ರೈಲುಗಳನ್ನು ಆ.19 ರವರೆಗೆ ರದ್ದುಗೊಳಿಸಲಾಗಿದೆ ಎಂದು ರೈಲ್ವೆ (RAILWAY) ಪ್ರಕಟಣೆ ತಿಳಿಸಿದೆ.
ಪದೇ ಪದೇ ಗುಡ್ಡ ಕುಸಿತದಿಂದಾಗಿ ಬೆಂಗಳೂರು-ಮುರುಡೇಶ್ವರ, ಮುರುಡೇಶ್ವರ-ಬೆಂಗಳೂರು, ಕಾರವಾರ- ಯಶ್ವಂತಪುರ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ನಿನ್ನೆ ಯಶವಂತಪುರದಿಂದ ಕಾರವಾರಕ್ಕೆ ಹೊರಟಿದ್ದ 16515 ಸಂಖ್ಯೆಯ ಎಕ್ಸ್ಪ್ರೆಸ್ ರೈಲಿನ ಸಂಚಾರ ಹಾಸನದಲ್ಲೇ ಮೊಟಕುಗಳಿಸಲಾಯಿತು. 16576 ಸಂಖ್ಯೆಯ ಮಂಗಳೂರು ಜಂಕ್ಷನ್- ಯಶವಂತಪುರ ರೈಲು ಸಕಲೇಶಪುರ ನಿಲ್ದಾಣದಲ್ಲಿ ಸ್ಥಗಿತಗೊಂಡಿತು.
ಈ ರೈಲುಗಳು ರದ್ದು(TRAIN CANCELLED): ಗುಡ್ಡಕುಸಿತವಾದ ಸ್ಥಳದ ಮಾರ್ಗವಾಗಿ ಹೊರಬೇಕಿದ್ದ ಒಟ್ಟು 12 ರೈಲುಗಳ ಸಂಚಾರವನ್ನು ಆ.19ರವರೆಗೆ ರದ್ದುಮಾಡಲಾಗಿದೆ. ಆ.17ರ ಬೆಂಗಳೂರು- ಮುರುಡೇಶ್ವರ (16585), ಮುರುಡೇಶ್ವರ- ಬೆಂಗಳೂರು (16586), ಬೆಂಗಳೂರು-ಕಾರವಾರ (16595), ಕಾರವಾರ- ಬೆಂಗಳೂರು (16596), ಬೆಂಗಳೂರು-ಕಣ್ಣೂರು (16511), ಕಣ್ಣೂರು- ಬೆಂಗಳೂರು (16512), ಯಶವಂತಪುರ- ಮಂಗಳೂರು ಜಂ. (16539), ವಿಜಯಪುರ- ಮಂಗಳೂರು ಸೆಂ.(07377) ರದ್ದಾಗಿದೆ. ಆ.18ರ ಮಂಗಳೂರು- ಯಶವಂತಪುರ (16540), ಮಂಗಳೂರು ಸೆಂ.- ವಿಜಯಪುರ (17378), ಯಶವಂತಪುರ- ಮಂಗಳೂರು ಜಂ. (16575 ಮತ್ತು ಆ.19ರ ಮಂಗಳೂರು ಜಂ.-ಯಶವಂತಪುರ (16576) ರೈಲುಗಳ ಸಂಚಾರ ರದ್ದು ಮಾಡಲಾಗಿದೆ.