ಬೆಂಗಳೂರು(Banglore) : ಬೇಲೆಕೇರಿ ಅದಿರು ನಾಪತ್ತೆ(Belekeri Mining Case) ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ (Mla Satish Sail) ಮತ್ತೆ ಸಿಬಿಐ(CBI) ತೆಕ್ಕೆಗೆ ಸಿಲುಕಿದ್ದಾರೆ.  ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಹೀಗಾಗಿ ಶಾಸಕರಾದ ಅವರು ಮೇಲೆ ಎರಡನೇ ಬಾರೀ ಜೈಲು ಕಂಬಿ ಎಣಿಸಬೇಕಾಗಿದೆ.

ಗುರುವಾರ ಪ್ರಕರಣದ ವಿಚಾರಣೆ ನಡೆದು  ಮಲ್ಲಿಕಾರ್ಜುನ್ ಶಿಪಿಂಗ್ ಕಂಪನಿ ಡೈರೆಕ್ಟರ್(Mallikarjun shipping Director) ಸತೀಶ್ ಸೈಲ್ ಅವರನ್ನ ವಶಕ್ಕೆ ತೆಗೆದುಕೊಳ್ಳುವಂತೆ ನ್ಯಾಯಾಲಯ ಸೂಚನೆ ನೀಡಿದೆ. ಶುಕ್ರವಾರ ನ್ಯಾಯಾಲಯ ಪ್ರಕಟಿಸಲಿದೆ.

ಪ್ರಕರಣವೇನು? : 2009ರ  ಮಾರ್ಚ್ 20ರಂದು  ಲೋಕಾಯುಕ್ತ ಸೂಚನೆ ಮೇರೆಗೆ ಅರಣ್ಯ ಇಲಾಖೆಯವರು ಒಟ್ಟು ಎಂಟುವರೆ ಲಕ್ಷ ಮೆಟ್ರಿಕ್ ಟನ್ ಅದಿರು ಜಪ್ತಿ ಮಾಡಿದ್ದರು. ಇದರಲ್ಲಿ ಅದಾನಿ ಎಂಟರ್ ಪ್ರೈಸಸ್(Adani Enterprisses), ಮಲ್ಲಿಕಾರ್ಜುನ್ ಕಂಪನಿ(Mallikarjun Shipping Company), ರಾಜಮಹಲ್ ಸಿಲ್ಕ್ ಪ್ರೈವೆಟ್ ಲಿಮಿಟೆಡ್(Rajamahal silk Pvt. ltd), ಸಾಳಗಾಂವಕರ್ ಮೈನಿಂಗ್ ಕಂಪನಿಯ(Salagavmkar Mining Company) ಅದಿರಾಗಿತ್ತು. ಆದ್ರೆ 2010 ಮೇ 31ರಂದು ನ್ಯಾಯಾಲಯದ ಅನುಮತಿ ಪಡೆದು ಪರಿಶೀಲಿಸಿದಾಗ ಕೇವಲ ಎರಡು ಲಕ್ಷ ಮೆಟ್ರಿಕ್ ಟನ್ ಮಾತ್ರ ಉಳಿದಿರೋದು ಬೆಳಕಿಗೆ ಬಂದಿತ್ತು. ಹೀಗಾಗಿ ರಪ್ತುದಾರ ಕಂಪನಿಗಳು(Export Company) ಕದ್ದು(Theft) ಅದಿರು ಮಾರಾಟ(Mines Sale) ಮಾಡಿರೋದು ಸ್ಪಷ್ಟವಾಗಿತ್ತು.

ಇದಕ್ಕೆ ಸಂಬಂಧಿಸಿ ನಾಲ್ಕು ಕಂಪನಿ ಪಾಲುದಾರರಾಗಿವೆ ಎಂಬುದನ್ನ ತನಿಖೆ ನಡೆಸಿದ ಸಿಬಿಐ(CBI) ಚಾರ್ಜ್ ಶೀಟ್ ನಲ್ಲಿ ತಿಳಿಸಿತ್ತು. ಅಂದು ಸಚಿವರಾಗಿದ್ದ ಆನಂದ ಸಿಂಗ್, ಶಾಸಕ ಸತೀಶ ಸೈಲ್, ಶಾಸಕ ಜನಾರ್ಧನ ರೆಡ್ಡಿ(Janardhan Reddi), ನಾಗೇಂದ್ರ(Nagendra), ಬಂದರು ಅಧಿಕಾರಿ(Port Officer) ಮಹೇಶ ಬಿಲಿಯೇ ಸೇರಿ 11 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಆಗ ಸಿಬಿಐ ಎಲ್ಲರನ್ನ ಬಂಧನ ಮಾಡಿತ್ತು. ಒಂದುವರೆ ವರ್ಷದ ಬಳಿಕ ಎಲ್ಲರೂ ಬಿಡುಗಡೆ ಹೊಂದಿರುತ್ತಾರೆ. ಆದರೆ ಮೂರು ವರ್ಷಗಳ ನಂತರ ಜನಾರ್ಧನ ರೆಡ್ಡಿ ಬಿಡಗಡೆ ಹೊಂದಿದ್ದರು.

ಶಾಸಕರಾದ ಎರಡನೇ ಬಾರಿಗೂ ಶಾಕ್ :  ಮಲ್ಲಿಕಾರ್ಜುನ್ ಶಿಪ್ಪಿಂಗ್ ಕಂಪನಿ ಡೈರೆಕ್ಟರ್ ಆಗಿದ್ದ ಸತೀಶ್ ಸೈಲ್ ಪ್ರಕರಣ ಸಂಬಂಧ 2013 ಸಪ್ಟೆಂಬರ್ ನಲ್ಲಿ ಸಿಬಿಐ ಬಂಧಿಸಿತ್ತು. ಬಳಿಕ 2014ಡಿಸೆಂಬರ್ ವರೆಗೆ ಜೈಲು ಪಾಲಾಗಿದ್ದ ಸತೀಶ ಸೈಲ್ ಬಿಡುಗಡೆ ಹೊಂದಿದ್ದರು. 2010ರಲ್ಲಿಯೇ ಸತೀಶ ಸೈಲ್ ಅವರ ಕಂಪನಿ 7.23 ಲಕ್ಷ ಟನ್ ಕಾನೂನು ಬಾಹೀರವಾಗಿ ಮಾರಾಟ ಮಾಡಿರೋದು ಬೆಳಕಿಗೆ ಬಂದಿತ್ತು.

ಇದೀಗ ಮತ್ತೆ ಶಾಸಕ ಸತೀಶ್ ಸೈಲ್ (Mla Satish Sail) ಪ್ರಕರಣದಲ್ಲಿ ಸಿಲುಕಿದ್ದಾರೆ. ಈಗಾಗಲೇ ಅವರನ್ನ ಸಿಬಿಐ ವ್ಯೂಹದಲ್ಲಿದ್ದಾರೆಂದು ಹೇಳಲಾಗಿದೆ. ಶುಕ್ರವಾರ ಅವರ ಹಣೆಬರಹ ಪ್ರಕಟವಾಗಲಿದೆ. ಒಟ್ಟಿನಲ್ಲಿ ಅದಿರು ಕಳ್ಳತನ ಮಾಡಿದ ಕಂಪನಿ ಮುಖ್ಯಸ್ಥರಿಗೆ ಸಿಬಿಐ ಬಾರೀ ಹೊಡೆತ ನೀಡಿದೆ.

ಇದನ್ನು ಓದಿ : ಶಿರವಾಡದಲ್ಲಿ ನಿವೇಶನ ನೀಡುವಂತೆ ದಲಿತ ಕುಟುಂಬಗಳ ಒತ್ತಾಯ

ರಾಜ್ಯ ಮಟ್ಟದ ಜೇನು ಕಾರ್ಯಾಗಾರ ಯಶಸ್ವಿ

ಚಂಡಮಾರುತ ಅಪ್ಪಳಿಸುವ ಸಾಧ್ಯತೆ

ಶಿರಸಿಯಲ್ಲಿ ಬಸ್ ಇಲ್ಲದೇ ಹೆಣ್ಣುಮಕ್ಕಳಿಗೆ ತೊಂದರೆ