ಶಿರಸಿ(SIRSI) : ಕಳೆದ ರಾತ್ರಿ ಶಿರಸಿ ಸಮೀಪದ ಗ್ರಾಮವೊಂದರ ರಸ್ತೆಯಲ್ಲಿ ಚಿರತೆ(CHITA) ಕಾಣಿಸಿಕೊಂಡು ಆತಂಕ ಮೂಡಿಸಿದ ಘಟನೆ ನಡೆದಿದೆ.

ತಾಲೂಕಿನ ಗುಂಡಿಗದ್ದೆ ಸಮೀಪ ಬಾರೀ ಗಾತ್ರದ ಚಿರತೆ(PANTHOR) ಪ್ರತ್ಯಕ್ಷವಾಯಿತು. ತಮ್ಮ ಕಾರ್ಯ ನಿಮಿತ್ತ ಜೋಯಿಡಾಕ್ಕೆ ಹೋಗಿದ್ದ ಯಲ್ಲಾಪುರದಿಂದ ಶಿರಸಿ ಕಡೆ ಬರುತ್ತಿರುವ ಉಷಾ ಹೆಗಡೆ ಎಂಬುವವರು ತಮ್ಮ ಮೊಬೈಲಲ್ಲಿ ಚಿರತೆ ದೃಶ್ಯವನ್ನ ಸೆರೆ ಹಿಡಿದಿದ್ದಾರೆ.

ಗುಂಡಿಗದ್ದೆ ಸಮೀಪ ಚಿರತೆ ಕಂಡಾಗ ತಮ್ಮ ವಾಹನ ನಿಲ್ಲಿಸಿ ಲೈಟ್ ಆಪ್ ಮಾಡಿದ್ದಾರೆ. ಬಳಿಕ ಕೆಲ ಕ್ಷಣಗಳ ನಂತರ ಮತ್ತೆ ಲೈಟ್ ಆನ್ ಮಾಡಿದಾಗ ಚಿರತೆ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಚಿರತೆ ನಡೆದು ಹೋಗಿದೆ. ಲೈವ್ ಆಗಿ ಚಿರತೆ ಕಂಡು ಕಾರಿನಲ್ಲಿದ್ದವರಿಗೆ ಕೊಂಚ ಭಯ ಆದರೆ ಮತ್ತೊಂದೆಡೆ ಖುಷಿ ಆಗಿದೆ ಎನ್ನಲಾಗಿದೆ.

ಚಿರತೆ ಪ್ರತ್ಯಕ್ಷವಾಗಿರುವ ಪ್ರದೇಶಗಳಲ್ಲಿ ಅನೇಕ ಮನೆಗಳಿವೆ. ಆಹಾರ ಹುಡುಕಿ ಚಿರತೆ ಬಂದಿರಬಹುದೆಂದು ಸ್ಥಳೀಯರು ಶಂಕಿಸಿದ್ದಾರೆ. ಶಿರಸಿ ಅರಣ್ಯ ವ್ಯಾಪ್ತಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಚಿರತೆಗಳಿದ್ದು ಜನತೆ ಎಚ್ಚರದಿಂದ ಓಡಾಡುವುದು ಒಳಿತು.

ಇದನ್ನು ಓದಿ : ಶಿರಸಿಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ.

ಕಾರವಾರ ಜಿಲ್ಲಾ ಪ್ರಶಸ್ತಿ ಪಡೆದ ಶಿಕ್ಷಕರು

ಚಿನ್ನದ ಹುಡುಗಿಗೆ ಚಿನ್ನದಂಥ ಸ್ವಾಗತ