ಭಟ್ಕಳ (BHATKAL) : ಯುರೋಪ್(YUROPE) ದೇಶದ ಹಂಗೇರಿಯಲ್ಲಿ ನಡೆದ ಯಾಕೋ ವಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್(YAKO WORLD KICK BOXING CHAMPIONSHIP) ನಲ್ಲಿ ಚಿನ್ನದ ಪದಕ ಗೆದ್ದು ತವರಿಗೆ ಆಗಮಿಸಿದ ಭಟ್ಕಳ ಧನ್ವಿತಾ ವಾಸು ಮೊಗೇರ(DHANVITA VASU MOGER) ಹಾಗೂ ಕೋಚ್ ನಾಗಶ್ರೀ ನಾಯ್ಕ ಅವರನ್ನು ತಾಲೂಕಿನ ವಿವಿಧ ಸಂಘ ಸಂಸ್ಥೆಗಳಿಂದ ಭಟ್ಕಳ ಅದ್ದೂರಿ ಸ್ವಾಗತ ಕೋರಲಾಯಿತು.
ಬಳಿಕ ತೆರೆದ ಜೀಪ್ ನಲ್ಲಿ ಪುಷ್ಪಾಂಜಲಿ ಟಾಕೀಸ್ ರಸ್ತೆ ಮೂಲಕ ಮಣ್ಕುಳಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 66, ಸಂಶುದ್ದೀನ್ ಸರ್ಕಲ್ ನಲ್ಲಿ ಮೆರವಣಿಗೆ ಮಾಡಲಾಯಿತು. ಮೊಗೇರ(MOGER) ಸಮಾಜದ ಅಧ್ಯಕ್ಷ ಅಣ್ಣಪ್ಪ ಮೊಗೇರ ಸಾಧಕರನ್ನು ಸನ್ಮಾನಿಸಿದರು. ಬಳಿಕ ಅಲ್ಲಿಂದ ಧನ್ವಿತಾ ವಾಸು ಮೊಗೇರ ವಿದ್ಯಾಭ್ಯಾಸ ಮಾಡುತ್ತಿರುವ ಆನಂದಾಶ್ರಮ ಶಾಲೆಗೆ ಮೆರವಣಿಗೆ ತಲುಪಿತು. ಅಲ್ಲಿ ಶಾಲಾ ಆಡಳಿತ ಮಂಡಳಿಯಿಂದ ಕೂಡ ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಿಸಲಾಯಿತು.
ಭಟ್ಕಳ ರೈಲ್ವೇ ನಿಲ್ದಾಣ(BHATKAL RAILWAY STATION)ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಮೋಹನ ನಾಯ್ಕ, ಪುಟಾಣಿ ಧ್ವನಿತಾ ಈಕೆ ಶ್ರೇಷ್ಠ ಸಾಧನೆ ಮಾಡಿದ್ದಾಳೆ. ಕೇವಲ ತಾಲೂಕಾ, ಜಿಲ್ಲಾ, ರಾಜ್ಯ, ರಾಷ್ಟ ಮಟ್ಟದಲ್ಲಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾಳೆ. ಕಿಕ್ ಬಾಕ್ಸಿಂಗ್ ನಲ್ಲಿ ಮೊಟ್ಟ ಮೊದಲು ಚಿನ್ನ ಬೆಳ್ಳಿ ಗೆದ್ದಿರುವುದು ಭಟ್ಕಳ ತಾಲೂಕಿಗೆ ಹೆಮ್ಮೆ ಸಂಗತಿ. ಈ ಸಾಧನೆಗೆ ಈಕೆಯ ಕೋಚ್ ನಾಗಶ್ರೀ ನಾಯ್ಕ ಶ್ರಮ ಕೂಡ ಮುಖ್ಯ ಪಾತ್ರವಾಗಿದೆ ಎಂದರು.
ಉತ್ತರಕನ್ನಡ ಜಿಲ್ಲೆ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಹಾಗೂ ರಾಜ್ಯ ಅಮೇಚ್ಯೂರ್ ಕಬಡ್ಡಿ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಶ್ರೀಧರ ನಾಯ್ಕ ಮುಟ್ಟಳ್ಳಿ ಮಾತನಾಡಿ ಧನ್ವಿತಾ ಸಾಧನೆಯನ್ನ ಕೊಂಡಾಡಿದರು . ಬೈಕ್ ಮೆರವಣಿಗೆಯಲ್ಲಿ ತಾಲೂಕಿನ ವಿವಿಧ ಸಂಘ ಸಂಸ್ಥೆ ಹಾಗೂ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನು ಓದಿ : ಶಿರಸಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ
ಕಾರವಾರ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
ದೇಶಪಾಂಡೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ