ಕಾರವಾರ(KARWAR) : ಕಾರವಾರದ‌
ಕಾಳಿ ಸೇತುವೆ (KALI BRIDGE) ಮೇಲಿಂದ ಬಿದ್ದ  ಲಾರಿ ದಡಕ್ಕೆ ಎಳೆಯಲು ಹರಸಾಹಸ ಮಾಡಲಾಗುತ್ತಿದೆ.

ಈಶ್ವರ ಮಲ್ಪೆ ತಂಡದಿಂದ ಲಾರಿಯನ್ನ ಕುಸಿದು ಬಿದ್ದ ಸೇತುವೆಯಿಂದ ಜಾರಿಸಿ ಕೆಳಕ್ಕೆ ತರಲಾಗಿದೆ. ಐಆರ್ಬಿ ಕಂಪನಿಯಿಂದ ಗುತ್ತಿಗೆದಾರರೊಬ್ಬರಿಗೆ ಲಾರಿ ತೆರವಿಗೆ ಗುತ್ತಿಗೆ ನೀಡಲಾಗಿದೆ. ಹೀಗಾಗಿ ವಿಂಚ್ ಮೂಲಕ ಲಾರಿ ಎಳೆಯಲಾಗುತ್ತಿದೆ. ಇನ್ನೂ ಕೆಲ ಹೊತ್ತಿನಲ್ಲಿ ಲಾರಿ ದಡಕ್ಕೆ ಬರಲಿದೆ.

ಆಗಸ್ಟ್ ಏಳರಂದು ಬೆಳಿಗ್ಗೆ ಒಂದು ಗಂಟೆ ಸುಮಾರಿಗೆ 41 ವರ್ಷ ಹಳೆಯ ಕಾಳಿ ಸೇತುವೆ ಕುಸಿದು ಬಿದ್ದಿದ್ದು ತಮಿಳುನಾಡು ಮೂಲದ ಲಾರಿಯೊಂದು ಬಿದ್ದಿತ್ತು. ಅದೃಷ್ಟವಾಶಾತ್ ಚಾಲಕನನ್ನ ಸ್ಥಳೀಯರು ಬಚಾವ್ ಮಾಡಿದ್ದರು. ಘಟನೆ ನಡೆದು ಒಂಬತ್ತು ದಿನಗಳ ನಂತರ ಇಂದು ಲಾರಿ ಮಾಲೀಕನ ಮನವಿ ಮೇರೆಗೆ ಲಾರಿ ದಡಕ್ಕೆ ಎಳೆಯಲಾಗಿದೆ.

ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯ ಸಾರ್ವಜನಿಕರು ಸೇರಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗದಂತೆ ಪೊಲೀಸರು ಜನರನ್ನ ಚದುರಿಸುತ್ತಿದ್ದಾರೆ. ಇನ್ನೇನು ಕೆಲ ಹೊತ್ತಿನಲ್ಲಿ ಲಾರಿ ದಡ ಸೇರಲಿದೆ.