ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) : ತಾಲೂಕಿನ ರಾ. ಹೆದ್ದಾರಿ 52ರ(NH 52) ಬಾಳೇಗುಳಿ ಗೋಪಾಲಕೃಷ್ಣ ದೇವಾಲಯದ ಬಳಿ ಕಾಶ್ಮೀರಿ ಸೇಬು(Kashmiri Apple) ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿ(Lorry Tournover) ಬಿದ್ದ ಘಟನೆ ನಡೆದಿದೆ.
ಕಾಶ್ಮೀರದಿಂದ ಮಂಗಳೂರಿಗೆ(Kashmir to Manglore) ಸೇಬು ಹಣ್ಣಿನ ಬಾಕ್ಸ್ ಗಳನ್ನು ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ರಸ್ತೆ ತುಂಬ ಸೇಬು ಹಣ್ಣಿನ(Apple) ಬಾಕ್ಸ್ ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಘಟನೆಯಿಂದಾಗಿ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ(National Highway) ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು.
ಲಾರಿ ಪಲ್ಟಿಯಾದರೂ ಚಾಲಕ ಮತ್ತು ಸಹಾಯಕ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ. ಹೆದ್ದಾರಿ ಗಸ್ತು ವಾಹನ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕ್ರೇನ್ ಸಹಾಯದಿಂದ ಲಾರಿಯನ್ನು ಮೇಲೆತ್ತಿದ್ದಾರೆ. ಸ್ಥಳೀಯ ಸಹಕಾರದಿಂದ ರಸ್ತೆಯಲ್ಲಿ ಬಿದ್ದಿರುವ ಸೇಬು ಹಣ್ಣಿನ ಬಾಕ್ಸ್ ಗಳನ್ನು ಎತ್ತಲಾಗಿದ್ದು, ಸಾಕಷ್ಟು ಬಾಕ್ಸ್ ಗಳಲ್ಲಿನ ಸೇಬು ಹಣ್ಣುಗಳು ಹಾನಿಯಾಗಿದೆ. ಅಂಕೋಲಾ ಪೊಲೀಸ್ ಠಾಣಾ(Ankola Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನು ಓದಿ : ಬ್ರಿಟಿಷ್ ಕಾಲದ ಟೋಪಿಗೆ ಗುಡ್ ಬೈ. ಇನ್ಮುಂದೆ ಪೊಲೀಸರಿಗೆ ಸ್ಲೋಚ್ ಬದಲಾಗಿ ಪೀಕ್ ಕ್ಯಾಪ್.
ಅಕ್ಟೋಬರ್ 28ಕ್ಕೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ. ಹವಮಾನ ಇಲಾಖೆ ಎಚ್ಚರಿಕೆ.
ಈ ಶ್ರೀಗಂಧ ಸ್ಮಗ್ಲರ್ ಗಳಿಗೆ ಪುಷ್ಪಾ ಸಿನೇಮಾ ಪ್ರೇರಣೆ. ಪೊಲೀಸರಲ್ಲಿ ಲಾಕ್ ಆದ ನಾಲ್ವರು ಚೋರರು.
r

