ಹೊನ್ನಾವರ(HONNAVAR) : ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಉತ್ತರಕನ್ನಡ ಜಿಲ್ಲೆಯಲ್ಲಿ ಅತ್ಯಂತ ಸಡಗರದಿಂದ ಆಚರಿಸಲಾಯಿತು.

ಹಳಿಯಾಳದ ಮಾವಿನಕೊಪ್ಪ ಚೆಕ್ ಪೋಸ್ಟ್ ನಿಂದ ಭಟ್ಕಳದ ಗೊರಟೆ ಗಡಿವರೆಗೆ ಮಾನವ ಸರಪಳಿ(HUMAN CHAIN) ಮಾಡುವುದರ ಮೂಲಕ ಪ್ರಜಾಪ್ರಭುತ್ವದ ಆಶಯ ಎತ್ತಿ ಹಿಡಿಯಲಾಯಿತು.

ಹೊನ್ನಾವರದ ರಾ. ಹೆದ್ದಾರಿ 66ರಲ್ಲಿ ಗೇರುಸೊಪ್ಪ ಸರ್ಕಲ್ ಬಳಿ ಜಿಲ್ಲಾಡಳಿತದಿಂದ ಕಾರ್ಯಕ್ರಮ ಆಯೋಜಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ(MANKAL VAIDYA), ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ(RV DESHAPANDE), ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಜಿ.ಪಂ ಸಿಇಓ ಈಶ್ವರ್ ಕಾಂದು ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ನೆರೆದ ಗಣ್ಯರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಕೈಕೈ ಹಿಡಿಯುವ ಮೂಲಕ ಪ್ರಜಾಪ್ರಭುತ್ವದ ಪರ ಘೋಷಣೆ ಕೂಗಿದರು. ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವಕ್ಕಾಗಿ ಈ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು. ಹೊನ್ನಾವರದ ಮೂಡಗಣಪತಿ ದೇವಾಲಯದ ಸಭಾಭವನದಲ್ಲಿ  ನಡೆದ ಕಾರ್ಯಕ್ರಮವನ್ನ ಸಚಿವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.

ಇದನ್ನು ಓದಿ : ಬೆಂಗಳೂರು ವಿದ್ಯಾರ್ಥಿಗಳಿಂದ ಕಡಲಾಮೆ ದರ್ಶನ

ಕುಮಟಾ ಪೋಲೀಸರ ಕಾರ್ಯಾಚರಣೆ. ನಾಲ್ವರ ಬಂಧನ