ಕುಂದಾಪುರ(KUNDAPURA) :  ಬಿಸಿಲಿನ ಝಳ ತಾಳಲಾರದೆ ಕುಂದಾಪುರದ ಯುವಕನೋರ್ವ ಯು.ಎ.ಇ.(UAE) ನಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.

ಶಾನ್‌ ಡಿ’ಸೋಜಾ (19) ಕುಂದಾಪುರ ತಾಲೂಕಿನ ವಿಠಲವಾಡಿ ನಿವಾಸಿ   ಮೃತಪಟ್ಟ ಯುವಕನಾಗಿದ್ದಾನೆ. ದುಬೈಯಿಂದ ಸುಮಾರು 115 ಕಿ.ಮೀ. ದೂರದಲ್ಲಿರುವ ರಾಸ್‌ ಅಲ್‌ ಖೈಮಾದಲ್ಲಿ ಈ ಘಟನೆ ನಡೆದಿದೆ. ಬಿಸಿಲಿನ ತಾಪಕ್ಕೆ ಗುರಿಯಾಗಿ ಶಾನ್ ಕೆಲ ದಿನಗಳ ಹಿಂದೆ ಆರ್‌ಎಕೆ (RAK) ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಎನ್ನಲಾಗಿದೆ. ಚಿಕಿತ್ಸೆಗೆ ಸ್ಪಂದಿಸದೆ ರವಿವಾರ ಮೃತರಾಗಿದ್ದಾರೆ.

ಎಲಿಯಾಸ್ ಡಿಸೋಜಾ ಮತ್ತು ಪ್ರಮೀಳ ಅವರ ಪುತ್ರರಾಗಿದ್ದ ಶಾನ್ ಡಿಸೋಜಾ ಪಾಲಕರು ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ. ತಂದೆ ಎಲಿಯಾಸ್‌ ಅವರು ಯುಎಇ ನಲ್ಲಿ ಖಾಸಗಿ ಕಂಪೆನಿಯಲ್ಲಿ ಮ್ಯಾನೆಜರ್‌ ಆಗಿದ್ದರು.

ಹೀಗಾಗಿ ಕುಟುಂಬದ ಜೊತೆ ಶಾನ್‌ ಡಿ’ಸೋಜಾ ಅವರು ಯು.ಎ.ಇ. ಸೈಂಟ್‌ ಮೆರೀಸ್‌ ಚರ್ಚ್‌ (Saint MARIES ) ಬಳಿ ಮನೆಯಲ್ಲಿ ವಾಸವಾಗಿದ್ದರು. ಅಲ್ಲಿಯೇ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದ ಅವರು  ಬಿಸಿಲಿನ ಝಳಕ್ಕೆ  ಹೈರಾಣಾಗಿ ಮೃತಪಟ್ಟಿದ್ದಾರೆ.

ಇದನ್ನು ಓದಿ : ಎಂಟು ವಾಹನಗಳ ನಡುವೆ ಅಪಘಾತ

ವಿಶ್ವ ದಾಖಲೆ ಬರೆದ ಪ್ರಜಾಪ್ರಭುತ್ವ ದಿನಾಚರಣೆ

ಬಾವಿಗೆ ಬಿದ್ದು ಪರಿತಪಿಸಿದ ಚಿರತೆ