ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ನವದೆಹಲಿ(Newdelhi) : ಅಬುಧಾಬಿಯಲ್ಲಿ ವಾಸವಾಗಿರುವ ಭಾರತೀಯ ವ್ಯಕ್ತಿಯೊಬ್ಬರು ಸುಮಾರು 240 ಕೋಟಿ ರೂ. ಮೊತ್ತದ ಲಾಟರಿ ಬಹುಮಾನ(Lottery Prize) ಗೆದ್ದಿದ್ದಾರೆ.
ಕೇರಳ ಮೂಲದ(Keral Native) ಅನಿಲಕುಮಾರ್ ಬೊಲ್ಲ(29) ಎಂಬುವವರು 100 ಮಿಲಿಯನ್ ದಿರ್ಹಾಮ್ಗಳ (ಸುಮಾರು 240 ಕೋ.ರೂ.) ಯುಎಇಯ(UAE) ಈವರೆಗಿನ ಅತ್ಯಂತ ದೊಡ್ಡ ಮೊತ್ತದ ಲಾಟರಿ ಬಹುಮಾನವನ್ನು(Lottery Prizes) ಗೆಲ್ಲುವ ಮೂಲಕ ಬಹುಕೋಟ್ಯಾಧೀಶರಾಗಿದ್ದಾರೆ.
ಕಳೆದ ವಾರ ನಡೆದ 23ನೇ ಅದೃಷ್ಟ ಡ್ರಾದಲ್ಲಿ ಎಲ್ಲ ಏಳೂ ಅಂಕಿಗಳನ್ನು ಸರಿಯಾಗಿ ಊಹಿಸುವ ಮೂಲಕ 88 ಲಕ್ಷ ಟಿಕೆಟ್ಗಳ ಪೈಕಿ ಅದೃಷ್ಟವಂತರಲ್ಲಿ ಅನಿಲಕುಮಾರ್ ಹೊರಹೊಮ್ಮಿದ್ದಾರೆ. ಲಾಟರಿ ವಿಜೇತ(Lottery Winner) ಅನಿಲ್ ಕುಮಾರ್ ವಿಡಿಯೋವನ್ನು ಯುಎಇ ಲಾಟರಿ ಸಂಸ್ಥೆಯು(UAE Lottery Organization) ಟ್ವಿಟರ್ ನಲ್ಲಿ ಜನರ ಜೊತೆ ಹಂಚಿಕೊಂಡಿದೆ. ನಿರೀಕ್ಷೆಯಿಂದ ಆಚರಣೆವರೆಗೆ ಎಂದು ಕಾಪ್ಟನ್ ನೀಡಲಾಗಿದೆ. ಒಂದು ಅದೃಷ್ಟದ ದಿನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅನಿಲಕುಮಾರ್ ಗೆ ಅಕ್ಟೋಬರ್ 18(October 18) ಬರೀ ಮತ್ತೊಂದು ದಿನವಲ್ಲ. ಆ ದಿನ ಎಲ್ಲವನ್ನೂ ಬದಲಾಯಿಸಿಬಿಟ್ಟಿತ್ತು. ಜೀವನ ಬದಲಾವಣೆ(Life Change) ಮತ್ತು ನೀವು ಧೈರ್ಯ ಮಾಡಿ ಊಹಿಸಿಕೊಳ್ಳುವುದರಿಂದ ಏನಾಗುತ್ತೆ ಎಂಬುದರ ನೆನಪು. ಕಂಗ್ರಾಜುಲೇಷನ್ ಅನಿಲ್ ಕುಮಾರ್(Congratulations Anilkumar) ಎಂದು ಯುಎಇ ಲಾಟರಿ ಸಂಸ್ಥೆ ಟ್ವಿಟ್ ಮಾಡಿದೆ.
ವಿಡಿಯೋದಲ್ಲಿ ಅನಿಲ್ ಕುಮಾರ್ ತಮ್ಮ ಲಾಟರಿ ಗೆಲುವನ್ನು ಸಂಭ್ರಮಿಸುವುದನ್ನು(Celebration) ತೋರಿಸಲಾಗಿದೆ. ಅನಿಲಕುಮಾರಗೆ ಲಾಟರಿ ಗೆದ್ದ ಹಣದ ಚೆಕ್ ನೀಡಲಾಗಿದೆ. ವಿಡಿಯೋದಲ್ಲಿ ಅನಿಲ್ ಕುಮಾರ್, ತಾವು ಗೆದ್ದ ಲಾಟರಿ ಟಿಕೆಟ್ನ ನಂಬರ್ ಆಯ್ಕೆ ಮಾಡಿಕೊಂಡ ಕಥೆಯನ್ನ ಶೇರ್ ಮಾಡಿದ್ದಾರೆ. ನಾನು ಯಾವುದೇ ಮ್ಯಾಜಿಕ್ ಮಾಡಿಲ್ಲ. ನಾನು ಬರೀ ಸುಲಭ ಆಯ್ಕೆ ಮಾಡಿಕೊಂಡೆ. ಲಾಟರಿಯ ಕೊನೆಯ ನಂಬರ್ ಬಹಳ ಸ್ಪೆಷಲ್ . ಅದು ನನ್ನ ತಾಯಿಯ ಹುಟ್ಟುಹಬ್ಬದ ನಂಬರ್(Mother Birthday Number) ಎಂದು ಅನಿಲ್ ಕುಮಾರ್ ಹೇಳಿದ್ದಾರೆ.
ಲಾಟರಿ ಗೆದ್ದ ಸುದ್ದಿ ಗೊತ್ತಾದಾಗ, ನನಗೆ ಶಾಕ್ ಆಗಿತ್ತು. ನಾನು ಆಗ ಸೋಫಾ ಮೇಲೆ ಕುಳಿತಿದ್ದೆ. ಆಗ ನಾನು ಹೌದು, ನಾನು ಲಾಟರಿ ಗೆದ್ದಿದ್ದೇನೆ ಎಂದು ಅನ್ನಿಸಿತು. ಲಾಟರಿಯಿಂದ ಗೆದ್ದ 240 ಕೋಟಿ ರೂಪಾಯಿ ಹಣವನ್ನು ಜವಾಬ್ದಾರಿಯುತವಾಗಿ ಖರ್ಚು ಮಾಡುವುದಾಗಿ ಅನಿಲ್ ಕುಮಾರ್ ಹೇಳಿದ್ದಾರೆ
ನಾನು ಈ ಹಣವನ್ನು ಹೇಗೆ ಹೂಡಿಕೆ(Investment) ಮಾಡಬೇಕು ಎಂಬುದರ ಬಗ್ಗೆ ಆಲೋಚಿಸುತ್ತಿದ್ದೆ. ಸರಿಯಾದ ರೀತಿಯಲ್ಲಿ ಹಣವನ್ನು ಖರ್ಚು ಮಾಡಬೇಕು. ಲಾಟರಿ ಗೆದ್ದ ಬಳಿಕ ನನಗೆ ನನ್ನ ಬಳಿ ಹಣ ಇದೆ ಅನ್ನಿಸಿತು. ಈಗ ನಾನು ಸರಿಯಾದ ದಾರಿಯಲ್ಲಿ ಆಲೋಚನೆ ಮಾಡಬೇಕು. ನಾನು ಏನನ್ನಾದರೂ ದೊಡ್ಡದ್ದನ್ನು ಮಾಡಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ತನ್ನ ಹೆತ್ತವರ ಕನಸುಗಳನ್ನು ನನಸಾಗಿಸಲು, ಅವರನ್ನು ಯುಎಇಗೆ ಕರೆತರಲು ಮತ್ತು ಗೆದ್ದ ಹಣದಲ್ಲಿ ಒಂದು ಭಾಗವನ್ನು ದಾನ ಮಾಡಲು ಯೋಜಿಸಿರುವುದಾಗಿ ತಿಳಿಸಿದ್ದಾರೆ.
ಯುಎಇಯ ಲಾಟರಿ ಇತಿಹಾಸದಲ್ಲಿಯೇ(UAE Lottery History) 100 ಮಿಲಿಯನ್ ದಿರ್ಹಾಮ್ಗಳ ಬಹುಮಾನವನ್ನು ಗೆದ್ದ ಮೊದಲ ವ್ಯಕ್ತಿ(First Person) ಎಂಬ ಹೆಗ್ಗಳಿಕೆಗೆ ಅನಿಲಕುಮಾರ ಬೊಲ್ಲ ಪಾತ್ರರಾಗಿದ್ದಾರೆ.
ಇದನ್ನು ಓದಿ : ಅಂಕೋಲಾದ ಸರಕಾರಿ ಕಾಲೇಜಿನಲ್ಲಿ ಚಪಲ ಚೆನ್ನಿಗರಾಯ. ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ. ಪೋಷಕರ, ವಿದ್ಯಾರ್ಥಿಗಳ ಪ್ರತಿಭಟನೆ
ಕಾರವಾರ ರಾ. ಹೆದ್ದಾರಿಯಲ್ಲಿ ಎರಡು ಅಪಘಾತ. ಬೈಕ್ ಸವಾರರಿಗೆ ಗಾಯ.

