ಬೆಂಗಳೂರು : ಕನ್ನಡಿಗರ ಮನೆ ಮಾತಿನ ಹಿರಿಯ ನಿರೂಪಕಿ (SENIOR ANCHOR) ಅಪರ್ಣ ಸಾವನ್ನಪ್ಪಿದ್ದಾರೆ. ಕನ್ನಡ ನಾಡಿನ ಅಪಾರ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ.

ಬನಶಂಕರಿ ಸೆಕೆಂಡ್ ಸ್ಟೇಜ್‌ನಲ್ಲಿರುವ ಅವರ ನಿವಾಸದಲ್ಲಿ ಅಪರ್ಣ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.  ಕಳೆದ ಕೆಲ ದಿನಗಳಿಂದ ಕ್ಯಾನ್ಸರ್‌ ಕಾಯಿಲೆಯಿಂದ  ಬಳಲುತ್ತಿದ್ದ ಅಪರ್ಣ ಚಿಕಿತ್ಸೆ ಫಲಿಸದೆ  ಮೃತಪಟ್ಟಿದ್ದಾರೆ. ಅವರ ಸಾವಿನ ಸುದ್ದಿ ಅಭಿಮಾನಿ ಬಳಗ ಮತ್ತು ಕನ್ನಡಿಗರು ಶಾಕ್ ಆಗುವಂತೆ ಮಾಡಿದೆ.

  ತಮ್ಮ ನಿರೂಪಣ ಶೈಲಿಯಿಂದ  ಅಪರ್ಣಾ ಕನ್ನಡಿಗರ ಮನೆ ಮನೆಯಲ್ಲಿ  ನೆಲೆಸಿದ್ದರು. ಅಪ್ಪಟ ಕನ್ನಡದಲ್ಲಿಯೇ ಭಾಷಾ ವ್ಯತ್ಯಾಸಗಳಿಲ್ಲದೆ ತುಂಬಾ ಸೊಗಸಾಗಿ ನಿರೂಪಣೆ ಮಾಡುತ್ತಿದ್ದರು. ಕನ್ನಡದ ಕೆಲವೇ ಕೆಲವು ನಿರೂಪಕಿಯರಲ್ಲಿ ಅಪರ್ಣ ಒಬ್ಬರಾಗಿದ್ದರು.

1984 ರಲ್ಲಿ ತೆರೆಕಂಡ ಮಸಣದ ಹೂ ಸಿನಿಮಾದಲ್ಲೂ ಅಪರ್ಣಾ ನಟಿಸಿದ್ದರು. 1984 ರಲ್ಲಿ ಮಸಣದ ಹೂ ಸಿನಿಮಾ(CINEMA) ತೆರೆಕಂಡಿತ್ತು. ಅವರ ಸಾವಿನ ಸುದ್ದಿ  ಇಡೀ ಚಿತ್ರರಂಗವೇ ಕಂಬನಿ ಮಿಡಿಯುತ್ತಿದ್ದೆ. ಕಳೆದ ಕೆಲ ದಿನಗಳಿಂದ ಅಪರ್ಣಾ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.

ಅಪರ್ಣ ಅವರ ನಿರೂಪಣೆಯನ್ನ ಅನುಸರಿಸಿ ನಾಡಿನ ಹಲವು ನಿರೂಪಕರು ಸಾಗುತ್ತಿದ್ದರು. ಅವರಿಗೆಲ್ಲ ಸಾವಿನ ಸುದ್ದಿ ಶಾಕ್ ನೀಡಿದೆ. ನಿರೂಪಕಿ ಅಪರ್ಣಾ  ವಸ್ತಾರೆ (APARNA VASTRE) ಇವರಿಗೆ ಒಂದು ನಿರೂಪಣೆ ಶಾಲೆ (ANCHOR SCHOOL) ತೆರೆಯಬೇಕೆಂಬ ಆಸೆ ಇತ್ತು. ಈ ಬಗ್ಗೆ ಕನ್ನಡದ ಖ್ಯಾತ ನಟರಲ್ಲಿಯೂ ಹೇಳಿಕೊಂಡಿದ್ದರು.
ಆದರೆ ಇದು ಸಾಧ್ಯವಾಗಲಿಲ್ಲ. ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಬಿಟ್ಟು ಅಪರ್ಣಾ ಅವರು ಬಾರದ ಲೋಕಕ್ಕೆ ತೆರಳಿದ್ದಾರೆ.