ಕಾರವಾರ (KARWAR) : ಪಣಜಿಯ (Panjim) ಅಸ್ಕವಾಡದಲ್ಲಿ ಮಾಂಡ್ರೆಮ್ ಮಾಜಿ ಸರಪಂಚ ಮಹೇಶ್ ಕೋನಾಡ್ಕರ್ ಅವರ ಹಲ್ಲೆ ಪ್ರಕರಣದಲ್ಲಿ (Assalt Case) ಭಾಗಿಯಾದ ಆರು ಜನರನ್ನ ಉತ್ತರ ಗೋವಾ ಪೊಲೀಸರು North Goa Police) ಕಾರವಾರದಲ್ಲಿ ಬಂಧಿಸಿದ ಘಟನೆ ನಡೆದಿದೆ.
ಓಲ್ಡ್ ಗೋವಾದ (Old Goa) ವಿಶ್ವನಾಥ್ ಹರಿಜನ್, ಪೊರ್ವೊರಿಮ್‌ನ ಸುರೇಶ್ ನಾಯ್ಕ ಮೈನಾ-ಪಿಲರ್ನ್ ಸಾಯಿರಾಜ್ ಗೋವೆಕರ್, ಸೇಂಟ್ ಕ್ರೂಜ್‌ನ ಫ್ರಾಂಕಿ ನಾಡರ್, ಚೋರಾವ್‌ನ ಮನೀಶ್ ಹಡ್‌ಫಡ್ಕರ್ ಮತ್ತು ಪಂಜಿಮ್‌ನ ಉದ್ದೇಶ್ ಶೆಟ್ಟಿ ಅವರಿಗೆ ಕಾರವಾರ ನಗರದಲ್ಲಿ(Karwar Town) ವಶಕ್ಕೆ ಪಡೆಯಲಾಗಿದೆ.
ಮಾಂಡ್ರೆಮ್ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಪುಂಡಲೀಕ ಹರಿಜನನನ್ನು ಬಂಧಿಸಿದ್ದರು. ಜೊತೆಗೆ ಕೃತ್ಯಕ್ಕೆ ಬಳಸಿದ ವಾಹನವನ್ನು ಸೀಜ್ (Seaz) ಮಾಡಿದ್ದರು. ಡಿಸೆಂಬರ್ 4ರಂದು ಮಂಡ್ರೆಮ್‌ನ ಅಸ್ಕವಾಡದಲ್ಲಿ ಅಪರಿಚಿತ ಮುಸುಕುಧಾರಿಗಳು ಮಾಜಿ ಸರಪಂಚ ಮಹೇಶ್ ಕೋನಾಡ್ಕರ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಇದನ್ನು ಓದಿ : ಮೀಸಲು ಅರಣ್ಯದಲ್ಲಿ ಬೆಲೆ ಬಾಳುವ ಮರಗಳ್ಳತನ ಮಾಡಿದ ಹತ್ತು ಜನರು ಹೆಡೆಮುರಿಗೆ.
ನಾಲ್ಕನೇ ಮಹಡಿಯಿಂದ ಜಿಗಿದು ತಂದೆ ಆತ್ಮತ್ಯೆ. ಮೃತದೇಹದ ಮುಂದೆ ಮಕ್ಕಳ ಜಗಳ.