ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೊನ್ನಾವರ(Honnavar) : ತಮ್ಮ ತೋಟದ ಮನೆಯ ಬಾವಿಯಲ್ಲಿ ಹಾರಿ, ಆತ್ಮಹತ್ಯೆ ಮಾಡಿಕೊಂಡ ಯುವತಿ ಪ್ರೇಮ ವೈಪಲ್ಯದಿಂದ(Love Failure) ದುಡುಕಿನ ನಿರ್ಧಾರ ಕೈಗೊಂಡಳೇ ಎಂಬುದರ ಬಗ್ಗೆ  ಗ್ರಾಮಸ್ಥರು(Villagers) ಸಂಶಯಿಸಿದ್ದಾರೆ.  ತನ್ನ ಮಗಳ ಸಾವಿನಲ್ಲಿ ಸಂಶಯವಿದೆ ಎಂದು ಆಕೆಯ ತಾಯಿ‌ ದೂರಿನಲ್ಲಿ ತಿಳಿಸಿದ್ದಾಳೆ.

ಹೊನ್ನಾವರ(Honnavar) ತಾಲೂಕಿನ ಚಿಕ್ಕನಕೋಡ ಗ್ರಾಮ(Chikkanakodu village) ಪಂಚಾಯತ್ ವ್ಯಾಪ್ತಿಯ ಗುಂಡಿಬೈಲ್‌ನಲ್ಲಿ(Gundibail) ಯುವತಿ ಗಾಯತ್ರಿ ಕೇಶವ ಗೌಡ (25) ಶನಿವಾರದಂದು  ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಯಾವುದೊ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು  ಸಾವನ್ನಪ್ಪಿದ್ದಳು ಎಂದು ಆಕೆಯ ಗಿರಿಜಾ ಕೇಶವ ಗೌಡ ಇವರು ದೂರಿನಲ್ಲಿ ತಿಳಿಸಿದ್ದಾರೆ.

ಗಾಯತ್ರಿ  ಕಳೆದ  ಒಂಬತ್ತು ವರ್ಷಗಳಿಂದ ಓರ್ವ ಯುವಕನನ್ನು ಇಷ್ಟ ಪಟ್ಟಿದ್ದು, ಎರಡು ಕುಟುಂಬದ ಒಪ್ಪಿಗೆ ಪಡೆದು ಮದುವೆಯ ಮಾತುಕತೆ ನಡೆದಿತ್ತು. ಈ ಮಧ್ಯೆ  ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು ಎನ್ನುವ ಸುದ್ದಿ ಹರಿದಾಡುತ್ತಿದೆ. ಇದೇ ವಿಷಯದಿಂದಲೇ ಆಕೆ ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದೆ.

ನಾಲ್ಕು ವರ್ಷದ ಹಿಂದೆ ತಂದೆಯನ್ನ ಕಳೆದುಕೊಂಡಿದ್ದ ಗಾಯತ್ರಿ ದಶಕಗಳ ಹಿಂದೆ  ಒಡ ಹುಟ್ಟಿದ ಸಹೋದರ ಮನೆ ಬಿಟ್ಟುಹೋಗಿದ್ದ. ಇದೀಗ  ತಾಯಿಗೆ ಆಸರೆಯಾಗಬೇಕಿದ್ದ   ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹೆತ್ತಮ್ಮನ ಸ್ಥಿತಿ‌ ಯಾರಿಗೂ ಬೇಡ.

ತಾಯಿಗೆ ತಾನೆ ದಿಕ್ಕು ಎಂದು ಗೊತ್ತಿದ್ದರೂ ಕೂಡ ಆತ್ಮಹತ್ಯೆಯ ದುಡುಕಿನ ನಿರ್ಧಾರ ಕೈಗೊಂಡಿದ್ಯಾಕೆ .  ಅಂತಹ  ಪರಿಸ್ಥಿತಿ ಯಾಕೆ ಬಂತು  ಅನ್ಮೋದೇ  ಪ್ರಶ್ನೆಯಾಗಿದೆ.

ನರ್ಸಿಂಗ್ ತರಬೇತಿ(Nursing Training) ಪಡೆದು, ಆಸ್ಪತ್ರೆಯಲ್ಲಿ ಕೆಲಸ ಮಾಡಿ, ನಂತರ ಕಾಸರಕೋಡ ಸ್ನೇಹಕುಂಜದಲ್ಲಿ(Snehakunja Kasarakodu) ಕೆಲಸ ಮಾಡಿದ ಗಾಯತ್ರಿ  ಕಳೆದ ನಾಲ್ಕು ವರ್ಷದಿಂದ ಮಂಕಿಯ ಶೆಟ್ಟಿ ಡಾಕ್ಟರ್ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದಳು. ತಾಯಿಗೆ ಅನಾರೋಗ್ಯವಾದಾಗ ಚಿಕಿತ್ಸೆ ಕೊಡಿಸಿ ಆಸರೆಯಾಗಿದ್ದಳು.

ತನ್ನ ಗೆಳತಿ ಸಂಬಂಧಿಕರಿಗೆ ಆರೋಗ್ಯ ಸಮಸ್ಯೆಯಾದಾಗ ವೈದ್ಯರ ಜೊತೆ ಮಾತನಾಡಿ ಮುತುವರ್ಜಿ(Care) ವಹಿಸಿದ್ದಳು. ಆತ್ಮಹತ್ಯೆ ಮಾಡಿಕೊಳ್ಳುವ ದಿನ ಮತ್ತು ಅದಕ್ಕೂ ಮೊದಲು ತನ್ನ ಗೆಳತಿಯರಿಗೆ ಕಾಲ್, ಮೆಸೇಜ್ ಮಾಡಿದ್ದಾಳೆ. ಮದುವೆ ಆದವರ ಆರೋಗ್ಯ ವಿಚಾರಿಸಿ, ಕಾಳಜಿ ವಹಿಸುವಂತೆ ಹೇಳಿದ್ದಾಳೆ. ಮದುವೆ ಆಗದೆ ಇರುವ ಗೆಳತಿಯರಿಗೆ ಆದಷ್ಟು ಬೇಗ ಮದುವೆ ಆಗಿ ಎಂದು ಹೇಳಿದ್ದಳು. ನಾಳೆ ಮಾತಾಡುವ  ಅಂದವರ ಬಳಿ ಇಲ್ಲ ಇವತ್ತೇ ಮಾತಾಡು ನಾಳೆ ಆಗಲ್ಲ ಎಂದು ಗಾಯತ್ರಿ  ಹೇಳಿದ್ದಾಳೆ.

ತಂದೆ, ಸಹೋದರನನ್ನು ಕಳೆದುಕೊಂಡರು ಕೂಡ ಗಾಯತ್ರಿ  ದೊಡ್ಡಮ್ಮ ಮತ್ತು ಚಿಕ್ಕಮ್ಮನ ಮಕ್ಕಳು ಸ್ವಂತ ಸಹೋದರಿಯಂತೆ ನೋಡಿಕೊಳ್ಳುತ್ತಿದ್ದರು.  ಅವಳ ಇಚ್ಛೆಯಂತೆ ಎಲ್ಲವನ್ನು ಪೂರೈಸುತ್ತಿದ್ದರು. ಯಾವ ತೊಂದರೆ ಇಲ್ಲದಿದ್ದರೂ   ಆತ್ಮಹತ್ಯೆಗೆ ಮುಂದಾಗಿದ್ದು‌ ಯಾಕೆ ಎಂದು   ತಿಳಿಯದಾಗಿದೆ.

ಗಾಯತ್ರಿ ಮನಸಾರೆ ಪ್ರೀತಿಸುತ್ತಿದ್ದ(Love) ಒಂಬತ್ತು ವರ್ಷದ ಪ್ರೀತಿಗೆ    ಬಿರುಗಾಳಿ ಬೀಸಿದ್ದು ಹೇಗೆ. ಒಂದು ಹಂತದಲ್ಲಿ ಪ್ರೀತಿಸಿದ ಯುವಕನನ್ನು ಮದುವೆಯಾಗಲು ನಿರಾಕರಣೆ ಮಾಡಿದ್ದಳು. ಅದಕ್ಕೆ ಸಂಬಂಧ ಪಟ್ಟಂತೆ ಮೂರು ತಿಂಗಳ ಹಿಂದೆ ಮಾತುಕತೆಯು ಆಗಿತ್ತು ಎನ್ನುವ ಸುದ್ದಿ ಹರಿದಾಡುತ್ತಿದೆ. ಪ್ರೀತಿಸಿದ  ಯುವಕನನ್ನು ಮದುವೆ ಆಗಲಾಗದೇ,  ಬಿಡಲಾಗದೇ  ಸಂದೀಗ ಪರಿಸ್ಥಿತಿ ಉಂಟಾಗಿತ್ತೆ. ಅಥವಾ   ಬೇರೆ ಏನಾದರು ಕಾರಣ ಇದೆಯಾ ಅನ್ನೋ ಬಗ್ಗೆ  ಜನ ಮಾತಾಡಿಕೊಳ್ಳುತ್ತಿದ್ದಾರೆ.  ತರುಣಿಯ ಅಕಾಲಿಕ ಸಾವಿಗೆ ಗ್ರಾಮದ ಜನ ದುಃಖ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ ‌: ಖಾಸಗಿ ಬಸ್ ನಲ್ಲಿ ಕೋಟಿ ರೂ. ಹಣ ಪತ್ತೆ. ಕಾರವಾರದಲ್ಲಿ ಇಬ್ಬರ ಬಂಧನ.

ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ. ನಿಯಮ ಉಲ್ಲಂಘಿಸಿದವರ ಲೈಸೆನ್ಸ್ ರದ್ದು

ಹೆದ್ದಾರಿಯಲ್ಲಿ ಪಲ್ಟಿಯಾದ ಸೇಬು ಹಣ್ಣಿನ ಲಾರಿ. ರಸ್ತೆ ಸಂಚಾರಕ್ಕೆ ಕೆಲ ಕಾಲ ತಡೆ.

ಬ್ರಿಟಿಷ್‌ ಕಾಲದ ಟೋಪಿಗೆ ಗುಡ್ ಬೈ. ಇನ್ಮುಂದೆ ಪೊಲೀಸರಿಗೆ ಸ್ಲೋಚ್ ಬದಲಾಗಿ ಪೀಕ್ ಕ್ಯಾಪ್.

r