ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಕೊಂಚ ಇಳಿಮುಖವಾಗಿದೆ. ಹೀಗಾಗಿ ನಾಳೆ ಜುಲೈ 23 ರಂದು ಶಾಲೆ ಆರಂಭವಾಗಲಿದೆ

ಮಳೆಯ ಕಾರಣಕ್ಕಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳ ಶಾಲೆ ಕಾಲೇಜುಗಳಿಗೆ ಇಷ್ಟು ದಿನ ರಜೆ ನೀಡಲಾಗಿತ್ತು. ಮಕ್ಕಳ ಹಿತದೃಷ್ಟಿಯ ಕಾರಣದಿಂದ ಜಿಲ್ಲಾಡಳಿತ ರಜೆಯನ್ನ ಘೋಷಿಸಲಾಗಿತ್ತು. ಆದರೆ ಈಗ ಎಲ್ಲಾ ತಾಲೂಕಿನಲ್ಲಿ ಮಳೆ ಕಡಿಮೆಯಾಗಿದೆ. ಹೀಗಾಗಿ ಮಂಗಳವಾರ ಪುನರಾರಂಭವಾಗುವುದು.

ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ನಾಳೆ ಶಾಲೆಗೆ ಹಾಜರಾಗಬೇಕು.  ಪರಿಸ್ಥಿತಿ ಏನಾದರೂ ಬಿಗಡಾಯಿಸಿದರೆ ಮಾತ್ರ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.