ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾಣಕೋಣ(Kanakon) : ರಾ. ಹೆದ್ದಾರಿ ಮಾಷೆಂ(NH Mashem) ಸಮೀಪ ಬೈಕ್ ಸವಾರನಿಗೆ  ಎಮ್ಮೆ  ಅಡ್ಡ ಬಂದ ಪರಿಣಾಮವಾಗಿ ಸವಾರ ಸಾವನ್ನಪ್ಪಿದ ಘಟನೆ  ಸಂಭವಿಸಿದೆ. ಘಟನೆಯಲ್ಲಿ ಇನ್ನೋರ್ವ ಗಂಭೀರ  ಗಾಯಗೊಂಡಿದ್ದಾನೆ.

ಆದರ್ಶ ಪೂಜಾರಿ (23) ಮೃತ ಸವಾರನಾಗಿದ್ದು  ಕಾರವಾರದ ಕ್ರಿಮ್ಸ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾನೆ. ಇನ್ನೋರ್ವ ವಿದ್ಯಾರ್ಥಿ ರೌನಕ್ ಚಾವ್ಹಾ ಎಂದು ಗುರುತಿಸಲಾಗಿದೆ. ಇಬ್ಬರು  ಎಂಬಿಬಿಎಸ್‌(MBBS) ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದಾರೆ.

ಮಂಗಳವಾರ ರಾತ್ರಿ ಇಬ್ಬರೂ ಕಾಣಕೋಣ ಕಡೆ ಊಟಕ್ಕೆ ತೆರಳಿ ವಾಪಾಸ್  ಕಾರವಾರದತ್ತ ರಾಯಲ್ ಎನ್‌ಫೀಲ್ಡ್ (Royal Enfield) ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ, ಮಾಷೆಂ ಹತ್ತಿರದ ರಸ್ತೆಯಲ್ಲಿ ಏಕಾಏಕಿ ಎಮ್ಮೆಯೊಂದು ಅಡ್ಡ ಬಂದ ಪರಿಣಾಮ ಬೈಕ್ ಸ್ಕಿಡ್ಡಾಗಿ‌  ಇಬ್ಬರೂ ಬಿದ್ದು ಭಾರೀ ಗಾಯಗೊಂಡಿದ್ದರು.

ಸ್ಥಳೀಯರ ನೆರವಿನಿಂದ ಅವರನ್ನು ತಕ್ಷಣವೇ ಕಾಣಕೋಣ(Kanakon) ಸಮುದಾಯ ಆರೋಗ್ಯ ಕೇಂದ್ರಕ್ಕೆ (CHC) ಸಾಗಿಸಲಾಯಿತು. ಆದರೆ ವೈದ್ಯರು ಆದರ್ಶ ಪೂಜಾರಿಯನ್ನು ಮೃತರೆಂದು ಘೋಷಿಸಿದರು.   ಮೃತ ವಿದ್ಯಾರ್ಥಿ ಶವವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಗಾಯಾಳು ರೌನಕ್ ಚಾವ್ಹಾವನ್ನು ಕಾರವಾರ ಕ್ರಿಮ್ಸ್ ಆಸ್ಪತ್ರೆಗೆ(Karwar Krims Hospital) ದಾಖಲಿಸಲಾಗಿದೆ. ಇಬ್ಬರು ವಿದ್ಯಾರ್ಥಿಗಳು ಬೆಳಗಾವಿ ಗೋಕಾಕ್ ಮೂಲದವರು ಎಂದು ತಿಳಿದು ಬಂದಿದೆ.

ಅಪಘಾತ ನಡೆದ ಸ್ಥಳಕ್ಕೆ ಹೆಡ್‌ ಕಾನ್ಸ್‌ಟೇಬಲ್‌ ಆನಂದ ಕುಶಾಳಿ ಪಾಗಿ ಹಾಗೂ ಸಿಬ್ಬಂದಿಗಳು ತೆರಳಿ ಸ್ಥಳ ಪರಿಶೀಲನೆ ನಡೆಸಿದರು. ರಸ್ತೆ ಬದಿಯಲ್ಲಿ ಬೈಕ್ ಹಾಗೂ ಸತ್ತ ಎಮ್ಮೆ ಪತ್ತೆಯಾಗಿದ್ದು, ಕಾಣಕೋಣ ಪೊಲೀಸರು(Kanakon Police) ಪ್ರಕರಣ ದಾಖಲಿಸಿಕೊಂಡು  ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ : ಬರೋಬ್ಬರಿ‌ 240 ಕೋಟಿ‌ ರೂ ಲಾಟರಿ‌ ಗೆದ್ದ ಯುವಕ. ಅದೃಷ್ಟಳಾದ ತಾಯಿ‌!

ಅಂಕೋಲಾದ ಸರಕಾರಿ ಕಾಲೇಜಿನಲ್ಲಿ ಚಪಲ ಚೆನ್ನಿಗರಾಯ. ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ. ಪೋಷಕರ, ವಿದ್ಯಾರ್ಥಿಗಳ ಪ್ರತಿಭಟನೆ

ಕಾರವಾರ ರಾ. ಹೆದ್ದಾರಿಯಲ್ಲಿ ಎರಡು ಅಪಘಾತ. ಬೈಕ್ ಸವಾರರಿಗೆ ಗಾಯ.

ತರುಣಿ ಆತ್ಮಹತ್ಯೆಯ ಹಿಂದೆ ಪ್ರೇಮ ಪ್ರಕರಣದ ತಳುಕು. ಗ್ರಾಮಸ್ಥರ ಸಂಶಯ

ಖಾಸಗಿ ಬಸ್ ನಲ್ಲಿ ಕೋಟಿ ರೂ. ಹಣ ಪತ್ತೆ. ಕಾರವಾರದಲ್ಲಿ ಇಬ್ಬರ ಬಂಧನ.