ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar) : ಕಾಲು ಜಾರಿ  ನದಿಗೆ ಬಿದ್ದ ವ್ಯಕ್ತಿಯೋರ್ವ ನಾಪತ್ತೆಯಾದ ಘಟನೆ ತಾಲೂಕಿನ ಸುಂಕೇರಿ ಬಳಿ ನಡೆದಿದೆ.

ಕಡವಾಡ ಗ್ರಾಮದ ಮಾಡಿಭಾಗದ ಸಂತೋಷ ರಾಯ್ಕರ್ (35) ನಾಪತ್ತೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಶನಿವಾರ ರಾತ್ರಿ ಸುಂಕೇರಿ ಸೇತುವೆ ಬಳಿ ಸಂತೋಷ ಗಾಳ ಹಾಕಿ ಮೀನು ಹಿಡಿಯಲು ಹೋಗಿದ್ದ ಎನ್ನಲಾಗಿದೆ. ಕಿಸೆಯ ಮೊಬೈಲ್ ಕೆಳಕ್ಕೆ ಬಿದ್ದಾಗ ಹಿಡಿಯಲು ಪ್ರಯತ್ನಿಸಿದಾಗ ಸಂತೋಷ್ ನದಿಗೆ ಬಿದ್ದಿದ್ದ ಎನ್ನಲಾಗಿದೆ.

ರಾತ್ರಿ ಸ್ಥಳೀಯರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಗಳು ಹುಡುಕಾಟ ನಡೆಸಿದರೂ ಸುಳಿವು ಸಿಗಲಿಲ್ಲ. ಬೆಳಿಗ್ಗೆಯಿಂದ ಮತ್ತೆ ಹುಡುಕಾಟ ನಡೆಸಲಾಗುತ್ತಿದೆ. ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ನಾಪತ್ತೆಯಾದವನಿಗಾಗಿ ಸ್ಥಳೀಯರೊಂದಿಗೆ ಬೋಟ್ಹು ಮೂಲಕ ಹುಡುಕಾಟ ಮುಂದುವರಿಸಿದ್ದಾರೆ.

ಸಂತೋಷ್ ರಾಯ್ಕರ್ ಜಿಲ್ಲೆಯಲ್ಲಿ ಉತ್ತಮ ಕಾಮೆಂಟೇಟರ್ ಆಗಿದ್ದು ಕ್ರೀಡಾಭಿಮಾನಿಗಳ ಅಭಿಮಾನ ಸಂಪಾದಿಸಿದ್ದ. ನಾಪತ್ತೆಯಾದ ಸುದ್ದಿ ಕೇಳಿದ ಕಾರವಾರ ಯುವ ಸಮೂಹ ದಿಗ್ಬ್ರಾಂತರಾಗಿದ್ದಾರೆ.

ಇದನ್ನು ಓದಿ : ಕಾರವಾರ ಶಾಸಕ ಸತೀಶ್ ಸೈಲ್ ಆತ್ಮೀಯ ವಿಜಯ್ ಸಾವು.

ಇನ್ನೂ ಐದು ವರ್ಷದವರೆಗೆ ಜಾಗೃತೆಯಿಂದಿರಿ. ಕೋಡಿಶ್ರೀ ಭವಿಷ್ಯ.

ಭಟ್ಕಳ ಪೊಲೀಸರ ಕಾರ್ಯಾಚರಣೆ, ಮೂವರ ಬಂಧನ.