ಕಾರವಾರ: ರಾಜ್ಯ ಯಕ್ಷಗಾನ (YAKSHAGANA) ಪ್ರಶಸ್ತಿ ವಿಜೇತ, ಯಕ್ಷಗಾನ ಭಾಗವತರಾದ ದಿವಂಗತ ನಾಗೇಶ ಪೂಜಾರಿ ಇವರ ಸ್ಮರಣಾರ್ಥ ಯೋಗಪಟು ಮಾಧವ ಅಸ್ನೋಟಿಕರ ಅವರಿಗೆ ಸನ್ಮಾನಿಸಲಾಯಿತು
ದಿ. ನಾಗೇಶ ಪೂಜಾರಿ ಇವರ ಸ್ಮರಣಾರ್ಥ ಅವರ ಪುತ್ರಿ ಶ್ರೀಮತಿ ಶಕುಂತಲಾ ನಾಗೇಶ ಪೂಜಾರಿ ಅವರು ಯಕ್ಷಗಾನ ಕಲಾಸಕ್ತರಾದ ಪತಂಜಲಿ ಯೋಗ ಶಾಲೆಯ ಯೋಗಪಟು ಮಾಧವ ಅಸ್ನೋಟಿಕರ್ ಅವರನ್ನ ಪತಂಜಲಿ ಯೋಗಕಕ್ಷೆ ಕೇಂದ್ರದಲ್ಲಿ ಸನ್ಮಾನಿಸಿದರು.
ಪತಂಜಲಿ (PATNJALI)ಯೋಗ ಶಾಲೆಯ ಗುರುಗಳಾದ ಪ್ರಶಾಂತ ರೇವಣಕರರವರ ನೇತೃತ್ವದಲ್ಲಿ ಜುಲೈ ಒಂದರಂದು ಯೋಗಶಾಲೆಯ ಇತರೆ ಯೋಗಪಟುಗಳ ಉಪಸ್ಥಿತಿಯಲ್ಲಿ ಮಾಧವ ಅಸ್ನೋಟಿಕರ್ ಅವರ ಜನುಮ ದಿನದಂದು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸುರೇಶ ನಾಯ್ಕ, ವಿಷ್ಣು ಮಾಳ್ಸೆಕರ್, ಡಿ ಜಿ ನಾಯ್ಕ, ನಾಗೇಶ ಬಾಂದೇಕರ್, ಹನುಮಂತ ತಳವಾರ್, ರೇಷ್ಮಾ ವೆರ್ಣೆಕರ್, ಸುನೀತಾ ಗೋವೆಕರ್, ಸುಚಿತ್ರಾ ಗಾಂವಕರ ಮತ್ತು ಇತರರು ಇದ್ದರು.